ADVERTISEMENT

30 ದೇಶಗಳಲ್ಲಿ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಶುಲ್ಕ ಇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2023, 6:38 IST
Last Updated 26 ಫೆಬ್ರುವರಿ 2023, 6:38 IST
ನೆಟ್‌ಫ್ಲಿಕ್ಸ್‌
ನೆಟ್‌ಫ್ಲಿಕ್ಸ್‌    

ನ್ಯೂಯಾರ್ಕ್‌: ಜನಪ್ರಿಯ ಸ್ಟ್ರೀಮಿಂಗ್ ತಾಣವಾದ ನೆಟ್‌ಫ್ಲಿಕ್ಸ್‌ 30 ದೇಶಗಳಲ್ಲಿ ತನ್ನ ಚಂದಾದಾರಿಕೆ ಶುಲ್ಕವನ್ನು ಇಳಿಕೆ ಮಾಡಿರುವುದು ವರದಿಯಾಗಿದೆ.

ಕಂಪನಿ ಮುಖ್ಯಸ್ಥರು ವಾಲ್‌ಸ್ಟ್ರೀಟ್‌ಗೆ ಜರ್ನಲ್‌ಗೆ ನೀಡಿದ ಮಾಹಿತಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಪ್ರಮೋಷನ್ ಸೇರಿದಂತೆ ವಿವಿಧ ಕಾರಣಗಳಿಂದ ನಾವು 30 ದೇಶಗಳಲ್ಲಿ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಶುಲ್ಕವನ್ನು ಕಡಿಮೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈಜಿಪ್ಟ್, ಯೆಮೆನ್, ಜೋರ್ಡಾನ್, ಲಿಬಿಯಾ, ಇರಾನ್, ಕೀನ್ಯಾ, ಕ್ರೊವೇಷಿಯಾ, ಸ್ಲೊವೇನಿಯಾ, ಬಲ್ಗೇರಿಯಾ, ನಿಗರ್‌ಗುವಾ, ಈಕ್ವೆಡಾರ್, ವೆನೆಜುವೆಲಾ, ಮಲೇಷ್ಯಾ, ಇಂಡೋನೇಷ್ಯಾ, ವಿಯೆಟ್ನಾಂ, ಥೈಲ್ಯಾಂಡ್ ಮತ್ತು ಫಿಲಿಪೈನ್ಸ್ ದೇಶಗಳಲ್ಲಿ ಶುಲ್ಕ ಕಡಿಮೆ ಮಾಡಲಾಗಿದೆ. ಆದರೆ, ಭಾರತ ಈ ಪಟ್ಟಿಯಲ್ಲಿ ಸೇರಿಲ್ಲ.

ADVERTISEMENT

ಮಧ್ಯ ಮತ್ತು ದಕ್ಷಿಣ ಅಮೆರಿಕ (CSA), ಸಬ್-ಸಹಾರನ್ ಆಫ್ರಿಕಾ (SSA), ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ (MENA), ಮಧ್ಯ ಮತ್ತು ಪೂರ್ವ ಯುರೋಪ್ (CEE) ಮತ್ತು ಏಷ್ಯಾ ಪೆಸಿಫಿಕ್ (APAC) ಪ್ರದೇಶಗಳನ್ನು ಇದು ಒಳಗೊಂಡಿದೆ.

ಜಾಹೀರಾತು ಸಹಿತ ಚಂದಾದಾರಿಕೆ ಆಯ್ಕೆಯನ್ನು ಕಳೆದ ನವೆಂಬರ್ ತಿಂಗಳಿನಿಂದ ಆರಂಭಿಸುತ್ತಿರುವುದಾಗಿ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್ ತಿಳಿಸಿತ್ತು.

ಈಗಾಗಲೇ 9,70,000 ಚಂದಾದಾರರನ್ನು ನೆಟ್‌ಫ್ಲಿಕ್ಸ್ ಕಳೆದುಕೊಂಡಿದೆ. ಅಲ್ಲದೆ, ಷೇರು ಬೆಲೆ ಕೂಡ ಶೇ 63ರಷ್ಟು ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಆದಾಯದಲ್ಲಿ ಇಳಿಕೆಯಾಗಿದೆ.

ಹೀಗಾಗಿ, ಅಮೆರಿಕ, ಆಸ್ಟ್ರೇಲಿಯಾ, ಬ್ರೆಜಿಲ್, ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೊ ಮತ್ತು ಸ್ಪೇನ್‌ನಲ್ಲಿ ಮೊದಲ ಹಂತದಲ್ಲಿ ನೆಟ್‌ಫ್ಲಿಕ್ಸ್ ಹೊಸ ಚಂದಾದಾರಿಕೆ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.