ADVERTISEMENT

ಬಂಡೀಪುರ: ಅವಳಿ ಮರಿಗಳಿಗೆ ಜನ್ಮನೀಡಿದ ಆನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 16:12 IST
Last Updated 19 ಏಪ್ರಿಲ್ 2022, 16:12 IST
ಅವಳಿ ಮರಿಗಳೊಂದಿಗೆ ತಾಯಿ ಆನೆ
ಅವಳಿ ಮರಿಗಳೊಂದಿಗೆ ತಾಯಿ ಆನೆ   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಯೊಂದು ಅವಳಿ ಮರಿಗಳಿಗೆ ಜನ್ಮನೀಡಿದೆ.

‘ಬಂಡೀಪುರ ವಲಯದಲ್ಲಿ ಭಾನುವಾರ ಆನೆಯು ಎರಡು ಮರಿಗಳಿಗೆ ಜನ್ಮ ನೀಡಿದೆ. ತಾಯಿ ಮತ್ತು ಎರಡು ಮರಿಗಳೂ ಆರೋಗ್ಯವಾಗಿವೆ. ಇದು ಅಪರೂಪದ ಪ್ರಕರಣ’ ಎಂದು ಬಂಡೀಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸೋಮವಾರ ಸಫಾರಿಗೆ ಹೋದವರಿಗೆ ತಾಯಿ ಆನೆಯ ಜೊತೆ ಎರಡು ಮರಿಯಾನೆಗಳು ಚಿನ್ನಾಟ ಆಡುವ ದೃಶ್ಯ ಕಂಡಿದೆ. ಕೆಲವರು ಫೋಟೊವನ್ನೂ ತೆಗೆದಿದ್ದಾರೆ.

ADVERTISEMENT

‘40 ವರ್ಷಗಳಿಂದ ಇಂತಹ ಅಪರೂಪದ ಪ್ರಕರಣ ಈ ಅರಣ್ಯ ಪ್ರದೇಶದಲ್ಲಿ ನಡೆದಿಲ್ಲ ಎಂದು ಬಂಡೀಪುರದ ಸಿಬ್ಬಂದಿ ಹೇಳುತ್ತಾರೆ. ಆನೆ ಹಾಗೂ ಮರಿಗಳನ್ನು ನಾನೂ ನೋಡಿದ್ದೇನೆ. ಈ ಮೊದಲು ನಮ್ಮಲ್ಲಿ ಆನೆ ಅವಳಿ ಮರಿಗಳಿಗೆ ಜನ್ಮ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ’ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.