ADVERTISEMENT

ಸ್ಮಾರ್ಟ್‌ TV ಗೇಮ್‌ ಪ್ರಿಯರಿಗಾಗಿ ಹೊಸ ಆ್ಯಪ್ ಬಿಡುಗಡೆ ಮಾಡಿದ ನೆಟ್‌ಫ್ಲಿಕ್ಸ್‌

ಜನಪ್ರಿಯ ಸ್ಟ್ರೀಮಿಂಗ್ ತಾಣ ನೆಟ್‌ಫ್ಲಿಕ್ಸ್‌ ಇದೀಗ ವಿಡಿಯೊ ಗೇಮ್‌ ಪ್ರಿಯರಿಗೆ ಸಂತಸದ ಸುದ್ದಿಯನ್ನು ನೀಡಿದೆ.

ಐಎಎನ್ಎಸ್
Published 9 ಆಗಸ್ಟ್ 2023, 6:03 IST
Last Updated 9 ಆಗಸ್ಟ್ 2023, 6:03 IST
   

ಸ್ಯಾನ್‌ಫ್ರಾನ್ಸಿಸ್ಕೊ: ಜನಪ್ರಿಯ ಸ್ಟ್ರೀಮಿಂಗ್ ತಾಣ ನೆಟ್‌ಫ್ಲಿಕ್ಸ್‌ ಇದೀಗ ವಿಡಿಯೊ ಗೇಮ್‌ ಪ್ರಿಯರಿಗೆ ಸಂತಸದ ಸುದ್ದಿಯನ್ನು ನೀಡಿದೆ.

ನೆಟ್‌ಫ್ಲಿಕ್ಸ್‌, ಸ್ಮಾರ್ಟ್‌ ಟಿವಿಗಳಲ್ಲಿ ಗೇಮ್‌ಗಳಿಗಾಗಿ ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಹೊಸ ಆ್ಯಪ್‌ ಅನ್ನು ಪರಿಚಯಿಸಿದೆ. ಶೀಘ್ರವೇ ಆಂಡ್ರ್ಯಾಯ್ಡ್‌ನಲ್ಲೂ ಲಭ್ಯವಾಗಲಿದೆ

Netflix Game Controller app ಎಂಬ ಹೆಸರು ಇದರದಾಗಿದ್ದು ಸ್ಮಾರ್ಟ್‌ ಟಿವಿಗಳಲ್ಲಿ ವಿಡಿಯೊ ಗೇಮ್ ಆಡುವವರಿಗೆ ಇದು ಹೊಸ ಅನುಭವ ನೀಡಲಿದೆ. ಇದು ಟಿವಿ ಹಾಗೂ ಮೊಬೈಲ್ ನಡುವೆ ಸಂಪರ್ಕ ಕಲ್ಪಿಸಿ ನಿಯಂತ್ರಿಸಬಹುದು ಎಂದು ನೆಟ್‌ಫ್ಲಿಕ್ಸ್‌ ಹೇಳಿದೆ.

ADVERTISEMENT

ನೆಟ್‌ಫ್ಲಿಕ್ಸ್‌ ದಕ್ಷಿಣ ಕ್ಯಾಲಿಫೊರ್ನಿಯಾದಲ್ಲಿ ದೊಡ್ಡ ಗೇಮಿಂಗ್ ಸ್ಟುಡಿಯೊ ತೆರೆಯುವಲ್ಲಿ ಕಾರ್ಯಾಚರಿಸುತ್ತಿದೆ.

ಜಾಗತಿಕವಾಗಿ ನೆಟ್‌ಫ್ಲಿಕ್ಸ್‌ನ ಚಂದಾದಾರರ ಸಂಖ್ಯೆ ಪ್ರತಿ ವರ್ಷ ಶೇ 4.9 ರ ದರದಲ್ಲಿ ಹೆಚ್ಚಳವಾಗುತ್ತಾ ಹೊರಟಿದ್ದು ಸದ್ಯ 23 ಕೋಟಿ ಚಂದಾದಾರರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.