ADVERTISEMENT

ಒಟಿಟಿ: ‘ಸೇ ಯೆಸ್ ಟು ದಿ ಡ್ರೆಸ್’ ಡಿಸ್ಕವರಿಯಲ್ಲಿ ಬಣ್ಣದ ಉಡುಗೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 8:05 IST
Last Updated 8 ಡಿಸೆಂಬರ್ 2021, 8:05 IST
‘ಸೇ ಯೆಸ್ ಟು ದಿ ಡ್ರೆಸ್’ ಕಾರ್ಯಕ್ರಮದ ಪೋಸ್ಟರ್‌
‘ಸೇ ಯೆಸ್ ಟು ದಿ ಡ್ರೆಸ್’ ಕಾರ್ಯಕ್ರಮದ ಪೋಸ್ಟರ್‌   

ಮದುವೆಯ ಋತು ಹತ್ತಿರವಾಗುತ್ತಿದ್ದಂತೆಯೇ ಡಿಸ್ಕವರಿ ಪ್ಲಸ್‌ನಲ್ಲಿ ‘ಸೇ ಯೆಸ್ ಟು ದಿ ಡ್ರೆಸ್‌’ ಪರಿಕಲ್ಪನೆ ಅಡಿ ಭಾರತೀಯ ಆವೃತ್ತಿಯನ್ನು ರೂಪಿಸಿದೆ.

‘ವಧು-ವರರು ತಮ್ಮ ಕನಸಿನ ಉಡುಪುಗಳು ಸಿದ್ಧವಾಗುವುದನ್ನು ನೇರ ನೋಡುವ ಮತ್ತು ಅವರ ಆಶಯಗಳು ಮತ್ತು ಕಲ್ಪನೆಗಳನ್ನು ಸಾಕಾರಗೊಳಿಸುವ ಪ್ರಯತ್ನವನ್ನು ಈ ಸರಣಿಯಲ್ಲಿ ಮಾಡಲಾಗಿದೆ’ ಎಂದಿದೆ ಡಿಸ್ಕವರಿ.

ಕಾರ್ಯಕ್ರಮ ಈಗಾಗಲೇ ಡಿಸ್ಕವರಿ ಪ್ಲಸ್‌ನಲ್ಲಿ ಪ್ರಸಾರ ಆಗುತ್ತಿದೆ.ಭಾರತದ ವಿವಿಧ ಸಂಸ್ಕೃತಿ ಮತ್ತು ಸಂಪ್ರದಾಯಗಳ ಧಿರಿಸುಗಳನ್ನು ಕಲಾತ್ಮಕ ದೃಶ್ಯಗಳಲ್ಲಿ ತೋರಿಸಲಾಗಿದೆ.ನತಾಶಾ ದಲಾಲ್ ಈ ಕಾರ್ಯಕ್ರಮದಲ್ಲಿ ವಸ್ತ್ರವಿನ್ಯಾಸಗಳ ಪರಿಕಲ್ಪನೆಯನ್ನು ತೋರಿಸಿದ್ದಾರೆ. ಕಾರ್ಯಕ್ರಮದ ಭಾರತೀಯ ಆವೃತ್ತಿಯನ್ನುದಿವ್ಯಕ್ ಡಿಸೋಜಾ ಪ್ರಸ್ತುತಪಡಿಸಿದ್ದಾರೆ.

ADVERTISEMENT

ಪ್ರಸಿದ್ಧ ಫ್ಯಾಷನ್ ಡಿಸೈನರ್‌ಗಳಾದ ನೀತಾ ಲಲ್ಲಾ, ಅಭಿನವ್ ಮಿಶ್ರಾ, ವರುಣ್ ಬಹ್ಲ್, ನತಾಶಾ ದಲಾಲ್, ಸಂದೀಪ್ ಖೋಸ್ಲಾ ಸೇರಿದಂತೆ ಹಲವಾರು ಫ್ಯಾಷನ್‌ ವಿನ್ಯಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.