
ಕಾವ್ಯ ಗೌಡ ಸಹೋದರ
ಬಿಗ್‌ಬಾಸ್ 12ನೇ ಆವೃತ್ತಿಗೆ ಸ್ಪರ್ಧಿಯಾಗಿ ಹೋಗಿರುವ ಕಾವ್ಯ ಶೈವ ಅವರು ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಫೈನಲಿಸ್ಟ್ ಸ್ಥಾನದಲ್ಲಿ ಇರಲಿದ್ದಾರೆ ಎನ್ನುವುದು ಅನೇಕರ ಮಾತು. ಆದರೆ ಕೆಲವು ಕಡೆಗಳಲ್ಲಿ ಕಾವ್ಯ ಅವರ ಬಗ್ಗೆ ನೆಗೆಟಿವ್ ಮಾಹಿತಿ ಹರಿದಾಡುತ್ತಿವೆ. ಈ ಬಗ್ಗೆ ಅವರ ಸಹೋದರ ಕಾರ್ತಿಕ್ ಪ್ರತಿಕ್ರಿಯೆ ನೀಡಿದ್ದಾರೆ.
ಗಿಲ್ಲಿ ನಟ, ನಟಿ ಕಾವ್ಯ
ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಕಾವ್ಯ ಸಹೋದರ ಕಾರ್ತಿಕ್ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಕೆಲವರಿಗೆ ಖಡಕ್ ಎಚ್ಚರಿಕೆ ಕೂಡ ಕೊಟ್ಟಿದ್ದಾರೆ. ವಿಡಿಯೊದಲ್ಲಿ ಮೊದಲು ಕ್ಷಮೆ ಕೇಳುವ ಹಾಗೇ ಮೃದುವಾಗಿ ಮಾತನಾಡುವಂತೆ ನಟಿಸಿ ನಂತರ ಖಡಕ್ ಆಗಿ ಉತ್ತರಿಸಿದ್ದಾರೆ.
‘ನಾನು ಈ ವಿಡಿಯೊ ಮಾಡಲು ಕಾರಣ ಸಾಕಷ್ಟು ಜನ ನನಗೆ ತುಂಬಾ ಸಂದೇಶ ಕಳುಸುತ್ತಿದ್ದೀರಾ. ಏಕೆ ಕಾವ್ಯ ಅವರ ಖಾತೆಯಲ್ಲಿ ಯಾವುದೇ ಪೋಸ್ಟ್ ಹಾಕುತ್ತಿಲ್ಲ ಅಂತ ಕೇಳುತ್ತಿದ್ದೀರಾ. ನಾನು ನಿಮ್ಮೆಲ್ಲರಿಗೂ ಹೇಳುವುದು ಇಷ್ಟೇ. ಈಗಾಗಲೇ ಕಾವ್ಯ ಬಗ್ಗೆ ನೆಗೆಟಿವ್ ಹಬ್ಬಿಸುತ್ತಿದ್ದಾರೆ. ದಯಮಾಡಿ ಯಾರು ಕಾವ್ಯ ಬಗ್ಗೆ ನೆಗೆಟಿವ್ ಹಬ್ಬಿಸಬೇಡಿ. ಕಾವ್ಯ ಪರವಾಗಿ ನಾನು ಕ್ಷಮೆ ಕೇಳುತ್ತೇನೆ’ ಎಂದು ಹೇಳಿದ್ದಾರೆ.
ಬಳಿಕ ‘ಹೀಗೆ ಹೇಳುತ್ತೇನೆ ಅಂತ ಅಂದುಕೊಂಡಿದ್ದೀರಾ? ಬಿಗ್‌ಬಾಸ್ ಶುರುವಾಗಿ ಕೇವಲ 50 ದಿನ ಆಗಿದೆ ಅಷ್ಟೇ. ಇನ್ನೂ ನೋಡೋದಕ್ಕೆ ತುಂಬಾ ಇದೆ. ನೀವುಗಳು ಆಗಲೇ ಕಾರಣ ಇಲ್ಲದೆ ನೆಗೆಟಿವ್ ಹಬ್ಬಿಸುತ್ತಿದ್ದೀರಾ ಅಂದರೆ ನಮ್ಮ ಕಾವು ಎಷ್ಟು ಭಯ ಹುಟ್ಟಿಸಿರಬಾರದು ಅಲ್ವಾ. ನಮ್ಮ ಕಾವು ಬಲಿಷ್ಠ ಸ್ಪರ್ಧಿ ಅಲ್ವಾ, ಈಗಲೇ ತುಳಿದು ಬಿಡೋಣ ಅಂದುಕೊಂಡಿದ್ದೀರಿ ಅಲ್ವಾ? ಅದೇಲ್ಲ ನಡಿಯೋದಿಲ್ಲ. ಫಿನಾಲೆ ಸಮಯದಲ್ಲಿ ಸುದೀಪ್ ಸರ್ ಅವರ ಒಂದು ಕೈಯಲ್ಲಿ ಕಾವ್ಯ ಇದ್ದೇ ಇರುತ್ತಾಳೆ ಬರೆದಿಟ್ಟುಕೊಳ್ಳಿ’ ಎಂದು ಎಚ್ಚರಿಗೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.