ADVERTISEMENT

ಮಾಂಗಲ್ಯ ಧಾರಾವಾಹಿಗೆ ಸುಧಾರಾಣಿ ನಿರೂಪಣೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 1:11 IST
Last Updated 2 ಸೆಪ್ಟೆಂಬರ್ 2025, 1:11 IST
ಸುಧಾರಾಣಿ 
ಸುಧಾರಾಣಿ    

ನಟಿ ಸುಧಾರಾಣಿ ಉದಯ ಟಿ.ವಿಯಲ್ಲಿನ ಹೊಸ ಧಾರಾವಾಹಿಯೊಂದನ್ನು ನಿರೂಪಣೆ ಮಾಡಲಿದ್ದಾರೆ.  

ಸೆ.2ರಿಂದ ಉದಯ ವಾಹಿನಿಯಲ್ಲಿ ‘ಮಾಂಗಲ್ಯ’ ಎಂಬ ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಇದನ್ನು ಸುಧಾರಾಣಿ ನಿರೂಪಣೆ ಮಾಡಲಿದ್ದಾರೆ. ಇದು ದುರ್ಗಾಪುರ ಎಂಬಲ್ಲಿ ನಡೆಯುವ ಕಥೆ. ಮಯೂರಿ ಜವಾಬ್ದಾರಿ ಇರುವ ಬಡ ಕುಟುಂಬದ ಹುಡುಗಿ. ಕೃಷಿ ಕೆಲಸದಲ್ಲೂ ಎತ್ತಿದ ಕೈ. ಆ ಊರಿನ ಶ್ರೀಮಂತ ಕುಟುಂಬದ ತೋಟದ ಉಸ್ತುವಾರಿ ಹೊತ್ತಾಕೆ. ಆ ಕುಟುಂಬದ ತಾರಕ್‌ ಎಂಬಾತ ತನ್ನ ಅಮ್ಮನ ಶ್ರೀಮಂತಿಕೆಯ ಅಹಂ ಮುರಿಯಲು ಮಯೂರಿಗೆ ತಾಳಿ ಕಟ್ಟುತ್ತಾನೆ. ಇಲ್ಲಿಂದ ಕಥೆ ಆರಂಭವಾಗುತ್ತದೆ ಎಂದಿದೆ ತಂಡ. 

ನಟ ಜಗನ್‌ ‘ತಾರಕ್‌’ ಪಾತ್ರಕ್ಕೆ ಬಣ್ಣಹಚ್ಚಿದ್ದು, ‘ಮಯೂರಿ’ಯಾಗಿ ಐಶ್ವರ್ಯ ಪಿಸ್ಸೆ ನಟಿಸಿದ್ದಾರೆ. ಜಾನ್ಸಿ, ಬಿ.ಎಂ.ವೆಂಕಟೇಶ್, ಇಂಚರ, ದಿಶಾ, ಹನುಮಂತು, ಜಯಬಾಲು, ಚಿತ್ರಾ, ರೂಪೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಧಾರಾವಾಹಿಯು ಸೆ.2ರಿಂದ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.