
ಅಶ್ವಿನಿ ಗೌಡ
ಚಿತ್ರ: ಇನ್‌ಸ್ಟಾಗ್ರಾಮ್
ಮೊದಲ ಎರಡು ವಾರದಲ್ಲಿ ಬಿಗ್‌ಬಾಸ್ ಮನೆಯಲ್ಲಿ ರಾಜಮಾತೆಯಂತೆ ಮೆರೆಯುತ್ತಿದ್ದ ಅಶ್ವಿನಿ ಗೌಡಗೆ ಈಗ ಕಳಪೆ ಪಟ್ಟ ಸಿಕ್ಕಿದೆ. ಕಳಪೆಯಾದರೂ ಹೊಸ ಆಟವನ್ನು ಕೈಗೆತ್ತಿಕೊಂಡ ಅಶ್ವಿನಿ ಗೌಡ ಜೈಲಿನಲ್ಲಿ ಬಿಗ್‌ಬಾಸ್ ಮನೆಯ ಮೂಲ ನಿಯಮವನ್ನು ಉಲ್ಲಂಘಿಸಿದ್ದಾರೆ.
ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬರುತ್ತಿದ್ದಂತೆ ಅಸಲಿ ಆಟ ಶುರುವಾಗಿದೆ. ವೈಲ್ಡ್ ಕಾರ್ಡ್ ಸ್ಪರ್ಧಿ ರಘು ಬಿಗ್‌ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಬಿಗ್‌ಬಾಸ್ ಕೊಟ್ಟ ಕಠಿಣ ಟಾಸ್ಕ್ ಗೆದ್ದು ಕ್ಯಾಪ್ಟನ್ ಪಟ್ಟ ಅಲಂಕರಿಸಿದ್ದಾರೆ.
ಕ್ಯಾಪ್ಟನ್ ಆಗುತ್ತಿದ್ದಂತೆ ರಘು, ಅಶ್ವಿನಿ ಗೌಡಗೆ ಕಳಪೆ ಪಟ್ಟ ಕೊಟ್ಟಿದ್ದಾರೆ. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ರಘು ಅಶ್ವಿನಿ ಗೌಡಗೆ ಈ ವಾರದ ಕಳಪೆ ಎಂದು ಹೆಸರನ್ನು ಘೋಷಿಸುತ್ತಾರೆ. ಆ ಕೂಡಲೇ ಅಶ್ವಿನಿ ಗೌಡ ಕೋಪಕೊಂಡು ಜೈಲಿಗೆ ಹೋಗುತ್ತಾರೆ.
ಆದರೆ, ಜೈಲಿಗೆ ಹೋಗುತ್ತಿದ್ದಂತೆ ಬಿಗ್‌ಬಾಸ್ ಮನೆಯ ಮೂಲ ನಿಯಮವನ್ನೇ ಮೀರಿದ್ದಾರೆ. ಕಳಪೆ ಪಟ್ಟ ಸ್ವೀಕರಿಸಿ ಜೈಲಿಗೆ ಹೋದ ಸದಸ್ಯರು ಆಚೆ ಬರುವಂತಿಲ್ಲ. ಮನೆಯವರ ಹಾಗೇ ಊಟ ಮಾಡುವಂತಿಲ್ಲ. ಕೇವಲ ಬಿಗ್‌ಬಾಸ್ ನೀಡುವ ಊಟ ಮಾತ್ರ ಸೇವಿಸಬೇಕು. ಅಲ್ಲದೇ ತರಕಾರಿಗಳನ್ನು ಕತ್ತರಿಸಿ ಕೊಡಬೇಕು. ಆದರೆ, ಅಶ್ವಿನಿ ಗೌಡ ಒಂದೊಂದಾಗಿ ಬಿಗ್‌ಬಾಸ್ ನಿಯಮವನ್ನು ಗಾಳಿಗೆ ತೂರಿದ್ದು ಪ್ರೊಮೋದಲ್ಲಿ ಎದ್ದು ಕಾಣುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.