ADVERTISEMENT

ಹಿಂದಿ 'ಬಿಗ್ ಬಾಸ್-15’ರ ವಿಜೇತರಾಗಿ ಹೊರಹೊಮ್ಮಿದ ನಟಿ ತೇಜಸ್ವಿ ಪ್ರಕಾಶ್‌

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 2:48 IST
Last Updated 31 ಜನವರಿ 2022, 2:48 IST
ನಟಿ ತೇಜಸ್ವಿ ಪ್ರಕಾಶ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಫೋಟೊ
ನಟಿ ತೇಜಸ್ವಿ ಪ್ರಕಾಶ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಫೋಟೊ   

ಮುಂಬೈ: ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಅವರು ಹಿಂದಿಯ ರಿಯಾಲಿಟಿ ಶೋ 'ಬಿಗ್ ಬಾಸ್-15’ರ ವಿಜೇತರಾಗಿ ಹೊರಹೊಮ್ಮಿದ್ದಾರೆ.

ನಟ ಹಾಗೂ ಮಾಡೆಲ್ ಪ್ರತೀಕ್ ಸೆಹಜ್‌ಪಾಲ್ ಅವರನ್ನು ಪರಾಭವಗೊಳಸಿದ ತೇಜಸ್ವಿ ಪ್ರಕಾಶ್‌ ಬಿಗ್‌ ಬಾಸ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಾರ್ಯಕ್ರಮದ ನಿರೂಪಕರಾದ ಸಲ್ಮಾನ್ ಖಾನ್ ಅವರು ₹ 40 ಲಕ್ಷ ನಗದು ಬಹುಮಾನ ಹಾಗೂ ಬಿಗ್ ಬಾಸ್ ಟ್ರೋಫಿಯನ್ನು ತೇಜಸ್ವಿಗೆ ನೀಡಿದರು.

ADVERTISEMENT

ಬಿಗ್‌ ಬಾಸ್‌ನಲ್ಲಿ ಜಯಸಾಧಿಸಿರುವ ಕುರಿತು ಫೋಟೊ ಸಮೇತ ಟ್ವೀಟ್‌ ಮಾಡಿರುವ ತೇಜಸ್ವಿ ಪ್ರಕಾಶ್‌, ‘ನಾಲ್ಕು ತಿಂಗಳ ಅತ್ಯಂತ ಸವಾಲಿನ ಪ್ರಯಾಣದ ಬಳಿಕ ಕನಸು ನನಸಾಗಿದೆ. ಈ ಕನಸನ್ನು ನನಸು ಮಾಡಿದ ಎಲ್ಲರಿಗೂ ಧನ್ಯವಾದಗಳು. ಟ್ರೋಫಿ ಮನೆಗೆ ಬಂದಿದೆ’ ಎಂದು ಬರೆದುಕೊಂಡಿದ್ದಾರೆ.

ಸೆಹಜ್‌ಪಾಲ್ ಎರಡನೇ ಸ್ಥಾನ ಹಾಗೂ ಕರಣ್ ಕುಂದ್ರಾ ಮೂರನೇ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.