ADVERTISEMENT

ಸಲ್ಮಾನ್‌ ಖಾನ್‌ ಫೋನ್‌ ನಂಬರ್‌ ಬ್ಲಾಕ್‌ ಮಾಡಿದ್ದ ಶಹನಾಝ್‌ ಗಿಲ್‌! 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಏಪ್ರಿಲ್ 2023, 6:38 IST
Last Updated 14 ಏಪ್ರಿಲ್ 2023, 6:38 IST
ಚಿತ್ರ ಕೃಪೆ : (Facebook/ Shehnaz Kaur Gill)
ಚಿತ್ರ ಕೃಪೆ : (Facebook/ Shehnaz Kaur Gill)   

ಬಿಗ್‌ಬಾಸ್‌ ಖ್ಯಾತಿಯ ನಟಿ ಶಹನಾಝ್‌ ಗಿಲ್‌ ಹಿಂದೊಮ್ಮೆ ಸಲ್ಮಾನ್‌ ಖಾನ್‌ ಫೋನ್‌ ನಂಬರ್‌ ಅನ್ನು ಬ್ಲಾಕ್‌ ಮಾಡಿದ್ದಾಗಿ ಕಿರುತೆರೆಯ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಬ್ಲಾಕ್‌ ಮಾಡಲು ಶಹನಾಝ್‌ ನೀಡಿದ ಕಾರಣ ಕೇಳಿ ಸಲ್ಲು ಅಭಿಮಾನಿಗಳು ಶಾಕ್‌ ಆಗಿದ್ದಾರೆ.

ಸಲ್ಮಾನ್‌ ಖಾನ್‌ ಅವರ ‘ಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌‘ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಶಹನಾಝ್‌ ಗಿಲ್‌ ನಿ‌ರ್ವಹಿಸಿದ್ದಾರೆ. ಈ ಚಿತ್ರ ಇದೇ ಏಪ್ರಿಲ್‌ 21ರಂದು ಬಿಡುಗಡೆಯಾಗಲಿದೆ. ಸಲ್ಮಾನ್‌ ಖಾನ್‌ ಜೊತೆ ತೆರೆ ಹಂಚಿಕೊಂಡಿರುವುದಕ್ಕೆ ಶಹನಾಝ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಹಿಂದಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ‘ಕಪಿಲ್‌ ಶರ್ಮ ಶೋ‘ನಲ್ಲಿ ಶಹನಾಝ್‌ ಗಿಲ್‌ ಭಾಗವಹಿಸಿದ್ದರು. ಈ ವೇಳೆ ತಾನು ಸಲ್ಮಾನ್‌ ಖಾನ್‌ ಫೋನ್‌ ನಂಬರ್‌ಅನ್ನು ಬ್ಲಾಕ್ ಮಾಡಿರುವ ಸನ್ನಿವೇಶದ ಬಗ್ಗೆ ಹೇಳಿಕೊಂಡಿದ್ದಾರೆ.

ADVERTISEMENT

‘ನಾನು ಗುರುದ್ವಾರಕ್ಕೆ ಭೇಟಿ ನೀಡಿದ ಸಂದರ್ಭ ನನಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು.ಆ ಅಪರಿಚಿತ ನಂಬರ್‌ ಸಲ್ಮಾನ್‌ ಖಾನ್‌ ಅವರದ್ದು ಎಂದು ನನಗೆ ತಿಳಿದಿರಲಿಲ್ಲ. ಅದೂ ಅಲ್ಲದೇ ನನಗೆ ಅಪರಿಚಿತ ನಂಬರ್‌ಗಳನ್ನು ಬ್ಲಾಕ್‌ ಮಾಡುವ ಅಭ್ಯಾಸವಿತ್ತು. ಆ ದಿನವೂ ನಾನು ಸಲ್ಮಾನ್‌ ಖಾನ್‌ ನಂಬರ್‌ ಬ್ಲಾಕ್‌ ಮಾಡಿದ್ದೆ. ನಂತರ ನನಗೆ ಸಲ್ಮಾನ್‌ ಖಾನ್‌ ಕರೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಸಂದೇಶ ಬಂತು. ತಕ್ಷಣ ನಾನು ಟ್ರೂ ಕಾಲರ್‌ಗೆ ಹಾಕಿ ಚೆಕ್‌ ಮಾಡಿದೆ. ಆಗ ನನಗೆ ಅದು ಸಲ್ಮಾನ್‌ ಖಾನ್‌ ನಂಬರ್‌ ಎಂದು ಖಚಿತವಾಯಿತು. ತಕ್ಷಣ ನಾನು ನಂಬರ್‌ ಅನ್‌ಬ್ಲಾಕ್‌ ಮಾಡಿದೆ‘ ಎಂದು ಹೇಳಿದರು.

‘ಅನ್‌ಬ್ಲಾಕ್‌ ಮಾಡಿದ ನಂತರ ಅವರು ನನಗೆ ಕಾಲ್‌ ಮಾಡಿ ಸಿನಿಮಾದ ಆಫರ್‌ ನೀಡಿದರು. ಹೀಗೆ ನಾನು ಸಲ್ಮಾನ್ ಖಾನ್‌ ಸಿನಿಮಾವನ್ನು ಗಿಟ್ಟಿಸಿಕೊಂಡೆ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.