ADVERTISEMENT

ರೈತ ಮಿತ್ರ ವನಸಾರಿಕಾ ( ಜಂಗಲ್ ಮೈನಾ)

​ಪ್ರಜಾವಾಣಿ ವಾರ್ತೆ
Published 2 ಜುಲೈ 2018, 15:54 IST
Last Updated 2 ಜುಲೈ 2018, 15:54 IST
ವಿಜಯಪುರದಲ್ಲಿ ಕಂಡು ಬಂದ ವನಸಾರಿಕಾ (ಜಂಗಲ್ ಮೈನಾ) ಹಕ್ಕಿ
ವಿಜಯಪುರದಲ್ಲಿ ಕಂಡು ಬಂದ ವನಸಾರಿಕಾ (ಜಂಗಲ್ ಮೈನಾ) ಹಕ್ಕಿ   

ವಿಜಯಪುರ : ನಗರದಲ್ಲಿ ಕಂಡು ಬಂದ ಸಂಸ್ಕೃತದಲ್ಲಿ ವನಸಾರಿಕಾ, (ಜಂಗಲ್ ಮೈನಾ) ಇಂಗ್ಲಿಷ್ ಭಾಷೆಯಲ್ಲಿ ಅಕ್ರಿಡೋಥೀರಿಸ್ ಫಸ್ಕಸ್ ಎಂದು ಕರೆಯುವ ಹಕ್ಕಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿತು. ಸ್ಥಳೀಯವಾಗಿ ಕಾಡುಮೈನಾ, ಕಾಡು ಗೋರವಂಕ, ಜಡ್ಜ್ ಕುರುಳಿ ಎಂದೂ ಕರೆಯುತ್ತಾರೆ.

ಇದರ ಲಕ್ಷಣಗಳು:

ಗೊರವಂಕ ಗಾತ್ರದ ಕಡು ಕಂದು ಮಿಶ್ರಿತ ಬೂದು ಪಕ್ಷಿ. ತಲೆ ಕಪ್ಪು, ಹಣೆಯ ಮೇಲೆ ಕುಂಚದಂತಹ ಕಪ್ಪು ಪುಕ್ಕ, ತಿಳಿ ಕೇಸರಿ ಕೊಕ್ಕು, ಕಣ್ಣುಗಳು ಹಳದಿ, ರೆಕ್ಕೆ ಮೇಲೆ ಬಿಳಿ ಪಟ್ಟಿ, ರೆಕ್ಕೆಯ ಅಂಚು ಕಪ್ಪು, ಕಪ್ಪು ಬಾಲಕ್ಕೆ ಬಿಳಿ ಅಂಚು, ತಿಳಿ ಕಂದು ಕಾಲುಗಳಿರುತ್ತವೆ.

ADVERTISEMENT


ಗುಣವೈಶಿಷ್ಟ್ಯ:

ಕಡು ಕಂದು ದೇಹ, ಕೇಸರಿಕೊಕ್ಕು, ಕಪ್ಪು ತಲೆ, ಹಣೆ ಮೇಲಿನ ಕುಂಚದಂತಹ ಪಟ್ಟಿ, ರೆಕ್ಕೆ ಮೇಲಿನ ಬಿಳಿ ಪಟ್ಟಿ. ಇದು ಕುರುಚುಲು ಕಾಡು, ತೋಟ, ಬಯಲು ಪ್ರದೇಶಗಳಲ್ಲಿ ವಾಸ ಮಾಡುತ್ತದೆ. ಮರಗಳಲ್ಲಿ ನೆಲದಲ್ಲೂ ವಾಸ ಮಾಡಬಲ್ಲದು. ಇದು ಕೀಕ್ಕ್..ಕೀಕ್ಕ್.. ಎಂದು ಕೂಗುತ್ತದೆ. ಮರದ ಪೊಟರೆಗಳಲ್ಲಿ ಗೂಡು ಕಟ್ಟಿಕೊಳ್ಳುತ್ತದೆ. ಇದು ಹೊಲಗಳಲ್ಲಿ, ತೋಟಗಳಲ್ಲಿ ಕಾಡುವ ಕೀಟಗಳನ್ನು ತಿನ್ನುವ ಮೂಲಕ ರೈತ ಮಿತ್ರನೆಂದು ಹೆಸರುವಾಸಿಯಾಗಿದೆ.

ಸಂತಾನೋತ್ಪತ್ತಿ :

ಫೆಬ್ರವರಿ–ಜುಲೈ 3–4 ತಿಳಿ ನೀಲಿಮೊಟ್ಟೆಗಳಿಗೆ 18 ದಿನಗಳವರೆಗೆ ಕಾವು ಕೊಡುತ್ತದೆ. ರಾಜ್ಯದಲ್ಲಿ ಎಲ್ಲೆಡೆ ಇದು ಕಾಣಸಿಗುತ್ತದೆ. ಮಕರಂದ ಹೀರುವಾಗ ಹಣೆಯ ಮೇಲಿನ ಪುಕ್ಕಗಳಿಂದ ಪರಾಗ ಸ್ಪರ್ಶ ಮಾಡುತ್ತದೆ ಎಂದು ಪಕ್ಷಿ ತಜ್ಞ ಡಿ.ಜಿ.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.