ADVERTISEMENT

BBK12 |ಅಡಚಣೆಗಾಗಿ ಕ್ಷಮಿಸಿ: ವಿಶೇಷ ಪೋಸ್ಟ್‌ ಹಂಚಿಕೊಂಡ ಕಲರ್ಸ್‌ ಕನ್ನಡ ವಾಹಿನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2025, 9:29 IST
Last Updated 8 ಅಕ್ಟೋಬರ್ 2025, 9:29 IST
<div class="paragraphs"><p>ಬಿಗ್‌ಬಾಸ್‌ ಸ್ಟರ್ಧಿಗಳು</p></div>

ಬಿಗ್‌ಬಾಸ್‌ ಸ್ಟರ್ಧಿಗಳು

   

ಚಿತ್ರ: ಇನ್‌ಸ್ಟಾಗ್ರಾಮ್

ಕನ್ನಡದ ಬಿಗ್‌ಬಾಸ್‌ ಮನೆ ಈಗ ಖಾಲಿಯಾಗಿದೆ. ಸ್ಪರ್ಧಿಗಳಿಂದ ತುಂಬಿ ತುಳುಕುತ್ತಿದ್ದ ಬಿಗ್‌ಬಾಸ್‌ ಮನೆ ಬಿಕೋ ಎನ್ನುತ್ತಿದೆ. ಜಾಲಿವುಡ್‌ ಸ್ಟುಡಿಯೋವನ್ನು ಸೀಜ್‌ ಮಾಡಲಾಗಿದ್ದು, ಹೀಗಾಗಿ ಬಿಗ್‌ಬಾಸ್‌ ಶೂಟಿಂಗ್‌ ಸ್ಥಗಿತಗೊಂಡಿದೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳನ್ನು ಸಮೀಪದ ಈಗಲ್ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಿದ್ದಾರೆ.

ADVERTISEMENT

ಇನ್ನು, ಈ ಘಟನೆಯ ಬೆನ್ನಲ್ಲೆ ನಿನ್ನೆ (ಮಂಗಳವಾರ) ರಾತ್ರಿ ಪ್ರಸಾರವಾಗಬೇಕಿದ್ದ ಸಂಚಿಕೆಯಲ್ಲಿ ಕೊಂಚ ವ್ಯತ್ಯಯ ಆಗಿದೆ. ಬಿಗ್‌ಬಾಸ್‌ ಕಾರ್ಯಕ್ರಮ ನೋಡಲು ಸಿದ್ಧರಾಗಿದ್ದ ವೀಕ್ಷಕರು ಕೆಲ ಕಾಲ ಗೊಂದಲಗೊಂಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿ ಪೋಸ್ಟ್‌ನಲ್ಲಿ ಏನಿದೆ?

‘ಅನಿರೀಕ್ಷಿತ ಕಾರಣಗಳಿಂದಾಗಿ ಜಿಯೋ ಹಾಟ್‌ಸ್ಟಾರ್‌ನಲ್ಲಿ 'ಬಿಗ್‌ಬಾಸ್‌'ನ ಇಂದಿನ ಸಂಚಿಕೆಯ ಪ್ರಕಟಣೆಯ ಸಮಯದಲ್ಲಿ ವ್ಯತ್ಯಯ ಸಂಭವಿಸಿದೆ. ಈ ಅಡಚಣೆಗಾಗಿ ಕ್ಷಮೆ ಕೋರುತ್ತೇವೆ. ಇಂದಿನ ಸಂಚಿಕೆ ಈಗ ಜಿಯೋಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ’ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪಪ್ರಜಾವಾಣಿ ಚಿತ್ರ

ಅಸಲಿಗೆ ಆಗಿದ್ದೇನು?

ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸಂಸ್ಥೆಯು ಮನರಂಜನೆ ಹಾಗೂ ಇತರ ಸಾಹಸ ಚಟುವಟಿಕೆ ನಡೆಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಮಂಡಳಿಯು ಜಾಲಿವುಡ್‌ನಲ್ಲಿ ನಡೆಯುತ್ತಿರುವ ಚಟುವಟಿಕೆ ಸ್ಥಗಿತಗೊಳಿಸಿ, ಪೊಲೀಸ್ ಭದ್ರತೆಯಲ್ಲಿ ಜಾಲಿವುಡ್‌ಗೆ ಬೀಗ ಹಾಕಿದ್ದಾರೆ.

ಚಿತ್ರ: ಕಲರ್ಸ್ ಕನ್ನಡ

ಬಿಗ್‌ಬಾಸ್‌ ಮನೆಯಲ್ಲಿ 17 ಸ್ಪರ್ಧಿಗಳು

ಸದ್ಯ ಬಿಗ್‌ಬಾಸ್‌ ಮನೆಯಲ್ಲಿ ಒಟ್ಟು 17 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಕಾಕ್ರೋಚ್‌ʼ ಸುಧಿ, ಜಾಹ್ನವಿ, ಮಲ್ಲಮ್ಮ, ಅಶ್ವಿನಿ, ಧನುಷ್, ರಕ್ಷಿತಾ ಶೆಟ್ಟಿ, ಮಂಜು ಭಾಷಿಣಿ, ಧ್ರುವಂತ್, ರಾಶಿಕಾ ಶೆಟ್ಟಿ, ಕಾವ್ಯ ಶೈವ, ಸ್ಪಂದನಾ ಸೋಮಣ್ಣ, ಗಿಲ್ಲಿ ನಟ, ಮಾಳು ನಿಪನಾಳ, ಡಾಗ್‌ ಸತೀಶ್, ಚಂದ್ರಪ್ರಭ, ಅಶ್ವಿನಿ, ಅಭಿಷೇಕ್‌ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.