ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್ಬಾಸ್ ರಿಯಾಲಿಟಿ ಶೋ ಕಿರುತೆರೆಯಲ್ಲಿ ಜನಪ್ರಿಯವಾಗಿದ್ದು ಕೊನೆಯ ಹಂತ ತಲುಪಿದೆ.
ಬಿಗ್ಬಾಸ್ ಮನೆಯಲ್ಲಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಈ ಬಾರಿ ಪ್ರಬಲ ಸ್ಪರ್ಧಿಯಾಗಿದ್ದು ಅವರು ಸದ್ಯ ಕ್ಯಾಫ್ಟನ್ ಆಗಿದ್ದಾರೆ. ಶಮಿತಾ ಈ ಸಲ ಗೆಲ್ಲಲ್ಲಿದ್ದಾರೆ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವಾರ ಬಿಗ್ಬಾಸ್ ಮನೆಗೆ ಬಂದಿದ್ದ ಶಮಿತಾ ಗೆಳತಿ ನೇಹಾ ಭಾಸಿನ್ ನೇರವಾಗಿವೇದಿಕೆಗೆ ಬಂದಿದ್ದರು. ಮನೆಯ ಸದಸ್ಯರು ಹಾಗೂ ಸಲ್ಲೂ ಬಾಯ್ ಜತೆ ಕೆಲ ಕಾಲ ಹರಟೆ ಹೊಡೆದಿದ್ದರು.
ಈ ನಡುವೆ ಶಮಿತಾಗೆ ಶಾಕ್ ನೀಡಿದ ಭಾಸಿನ್, ರಾಕೇಶ್ ಕೂಡ ನಿನ್ನ ಬಗ್ಗೆ ಕೇಳುತ್ತಿರುತ್ತಾರೆ, ಈ ಮಧ್ಯೆ ಅವರು ಹೊಸ ಗರ್ಲ್ಫ್ರೆಂಡ್ ಹುಡುಕಿಕೊಂಡಿದ್ದಾರೆ ಎಂದು ಶಮಿತಾಗೆ ಹೇಳಿದರು. ಈ ವಿಚಾರ ಕೇಳಿ ಶಮಿತಾ ಒಂದು ಕ್ಷಣ ಶಾಕ್ ಆದರು. ತಕ್ಷಣವೆ ನಾನು ತಮಾಷೆಗೆ ಹೇಳಿದ್ದು ಎಂದು ಭಾಸಿನ್ ನಕ್ಕರು.
ತಕ್ಷಣ ಪ್ರತಿಕ್ರಿಯಿಸಿದ ಶಮಿತಾ ’ಹೊ, ದಯವಿಟ್ಟು ಹೃದಯಾಘಾತ ಮಾಡಿಸಬೇಡ’ ಎಂದರು. ಆಗ ಸಲ್ಮಾನ್ ಖಾನ್ ಕೂಡ ನಕ್ಕರು.
ಶಮಿತಾ ಹಾಗೂ ರಾಕೇಶ್, ನಿರ್ದೇಶಕಕರಣ್ ಜೋಹರ್ ನಡೆಸಿಕೊಟ್ಟ ‘ಬಿಗ್ ಬಾಸ್ ಒಟಿಟಿ’ಯಲ್ಲಿ ಭಾಗವಹಿಸಿದ್ದರು. ಮನೆಯಲ್ಲಿ ಇಬ್ಬರ ಗೆಳೆತನಪ್ರೀತಿಗೆ ತಿರುಗಿತ್ತು. ನಂತರಪ್ರೀತಿಯಲ್ಲಿಇರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದರು.
ಬಿಗ್ ಬಾಸ್ 15ನೇ ಆವೃತ್ತಿಗೆ ಶಮಿತಾ ಮೊದಲು ಮನೆ ಒಳಗೆ ಬಂದರೇ, ವೈಲ್ಡ್ ಕಾರ್ಡ್ ಮೂಲಕ ರಾಕೇಶ್ ಬಂದಿದ್ದರು. ಆದರೆ ಅವರು ಮನೆಯಲ್ಲಿ ಬಹಳ ದಿನ ಉಳಿಯದೇ ಎಲಿಮಿನೇಟ್ ಆದರು.
ಜನವರಿ ಕೊನೆ ವಾರದಲ್ಲಿ ಈ ರಿಯಾಲಿಟಿ ಶೋ ಮುಗಿಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.