ADVERTISEMENT

ಪಂಜಾಬಿ ಗಾಯಕಿ ಗುರ್ಮೀತ್‌ ಬಾವಾ ನಿಧನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 15:54 IST
Last Updated 21 ನವೆಂಬರ್ 2021, 15:54 IST

ಅಮೃತಸರ: ದೀರ್ಘಕಾಲದ ಅನಾರೋಗ್ಯದಿಂದಾಗಿ ಪ್ರಸಿದ್ಧ ಪಂಜಾಬಿ ಗಾಯಕಿ ಗುರ್ಮೀತ್‌ ಬಾವಾ(77) ಅವರು ಭಾನುವಾರ ನಿಧನರಾದರು.

‘ಗುರ್ಮೀತ್‌ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಶನಿವಾರ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅಲ್ಲಿಯೇ ಕೊನೆಯುಸಿರೆಳೆದರು ಎಂದು ಅವರ ಕುಟುಂಬ ಸ್ನೇಹಿತ ಭೂಪೀಂದರ್‌ ಸಿಂಗ್‌ ಸಂಧು ಹೇಳಿದರು.

ಪಂಜಾಬ್‌ ಜನಪದ ಗಾಯಕ ಕಿರ್ಪಾಲ್‌ ಬಾವಾ ಅವರ ಪತ್ನಿ ಗುರ್ಮೀತ್‌ ಬಾವಾ ಅವರು 45 ಸೆಕೆಂಡುಗಳ ಕಾಲ ಉಸಿರನ್ನು ಹಿಡಿದು ಸುಮಧುರ ರಾಗವನ್ನು ಹಾಡುವಲ್ಲಿ ಹೆಸರುವಾಸಿಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.