ADVERTISEMENT

ರಣಬೀರ್‌ ಕಪೂರ್‌, ರಶ್ಮಿಕಾ ಮಂದಣ್ಣ ಅಭಿನಯದ ‘ಅನಿಮಲ್‌‘ ಚಿತ್ರ ನಾಳೆ ಒಟಿಟಿಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜನವರಿ 2024, 7:08 IST
Last Updated 25 ಜನವರಿ 2024, 7:08 IST
<div class="paragraphs"><p>ರಣಬೀರ್‌ ಕಪೂರ್‌ ಹಾಗೂ ನಟಿ ರಶ್ಮಿಕಾ ಮಂದಣ್ಣ</p></div>

ರಣಬೀರ್‌ ಕಪೂರ್‌ ಹಾಗೂ ನಟಿ ರಶ್ಮಿಕಾ ಮಂದಣ್ಣ

   

ಮುಂಬೈ: ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್‌ ಚಿತ್ರ ನಾಳೆ (ಜನವರಿ 26) ನೆಟ್‌ಫ್ಲಿಕ್ಸ್‌ ಒಟಿಟಿ (OTT) ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.

ಈ ಬಗ್ಗೆ ‘ನೆಟ್‌ಫ್ಲಿಕ್ಸ್‌‘ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡು ಮಾಹಿತಿ ನೀಡಿದೆ.

ADVERTISEMENT

ಅರ್ಜುನ್‌ ರೆಡ್ಡಿ ಖ್ಯಾತಿಯ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್‌’ ಸಿನಿಮಾವು ಡಿಸೆಂಬರ್‌ 1 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ತೆರೆಕಂಡಿತ್ತು.

ಚಿತ್ರದಲ್ಲಿ ರಣಬೀರ್‌ ಕಪೂರ್‌ ಪತ್ನಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅನಿಲ್‌ ಕಪೂರ್‌ ಅವರು ರಣಬೀರ್‌ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ತಂದೆ–ಮಗನ ಸಂಬಂಧ ಸೇರಿದಂತೆ ಅಪರಾಧದ ಕಥಾಹಂದರವನ್ನು ಚಿತ್ರ ಒಳಗೊಂಡಿದೆ.

ಅನಿಮಲ್‌ ಚಿತ್ರವನ್ನು ಭೂಷಣ್‌ ಕುಮಾರ್‌, ಕೃಷ್ಣ ಕುಮಾರ್‌ ಅವರ ಟಿ–ಸೀರೀಸ್‌, ಮುರಡ್‌ ಖೇತನ್‌ ಅವರ ಸಿನಿ ಒನ್‌ ಸ್ಟುಡಿಯೋ ಮತ್ತು ಪ್ರಣಯ್‌ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್‌ ನಿರ್ಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.