ADVERTISEMENT

ಸಂಕ್ರಾಂತಿ ರಂಗ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 20:00 IST
Last Updated 16 ಜನವರಿ 2019, 20:00 IST
ಪಳೆಂಕರು ನಾಟಕದ ದೃಶ್ಯ
ಪಳೆಂಕರು ನಾಟಕದ ದೃಶ್ಯ   

ಐತಿಹಾಸಿಕ ಹಾಗೂ ಹಾಸ್ಯ ನಾಟಕಗಳ ರಂಗೋತ್ಸವದೊಂದಿಗೆ ಸಂಗೀತ, ನೃತ್ಯ, ಉಪನ್ಯಾಸ, ವಿಚಾರ ಸಂಕಿರಣಗಳನ್ನೊಳಗೊಂಡ ಎರಡು ದಿನಗಳ ಜನವರಿ 17 ಮತ್ತು 18ರಂದು ‘ಸಂಕ್ರಾಂತಿ ರಂಗ ಸಂಭ್ರಮ’ ಕಾರ್ಯಕ್ರಮ ನಗರದಲ್ಲಿ ಆಯೋಜನೆಗೊಂಡಿದೆ.

ಗುರುವಾರ, ಶುಕ್ರವಾರ ಸಂಜೆ 6ರಿಂದ ಟಿ.ಪಿ.ಕೈಲಾಸಂ ರಂಗ ಮಂಟಪ, ಬಾಲಗಂಗಾಧರ ತಿಲಕ್‌ ಪ್ರೌಢಶಾಲೆಯ ಆವರಣ, ಲಗ್ಗೆರೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

‘ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘ’ ಈ ಕಾರ್ಯಕ್ರಮವನ್ನು ಆಯೋಜಿಸಿದೆ. 33 ವರ್ಷಗಳಿಂದ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಈ ಸಂಘ ತೊಡಗಿಕೊಂಡಿದೆ. ರಂಗಭೂಮಿಗೆ ಇಲ್ಲಿಯವರೆಗೆ 105 ನಾಟಕಗಳನ್ನು ಕೊಡುಗೆಯಾಗಿ ನೀಡಿದೆ. 1350ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ.

ADVERTISEMENT

600ಕ್ಕೂ ಹೆಚ್ಚು ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಸಂಕ್ರಾಂತಿ ರಂಗ ಸಂಭ್ರಮ ಆಯೋಜಿಸಲಾಗಿದೆ. 17 ರಂದು ಅ.ದೇವೇಗೌಡ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೆ. ಗಂಗ
ಭೈರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಸಿದ್ದೇಗೌಡ, ರಮೇಶ್‌, ಮಂಜುಳಾ ನಾಯ್ಡು, ಡಾ.ಕೆ.ಎ. ಯುವರಾಜ್‌, ಡಾ.ಕೆ. ವೆಂಕಟೇಶ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗುರುವಾರ ಸಂಜೆ 6.30ಕ್ಕೆ ಸಂಘದ ವತಿಯಿಂದ ಡಾ.ಎಸ್‌.ಕೆ. ಕರೀಂಖಾನ್‌ ಸಾಹಿತ್ಯ ಹಾಗೂ ಆಂಜನೇಯ ಅವರ ರಂಗರೂಪದ ’ಅವತಿ ನಾಡಪ್ರಭು’ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ಇದಕ್ಕೆ ಎನ್‌. ಕಿರಣ್‌ ಕುಮಾರಿ ನಿರ್ದೇಶನ ಇದೆ.

ಯು.ಗೋವಿಂದೇಗೌಡ ರಚನೆ ಮತ್ತು ನಿರ್ದೇಶನದ ‘ವಿಕಟ ವಿಲಾಸ’ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಶುಕ್ರವಾರ, ಸಮಾರೋಪ ಸಮಾರಂಭದಲ್ಲಿ ಮುದ್ದಯ್ಯನಪಾಳ್ಯದ ರಂಗ ಪರಂಪರೆ ಟ್ರಸ್ಟ್‌ ವತಿಯಿಂದ ಡಾ.ಕವಿತಾಕೃಷ್ಣ ರಚನೆಯ, ಬಿ.ಎ. ಧನ್ವಂತ್ರಿ ನಿರ್ದೇಶನದಲ್ಲಿ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನಾಟಕ ಪ್ರದರ್ಶನಗೊಳ್ಳಲಿದೆ. ಯು.ಗೋವಿಂದೇಗೌಡ ನಿರ್ದೇಶನದಲ್ಲಿ ‘ಪಳೆಂಕರು ಹಾಸ್ಯ ನಾಟಕ’ಗಳು ಪ್ರದರ್ಶನಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.