ADVERTISEMENT

ತುಮಕೂರು: ಇಂದಿನಿಂದ ನಾಟಕಮನೆ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 11:58 IST
Last Updated 8 ಜನವರಿ 2020, 11:58 IST
‘ಗರ್ಗಂಟಪ್ಪನ ಮಗ ಪರ್ಗಂಟ’ ನಾಟಕದ ದೃಶ್ಯ.
‘ಗರ್ಗಂಟಪ್ಪನ ಮಗ ಪರ್ಗಂಟ’ ನಾಟಕದ ದೃಶ್ಯ.   

ತುಮಕೂರು: ಇಲ್ಲಿನ ನಾಟಕಮನೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜ.9 ಮತ್ತು 10ರಂದು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕೋತ್ಸವ ಹಮ್ಮಿಕೊಂಡಿದೆ.

9ರಂದು ಸಂಜೆ 6.30ಕ್ಕೆ ನಾಟಕೋತ್ಸವಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಚಾಲನೆ ನೀಡುವರು. ಶಾಸಕ ಬಿ.ಜಿ.ಜ್ಯೋತಿ ಗಣೇಶ್ ಅಧ್ಯಕ್ಷತೆವಹಿಸುವರು. ಹಿರಿಯ ಕಲಾವಿದ ಲಕ್ಷ್ಮಣದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಆಪಿನಕಟ್ಟೆ, ನೇತ್ರ ತಜ್ಞ ಡಾ.ದಿನೇಶ್ ಕುಮಾರ್, ರಂಗನಿರ್ದೇಶಕ ತುಮಕೂರು ಶಿವಕುಮಾರ್ ಪಾಲ್ಗೊಳ್ಳುವರು.

ವಿ.ಎನ್.ಅಶ್ವತ್ಥ್ ರಚನೆಯ, ಎನ್.ಆರ್.ಪ್ರಕಾಶ್ ನಿರ್ದೇಶನದ ‘ಕೃಷ್ಣ ಸಂಧಾನ’ ಹಾಸ್ಯ ನಾಟಕ ಪ್ರದರ್ಶನವಾಗಲಿದೆ. ಎನ್.ಎ.ಬಸವೇಗೌಡ ನಾಟಕಕ್ಕೆ ರಂಗವಿನ್ಯಾಸ ಮಾಡಿದ್ದಾರೆ.

ADVERTISEMENT

10ರಂದು ಸಂಜೆ 6.30ಕ್ಕೆ ಸಮಾರೋಪ ನಡೆಯಲಿದೆ. ಹಿರಿಯ ರಂಗಕರ್ಮಿ ಗೋಪಾಲ ಕೃಷ್ಣ ನಾಯರಿ ಅಧ್ಯಕ್ಷತೆವಹಿಸುವರು. ಬಿ.ಸಿ.ಶೈಲಾ ನಾಗರಾಜ್, ನಾಗರತ್ನ ಚಂದ್ರಪ್ಪ, ಜಿ.ಕೃಷ್ಣಪ್ಪ, ಬಿ.ಪರಶುರಾಮ್ ಪಾಲ್ಗೊಳ್ಳುವರು. ಅಂದು ಸುರೇಶ್ ಆನಗಳ್ಳಿ ನಿರ್ದೇಶನದ ‘ಗರ್ಗಂಟಪ್ಪನ ಮಗ ಪರ್ಗಂಟ’ ನಾಟಕ ಪ್ರದರ್ಶನ ನಡೆಯಲಿದೆ. ಬೆಂಗಳೂರಿನ ಅನೇಕಾ ರಂಗಕಲಾವಿದರು ಪ್ರಸ್ತುತಪಡಿಸುವರು.

ನಾಟಕಕ್ಕೆ ಉಚಿತ ಪ್ರವೇಶ. ಮಾಹಿತಿಗೆ ‘ನಾಟಕಮನೆ’ ಸಂಚಾಲಕರಾದ ಮಹಾಲಿಂಗು 9448064954.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.