ADVERTISEMENT

‘ಇಂಟು ದಿ ವೈಲ್ಡ್‘ ಟೀಸರ್‌: ಬಂಡಿಪುರದಲ್ಲಿ ತಲೈವಾ ರಜನಿ, ಬೇರ್‌ ಗ್ರಿಲ್ಸ್ ಅಬ್ಬರ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 6:55 IST
Last Updated 28 ಫೆಬ್ರುವರಿ 2020, 6:55 IST
   

ನವದೆಹಲಿ: ತಲೈವಾರಜನಿಕಾಂತ್‌ ಹಾಗೂಬೇರ್‌ ಗ್ರಿಲ್ಸ್ ಬಂಡಿಪುರ ಅಭಯಾರಣ್ಯದಲ್ಲಿ ಮಾಡಿರುವ ಮೋಡಿಯ ಟೀಸರ್‌ (ಪ್ರೊಮೊಕಟ್‌) ಬಿಡುಗಡೆಯಾಗಿದ್ದು ರಜನಿ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.

ಡಿಸ್ಕವರಿ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾದ‘ಮ್ಯಾನ್‌ ವರ್ಸಸ್ ವೈಲ್ಡ್‌’ ನ ನಿರೂಪಕಬೇರ್‌ ಗ್ರಿಲ್ಸ್ ಹಾಗೂದಕ್ಷಿಣ ಭಾರತದ ಸೂಪರ್‌ ಸ್ಟಾರ್‌ಗಳಲ್ಲಿ ಒಬ್ಬರಾದ ರಜನಿಕಾಂತ್‌ ಜೋಡಿಯ‘ಇಂಟು ದಿ ವೈಲ್ಡ್‘ ಕಾರ್ಯಾಕ್ರಮ ಮಾರ್ಚ್‌ 23ರಂದು ರಾತ್ರಿ 8 ಗಂಟೆಗೆ ಡಿಸ್ಕವರಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ರಜನಿ ಸಿನಿಮಾಗಳ ಮಾದರಿಯಲ್ಲೇ‘ಇಂಟು ದಿ ವೈಲ್ಡ್‘ ಕಾರ್ಯಕ್ರಮದಟೀಸರ್‌ ಬಿಡುಗಡೆ ಮಾಡಿರುವುದು ವಿಶೇಷ.40 ಸೆಕೆಂಡ್‌ಗಳ ಈ ಟೀಸರ್‌ನಲ್ಲಿ ತಲೈವಾಸ್ಟೈಲ್‌ ಅನ್ನು ಕಣ್ತುಂಬಿಕೊಳ್ಳಬಹುದು. ಬಂಡಿಪುರದಲ್ಲಿನ ಜಿಂಕೆಗಳು, ಹುಲಿಗಳು, ಆನೆಗಳನ್ನು ಕಾಣಬಹುದು.

ADVERTISEMENT

ಬೆಳ್ಳಿತೆರೆ ಪ್ರವೇಶಿಸಿದ ನಾಲ್ಕು ದಶಕಗಳ ನಂತರ ರಜನಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಜಲಸಂರಕ್ಷಣೆಯ ಸಂದೇಶವನ್ನು ದೇಶದ ಪ್ರತಿ ಮನೆಗೂ ತಲುಪಿಸುವುದು‘ಇಂಟು ದಿ ವೈಲ್ಡ್‘ ಕಾರ್ಯಕ್ರಮದ ಮುಖ್ಯ ಉದ್ದೇಶ. ಪರಿಚಯ ಇಲ್ಲದಿರುವ ದಟ್ಟ ಅರಣ್ಯದಲ್ಲಿ ವ್ಯಕ್ತಿಯೊಬ್ಬ ಒಂಟಿಯಾಗಿ ಸಂಚರಿಸುತ್ತ, ಅಲ್ಲಿ ಎದುರಾಗುವ ಸಂಕಷ್ಟಗಳನ್ನು ದಾಟಿ, ಜೀವಿಸಬಹುದಾದ ಸಾಧ್ಯತೆಗಳನ್ನು ಈ ಕಾರ್ಯಕ್ರಮದಲ್ಲಿ ತೋರಿಸಿಕೊಡಲಾಗಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ, ಖ್ಯಾತ ಟೆನಿಸ್‌ ಆಟಗಾರ ರೋಜರ್‌ ಫೆಡರರ್‌, ಮಿಷೆಲ್‌ ಬಿ ಜಾರ್ಡನ್‌, ಜ್ಯಾಕ್‌ ಎಫ್ರಾನ್‌ ಸೇರಿದಂತೆ ವಿಶ್ವದ ಹಲವು ಗಣ್ಯರು ಈ ಅಡ್ವೆಂಚರ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಂಡಿದ್ದರು.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಗ್ರಿಲ್ಸ್‌ನ ಜೊತೆಗೆ ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನದಲ್ಲಿ ಭರ್ಜಿ ಹಿಡಿದು ಹೆಜ್ಜೆ ಹಾಕಿದ್ದರು. ಹುಲಿಗಳ ಸಂಖ್ಯೆ ಹೆಚ್ಚಿರುವ ಈ ಕಾನನದಲ್ಲಿ ಮೋದಿ ಅವರು ತಮ್ಮ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟಿದ್ದರು. ವಿಶ್ವದ 180 ದೇಶಗಳಲ್ಲಿ ಏಕಕಾಲಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.