ADVERTISEMENT

ಕನ್ನಡ, ತೆಲುಗು, ತಮಿಳು ಹಾಡಿನ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ಎಸ್‌ಪಿಬಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 15:16 IST
Last Updated 27 ಮಾರ್ಚ್ 2020, 15:16 IST
ಎಸ್ ಪಿ ಬಾಲಸುಬ್ರಮಣ್ಯಂ
ಎಸ್ ಪಿ ಬಾಲಸುಬ್ರಮಣ್ಯಂ   

ಬೆಂಗಳೂರು: ಕೊರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ದೇಶವ್ಯಾಪಿ ಲಾಕ್‌ಡೌನ್ ಆಗಿರುವ ಹೊತ್ತಲ್ಲಿ ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಮಣ್ಯಂ ಅವರು ಕೊರೊನಾ ಜಾಗೃತಿ ಗೀತೆಯೊಂದನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
'ಕಾಣದಂತೆ ಆಕ್ರಮಿಸಿದೆ ವೈರಿ ಕರೊನಾ,
ಅದಕೆ ನಾವೇ ಈಗ ದಾರಿಯಾಗದಿರೋಣ
ಕಾಲ ಬುಡಕೆ ಬರುವನಕ ಕಾಯದಿರೋಣ
ನಾವೆ ಇಂದು ನಮಗೊಂದು ಅವಕಾಶ ಕೊಡೋಣ' ಎಂಬ ಈ ಹಾಡಿಗೆ ಸ್ವತಃ ಎಸ್‌ಪಿಬಿಯವರೇ ಸ್ವರ ಸಂಯೋಜನೆ ಮಾಡಿದ್ದಾರೆ. ಹಾಡಿನ ಸಾಹಿತ್ಯ ಜಯಂತ್ ಕಾಯ್ಕಿಣಿಯವರದ್ದು.

ಇದೇ ರೀತಿ ತಮಿಳು ಮತ್ತು ತೆಲುಗಿನಲ್ಲಿಯೂ ಎಸ್‌ಪಿಬಿ ಕೊರೊನಾ ಜಾಗೃತಿ ಗೀತೆಯನ್ನು ಹಾಡಿದ್ದಾರೆ. ತಮಿಳು ಅವತರಣಿಕೆಯ ಸಾಹಿತ್ಯ ವೈರಮುತ್ತು ಅವರದ್ದು, ತೆಲುಗು ಅವತರಣಿಕೆಯ ಸಾಹಿತ್ಯ ವೆನ್ನೆಲಕಂಠಿಅವರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT