
ಧ್ರುವಂತ್, ಸೂರಜ್
ಚಿತ್ರ: ಇನ್‌ಸ್ಟಾಗ್ರಾಮ್
ಬಿಗ್‌ಬಾಸ್ ಮನೆಯಲ್ಲಿ ಧ್ರುವಂತ್ ಅಶ್ಲೀಲ ಪದ ಬಳಕೆ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಷ್ಟು ದಿನ ಬಿಗ್‌ಬಾಸ್ ಮನೆಯಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದ ಅಶ್ವಿನಿ ಗೌಡ ಈಗ ಶಾಂತವಾಗಿದ್ದಾರೆ. ಆದರೆ ಆ ಬೆನ್ನಲ್ಲೆ ಧ್ರುವಂತ್ ಏಕಾಏಕಿ ಎಲ್ಲರ ಜೊತೆಗೂ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ.
ಈಗ ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ನಟ ಧ್ರುವಂತ್ ಅವರು ಬಿಗ್‌ಬಾಸ್ ಮನೆಯಲ್ಲಿ ಅಶ್ಲೀಲವಾಗಿ ಪದ ಬಳಕೆ ಮಾಡಿದ ನಂತರ ಸೂರಜ್ ಹಾಗೂ ಧನುಷ್ ಧ್ವನಿ ಎತ್ತಿದ್ದಾರೆ. ಧ್ರುವಂತ್ ಅವರು ಮಾತನಾಡುವ ಭರದಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ.
ಇದೇ ಕಾರಣಕ್ಕೆ ಸೂರಜ್, ಧನುಷ್ ಹಾಗೂ ಸ್ಪಂದನಾ ಅವರು ಧ್ರುವಂತ್ ಆಡಿದ ಮಾತಿಗೆ ಕೋಪಗೊಂಡು ಗಲಾಟೆ ಮಾಡಿದ್ದಾರೆ. ಇಂದು ರಾತ್ರಿ 9:30ಕ್ಕೆ ಪ್ರಸಾರವಾಗುವ ಸಂಚಿಕೆಯಲ್ಲಿ ಧ್ರುವಂತ್ ಅವರು ನಿಜಕ್ಕೂ ಹೇಳಿದ್ದು ಏನು ಎಂಬುವುದರ ಬಗ್ಗೆ ಗೊತ್ತಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.