ADVERTISEMENT

ಅತ್ಯಾಚಾರ, ಬ್ಲ್ಯಾಕ್‌ಮೇಲ್ ಆರೋಪ: ನಟ ಕರಣ್ ಒಬೆರಾಯ್ ಬಂಧನ

ಪಿಟಿಐ
Published 6 ಮೇ 2019, 12:02 IST
Last Updated 6 ಮೇ 2019, 12:02 IST
   

ಮುಂಬೈ: ಅತ್ಯಾಚಾರ ಹಾಗೂ ಬ್ಲ್ಯಾಕ್‌ಮೇಲ್ ಆರೋಪದ ಮೇಲೆ ನಟ, ರೂಪದರ್ಶಿ ಕರಣ್ ಒಬೆರಾಯ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

2016ರಿಂದಲೂ ಸಂಪರ್ಕದಲ್ಲಿದ್ದ ಒಬೆರಾಯ್ ಮದುವೆಯಾಗುವುದಾಗಿ ವಂಚಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯು ದೂರು ದಾಖಲಿಸಿದ್ದಾರೆ.

ಅತ್ಯಾಚಾರ ಎಸಗಿರುವುದಲ್ಲದೇ ತಮ್ಮ ಬಳಿ ಕೆಲವು ವಿಡಿಯೊಗಳನ್ನು ಇರಿಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದಲ್ಲಿ ವಿಡಿಯೊಗಳನ್ನು ಬಹಿರಂಗ ಪಡಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

ADVERTISEMENT

ಮಹಿಳೆಯ ದೂರಿನನ್ವಯ ಒಬೆರಾಯ್ ಅವರನ್ನು ಸೆಕ್ಷನ್ 376 (ಅತ್ಯಾಚಾರ), 384 ( ಸುಲಿಗೆ) ಕಾಯ್ದೆ ಅಡಿಯಲ್ಲಿ ಭಾನುವಾರ ಬಂಧಿಸಲಾಗಿದೆ ಎಂದು ಒಶಿವರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಶೈಲೇಶ್ ಪಸಲ್ವಾದ್ ಹೇಳಿದ್ದಾರೆ.

ಒಬೆರಾಯ್, ‘ಜಸ್ಸಿ ಜೈಸಿ ಕೋಯಿ ನಹೀ’, ’ಇನ್‌ಸೈಡ್ ಎಡ್ಜ್’ ಸೇರಿದಂತೆ ಹಲವು ಶೋಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕಾರು, ಬೈಕ್ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.