ADVERTISEMENT

ಮಾ.1ರಿಂದ ‘ಝೀ ಪಿಚ್ಚರ್‌’

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 19:30 IST
Last Updated 17 ಫೆಬ್ರುವರಿ 2020, 19:30 IST
zee
zee   

ಝೀ ಕನ್ನಡ ವಾಹಿನಿ ಮತ್ತೊಂದು ಹೆಮ್ಮೆಯ ಸಾಹಸಕ್ಕೆ ಮುಂದಾಗಿದೆ. ಇದೇ ಮಾರ್ಚ್ 1 ರಿಂದ ಸಿನಿ ಪ್ರೇಕ್ಷಕರಿಗಾಗಿ ‘ಝೀ ಪಿಚ್ಚರ್’ ಹೆಸರಿನಲ್ಲಿ ನೂತನ ಸಿನಿಮಾ ವಾಹಿನಿಯನ್ನು ಪರಿಚಯಿಸುತ್ತಿದೆ. ಇದು ಕನ್ನಡ ಚಿತ್ರಪ್ರೇಮಿಗಳಲ್ಲಿ ಮನರಂಜನೆಯ ಮ್ಯಾಜಿಕ್ ಸೃಷ್ಟಿ ಮಾಡಲಿದೆ.

‘ಹಿಟ್ ದಿನದ ಫೀಲಿಂಗ್’ ಎಂಬ ಟ್ಯಾಗ್‍ಲೈನ್‍ನೊಂದಿಗೆ ಉದ್ಘಾಟನೆಯಾಗುತ್ತಿರುವ ಈ ವಾಹಿನಿಯಲ್ಲಿಹತ್ತು ಹಲವು ವಿಶೇಷತೆಗಳಿವೆ. ಈಗಾಗಲೇ ಕನ್ನಡ ಕಿರುತೆರೆಯಲ್ಲೇ ದಾಖಲೆಯ ರೇಟಿಂಗ್ ಬರೆದಿರುವ ಸೂಪರ್ ಹಿಟ್ ಚಿತ್ರಗಳಾದ ಕುರುಕ್ಷೇತ್ರ, ದೊಡ್ಮನೆ ಹುಡುಗ, ಪೈಲ್ವಾನ್, ಹೆಬ್ಬುಲಿ, ದಿ ವಿಲನ್ ಚಿತ್ರಗಳ ಜತೆಗೆ ಸ್ಯಾಂಡಲ್‍ವುಡ್‍ನಲ್ಲಿ ಟ್ರೆಂಡ್ ಸೆಟ್ ಮಾಡಿರುವಂತಹ ಮಯೂರ, ಜೋಗಿ, ಮಿಲನ, ಬುಲ್‍ಬುಲ್ ನಂತಹ ಚಿತ್ರಗಳು ಈ ವಾಹಿನಿಯಲ್ಲಿಪ್ರಸಾರವಾಗಲಿವೆ.

ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದ್ದು, ಈಗಾಗಲೇ ಝೀ ಪಿಚ್ಚರ್ ಲೈಬ್ರರಿಯಲ್ಲಿ 350ಕ್ಕೂ ಹೆಚ್ಚು ಜನಪ್ರಿಯ ಸಿನಿಮಾಗಳಿವೆ. ಈ ವಾಹಿನಿ ಆರಂಭಿಕ ಕೊಡುಗೆಯಾಗಿ 12 ಹೊಚ್ಚ ಹೊಸ ಸಿನಿಮಾಗಳನ್ನು ನೀಡುತ್ತಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ 12 ದಿನಗಳ ಕಾಲ 12 ಹೊಸ ಜನಪ್ರಿಯ ಸಿನಿಮಾಗಳನ್ನು ನೋಡಬಹುದು. ಇವೆಲ್ಲ ಇದೇ ಮೊದಲ ಬಾರಿಗೆಎಕ್ಸ್‌ಕ್ಲೂಸಿವ್ ಆಗಿ ಝೀ ಪಿಚ್ಚರ್‌ ವಾಹಿನಿಯಲ್ಲಿಪ್ರಸಾರ ಆಗಲಿವೆ. ಮಧ್ಯಾಹ್ನ 1 ಗಂಟೆಗೆ ಶುರುವಾಗುವ ಚಿತ್ರದಲ್ಲಿ ಒಂದೇ ಒಂದು ಬ್ರೇಕ್ ತೆಗೆದುಕೊಂಡು ನಾನ್‍ಸ್ಟಾಪ್ ಸಿನಿಮಾ ವೀಕ್ಷಿಸುವ ಅವಕಾಶವನ್ನು ವಾಹಿನಿ ಕಲ್ಪಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.