ADVERTISEMENT

‘ಗಟ್ಟಿಮೇಳ’ದಲ್ಲಿ ಚಿನ್ನಾರಿಮುತ್ತ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 19:30 IST
Last Updated 9 ಫೆಬ್ರುವರಿ 2020, 19:30 IST
ಗಟ್ಟಿಮೇಳ ಧಾರಾವಾಹಿಯ ಪೋಸ್ಟರ್
ಗಟ್ಟಿಮೇಳ ಧಾರಾವಾಹಿಯ ಪೋಸ್ಟರ್   

ಝೀ ಕನ್ನಡ ವಾಹಿನಿಯ ಜನಪ್ರಿಯ ಕಿರುತೆರೆ ಧಾರಾವಾಹಿ ‘ಗಟ್ಟಿಮೇಳ’ದ ಇಂದು ಮತ್ತು ನಾಳಿನ ಸಂಚಿಕೆಯಲ್ಲಿ ಬೆಳ್ಳಿ ತೆರೆಯ ವಿಶೇಷ ಅತಿಥಿಯೊಬ್ಬರು ವಿಶೇಷ ‍ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆ ವಿಶೇಷ ಅತಿಥಿಯೇ ಕನ್ನಡಿಗರ ನೆಚ್ಚಿನ ‘ಚಿನ್ನಾರಿಮುತ್ತ’ ನಟ ವಿಜಯ್‌ ರಾಘವೇಂದ್ರ. ವಿಜಯ್ ಅವರು, ಫೆ.10 ಮತ್ತು 11ರ ಸಂಚಿಕೆಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್‌ ನಟನೆಯ‘ಮಾಲ್ಗುಡಿ ಡೇಸ್‌’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.

‘ಗಟ್ಟಿಮೇಳ’ ಧಾರಾವಾಹಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿಜಯ್‌ ರಾಘವೇಂದ್ರ ಅವರನ್ನು, ‘ಮಾಲ್ಗುಡಿ ಡೇಸ್‌’ ಸಿನಿಮಾ ಪ್ರಚಾರದ ಉದ್ದೇಶಕ್ಕಾಗಿಝೀ ವಾಹಿನಿ ‘ಗಟ್ಟಿಮೇಳ’ ಧಾರಾವಾಹಿ ಸೆಟ್‌ಗೆ ಆಹ್ವಾನಿಸಿತ್ತು. ಧಾರಾವಾಹಿಯ ನಾಯಕ – ನಾಯಕಿ ನಡುವಿನ ‘ಪ್ರೀತಿ ಸಂವಹನ’ದ ದೃಶ್ಯವೊಂದರಲ್ಲಿ ವಿಜಯ್‌ ರಾಘವೇಂದ್ರ ಕಾಣಿಸಿಕೊಳ್ಳಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.