ಬಿಗ್‌ಬಾಸ್ ಸೀಸನ್ 12 ಶುರುವಾಗಿ ಕೇವಲ ಒಂದು ವಾರ ಕಳೆದಿದೆ. ಅಷ್ಟರಲ್ಲೇ ಬಿಗ್‌ಬಾಸ್ ಮನೆಯಲ್ಲಿರೋ ಸ್ಪರ್ಧಿಗಳ ಮಧ್ಯೆ ವೈಮನಸ್ಸು ಮೂಡಿದೆ. ಕಿರುಚಾಟ, ಗುದ್ದಾಟ, ಬೇಸರ ಹೀಗೆ ನಾನಾ ವಿಚಾರಗಳಿಂದ ಬಿಗ್‌ಬಾಸ್ ಮನೆ ಸುದ್ದಿಯಲ್ಲಿದೆ.
ಇದೀಗ ಮಂಜು ಭಾಷಿಣಿ ಆಡಿದ ಒಂದೇ ಮಾತಿಗೆ ಅಶ್ವಿನಿ ಗೌಡ ಅವರು ಬಿಗ್‌ಬಾಸ್ ಮನೆಯಲ್ಲಿ ಕಣ್ಣೀರಿಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಆ ಪ್ರೊಮೋದಲ್ಲಿ ಮಂಜು ಭಾಷಿಣಿ ಮಾತಿಗೆ ಅಶ್ವಿನಿ ಗೌಡ ಅವರು ಕಣ್ಣೀರಿಡುವ ಸ್ಥಿತಿ ನಿರ್ಮಾಣಗೊಂಡಿದೆ.
ಪ್ರೊಮೋದಲ್ಲಿ ಮಂಜು ಭಾಷಿಣಿ, ಗಾಂಚಾಲಿ ಅಂತ ಯಾರಿಂದಲೂ ಅನಿಸಿಕೊಳ್ಳುವಂತಿಲ್ಲ ಬಿಗ್‌ಬಾಸ್ ಎಂದಿದ್ದಾರೆ. ಮಂಜು ಭಾಷಿಣಿ ಅಷ್ಟೊಂದು ಓವರ್ ಆಗಿ ಆಡೋ ಅವಶ್ಯಕತೆ ಇರಲಿಲ್ಲ. ನನಗೆ 3 ದಿನಗಳಿಂದ ಹುಷಾರಿಲ್ಲ, ಮಾತಾಡಿ ನಾನು ಅನಿಸಿಕೊಳ್ಳುತ್ತೇನೆ. ಆದರೆ, ಒಬ್ಬರನ್ನು ಹಂಗಿಸುವಂತಹ ಅವಶ್ಯಕತೆ ಇಲ್ಲ ಎಂದು ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.