ಸೂರಜ್ ಸಿಂಗ್, ರಘು, ರಿಷಾ, ಅಶ್ವಿನಿ ಗೌಡ
ಚಿತ್ರ: ಜಿಯೋ ಹಾಟ್‌ಸ್ಟಾರ್
ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿ ಆರಂಭವಾಗಿ ಮೂರು ವಾರಗಳು ಕಳೆದಿವೆ. ಈ ಬಾರಿಯ ಬಿಗ್‌ಬಾಸ್ ಅನಿರೀಕ್ಷಿತವಾದದ್ದನ್ನು ನಿರೀಕ್ಷಿಸಿ (Expect The Unexpected) ಎಂಬ ಪರಿಕಲ್ಪನೆಯೊಂದಿಗೆ ಆರಂಭವಾಗಿದೆ. ಮೂರು ವಾರಗಳು ಕಳೆದರೂ ಬಿಗ್‌ಬಾಸ್ ಮನೆಯಲ್ಲಿ ಇನ್ನು ಯಾರೂ ಕ್ಯಾಪ್ಟನ್ ಆಗಿಲ್ಲ. ಹೀಗಾಗಿ ಈ ಬಾರಿ ಬಿಗ್‌ಬಾಸ್ ಮನೆಯ ಮೊದಲ ಕ್ಯಾಪ್ಟನ್ ಯಾರಾಗಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಮನೆ ಮಾಡಿದೆ.
ಅಷ್ಟೇ ಅಲ್ಲದೇ ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಆಗುವ ಅಭ್ಯರ್ಥಿಗೆ ವಿಶೇಷ ಅಧಿಕಾರ ಸಿಗಲಿದೆ. ಒಂದು ವಾರ ಇಮ್ಯೂನಿಟಿ ಜೊತೆಗೆ ಮುಂದಿನ ವಾರ ಕ್ಯಾಪ್ಟನ್ಸಿ ಓಟಕ್ಕೆ ನೇರವಾಗಿ ಆಯ್ಕೆ ಆಗಲಿದ್ದಾರೆ. ಹೀಗಾಗಿ ಎಲ್ಲಾ ಸ್ಪರ್ಧಿಗಳ ಕಣ್ಣು ಕ್ಯಾಪ್ಟನ್ಸಿ ಓಟದ ಮೇಲೆ ನೆಟ್ಟಿದೆ. ಆದರೆ, ಮೂರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಬಿಗ್‌ಬಾಸ್ ಮನೆಯ ಸದಸ್ಯರ ಪೈಕಿ 15 ಮಂದಿ ಮಾತ್ರ ಕ್ಯಾಪ್ಟನ್ಸಿ ಓಟಕ್ಕೆ ಸ್ಪರ್ಧಿಸಬೇಕು. ಈಗಿರುವ ಸ್ಪರ್ಧಿಗಳಲ್ಲಿ ಅನರ್ಹರಾದ ಇಬ್ಬರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗೆ ಇಡಬೇಕು ಎಂದು ಹೇಳಿದರು. ಹೀಗಾಗಿ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಚರ್ಚಿಸಿ ಕ್ಯಾಪ್ಟನ್ಸಿಯಿಂದ ಅಶ್ವಿನಿ ಗೌಡ ಹಾಗೂ ಕಾಕ್ರೋಚ್ ಸುಧಿ ಇಬ್ಬರನ್ನು ಆಚೆ ಇಟ್ಟಿದ್ದಾರೆ.
ಆಗ ರಿಶಾ, ‘ಈಗಾಗಲೇ ಕಾಕ್ರೂಚ್ ಸುಧಿಗೆ ಒಂದು ವಾರದ ಇಮ್ಯೂನಿಟಿ ಸಿಕ್ಕಿರುವ ಕಾರಣ ಹಾಗೂ ಮುಂದಿನ ವಾರಕ್ಕೆ ಇಮ್ಯೂನಿಟಿ ಸಿಗಬಾರದು. ಅದಕ್ಕಾಗಿ ಕಾಕ್ರೂಚ್ ಸುಧಿಯನ್ನು ಕ್ಯಾಪ್ಟನ್ಸಿ ಓಟದಿಂದ ಆಚೆ ಇಡಲು ನಿರ್ಧರಿಸಿದ್ದೇವೆ’ ಎಂದರು. ಅದಾದ ಬಳಿಕ ಅಶ್ವಿನಿ ಗೌಡ ಹೆಸರನ್ನು ಆಯ್ಕೆ ಮಾಡಿದ ರಿಷಾ, ‘ಈಗಾಗಲೇ ಅಶ್ವಿನಿ ಅವರ ನಾಯಕತ್ವವನ್ನು ನೋಡಿದ್ದೇವೆ. ಅವರಿಗೆ ಮತ್ತೆ ಅಧಿಕಾರ ಕೊಡುವುದು ಬೇಡ’ ಎಂದು ಕ್ಯಾಪ್ಟನ್ಸಿ ಓಟದಿಂದ ಹೊರಗೆ ಇಟ್ಟರು.
ಈ ವಿಷಯವನ್ನು ಹೇಳುತ್ತಿದ್ದಂತೆ ಅಶ್ವಿನಿ ಗೌಡ ಎದ್ದು ಹೋದರು. ಇದಾದ ಬಳಿಕ ಅಶ್ವಿನಿ ಗೌಡ ಅವರು ಜಾಹ್ನವಿ ಮುಂದೆ ಕಣ್ಣೀರು ಹಾಕಿದರು. ‘ನಾನು ಎರಡು ವಾರದಿಂದ ಚೆನ್ನಾಗಿ ಆಡುತ್ತಿದ್ದೇನೆ. ನನಗೆ ಕಿಚ್ಚನ ಚಪ್ಪಾಳೆ ಸಿಗಬಹುದು ಎಂದುಕೊಂಡಿದ್ದೆ. ಆದರೆ ಅದು ಸಿಗಲಿಲ್ಲ. ಈಗ ಕ್ಯಾಪ್ಟನ್ಸಿ ಓಟದಿಂದ ಹೊರಗೆ ಇಡಲಾಗಿದೆ. ಕುದುರೆಯನ್ನು ರೇಸಿಗೆ ಬಿಡದೆ ಅದರ ಶಕ್ತಿ ತಿಳಿದುಕೊಳ್ಳುವುದು ಹೇಗೆ? ಇದು ಅನ್ಯಾಯ’ ಎಂದು ಕಣ್ಣೀರಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.