ADVERTISEMENT

ನಿಸರ್ಗದ ವೈಶಿಷ್ಟ್ಯ...

ಎನ್.ವಾಸುದೇವ್
Published 9 ಮಾರ್ಚ್ 2019, 19:36 IST
Last Updated 9 ಮಾರ್ಚ್ 2019, 19:36 IST
ವಿಜ್ಞಾನ
ವಿಜ್ಞಾನ   

1. ‘ಗ್ರಾನೈಟ್’ ಶಿಲೆಯ ಒಂದು ಬೃಹತ್ ನೈಸರ್ಗಿಕ ನಿರ್ಮಿತಿ ಚಿತ್ರ-8 ರಲ್ಲೂ, ‘ಅಮೃತ ಶಿಲೆ’ಯ ಒಂದು ಅದ್ಭುತ ಮಾನವ ನಿರ್ಮಿತಿ ಚಿತ್ರ-9 ರಲ್ಲೂ ಇದೆ. ಗ್ರಾನೈಟ್ ಶಿಲೆ ಮತ್ತು ಅಮೃತ ಶಿಲೆ ಈ ಕೆಳಗಿನ ಯಾವ ಯಾವ ಶಿಲಾ ವರ್ಗಗಳಿಗೆ ಸೇರಿವೆ?
ಅ. ಅಗ್ನಿ ಶಿಲೆ
ಬ. ಪದರ ಶಿಲೆ
ಕ. ರೂಪಾಂತರ ಶಿಲೆ
ಡ. ಕೃತಕ ಶಿಲೆ

2. ಹಲವಾರು ಕೀಟಗಳು ನೈಸರ್ಗಿಕವಾಗಿಯೇ ಸಾಂಘಿಕ ಜೀವನ ಕ್ರಮವನ್ನು ಹೊಂದಿವೆ. ಹಲವಾರು ಸಾವಿರ ಸಂಖ್ಯೆಯಲ್ಲಿ ಗುಂಪಾಗಿ, ‘ರಾಣಿ’ಯೊಂದರ ನೇತೃತ್ವದಲ್ಲಿ ಭಾರೀ ಹೊಂದಾಣಿಕೆಯ ಕೌಟುಂಬಿಕ ಬದುಕನ್ನು ನಡೆಸುತ್ತವೆ. ಅಂತಹ ಎರಡು ಕೀಟಗಳು ಚಿತ್ರ-10 ಮತ್ತು ಚಿತ್ರ-11 ರಲ್ಲಿವೆ;
ಅ. ಈ ಕೀಟಗಳು ಯಾವುವು?
ಬ. ಇಂತಹದೇ ಜೀವನ ಕ್ರಮದ
ಯಾವುವಾದರೂ ಇನ್ನೆರಡು
ಕೀಟಗಳು ಗೊತ್ತೇ?

3. ವಿಶೇಷ ಪುಕ್ಕ- ಗರಿಗಳ, ಬಹು ಸುಂದರವಾದ ಆದರೆ ತಾತ್ಕಾಲಿಕವಾದ ವರ್ಣಮಯ ‘ಪ್ರಣಯದುಡುಗೆ’ಯನ್ನು ಧರಿಸಿರುವ ಸುಪ್ರಸಿದ್ಧ ‘ಸ್ವರ್ಗದ ಹಕ್ಕಿ’ ಪ್ರಭೇದವೊಂದು ಚಿತ್ರ-12ರಲ್ಲಿದೆ. ಸಗ್ಗವಕ್ಕಿಗಳು ಜೈವಿಕವಾಗಿ ಈ ಕೆಳಗೆ ಹೆಸರಿಸಿರುವ ಯಾವ ಹಕ್ಕಿಗೆ ಅತ್ಯಂತ ಹತ್ತಿರದ ಸಂಬಂಧಿಗಳಾಗಿವೆ?
ಅ. ನವಿಲು→ಬ. ಕಾಡು ಕೋಳಿ
ಕ. ಕುಂಜ ಪಕ್ಷಿ→ಡ. ಕಾಗೆ
ಇ. ಕೋಗಿಲೆ

ADVERTISEMENT

4. ಕಡಲ ನೀರಲ್ಲಿ ಮುಳುಗಿ ನಿಂತು, ಭರದಿಂದ ಸಮೃದ್ಧವಾಗಿ ಬೆಳೆದು, ದಟ್ಟವಾದ ‘ಕಡಲ ಅಡವಿ’ಗಳನ್ನೇ ರೂಪಿಸುವ ವಿಶಿಷ್ಟ ಸಸ್ಯ ವಿಧ ಚಿತ್ರ-13ರಲ್ಲಿದೆ. ಈ ಸಸ್ಯದ ಹೆಸರೇನು?
ಅ. ಫೈಟೋ ಪ್ಲಾಂಕ್ಟನ್
ಬ. ದೈತ್ಯ ಕೆಲ್ಪ್
ಕ. ಸಾಗರ ಹುಲ್ಲು
ಡ. ಕಡಲ ಕಳೆ

5. ಧರೆಯ ಜೀವಜಾಲದ ಬಹು ಮಹತ್ವದ್ದೂ ಆದ ಒಂದು ಪ್ರಧಾನ ವಿಧ ‘ಶಿಲೀಂಧ್ರ’ (ಫಂಗಸ್) ಚಿತ್ರ-14 ರಲ್ಲಿದೆ. ಶಿಲೀಂಧ್ರಗಳಲ್ಲಿ ಹೇರಳ ವಿಧಗಳಿವೆ. ಈ ಕೆಳಗಿನ ಪಟ್ಟಿಯಲ್ಲಿ ಯಾವುದು ಶಿಲೀಂಧ್ರ ಅಲ್ಲ - ಗುರುತಿಸಬಲ್ಲಿರಾ?
ಅ. ಹುಳುಕು
ಬ. ಹುದುಗು→ಕ. ಬೂಷ್ಟು
ಡ. ಪಾಚಿ→ಇ. ಅಣಬೆ
ಈ. ಬ್ಲೈಟ್→ಉ. ಎರ್ಗಾಟ್

ಉತ್ತರಗಳು :
1. ಗ್ರಾನೈಟ್ - ಅಗ್ನಿ ಶಿಲೆ; ಅಮೃತ ಶಿಲೆ - ರೂಪಾಂತರ ಶಿಲೆ
2.ಅ. ಚಿತ್ರ-10 ಗೆದ್ದಲು, ಚಿತ್ರ-11 ಇರುವೆ.
ಬ. ಜೇನ್ನೊಣ ಮತ್ತು ಕದಿರಿಬ್ಬೆ
3. ಡ. ಕಾಗೆ
4. ಬ. ದೈತ್ಯ ಕೆಲ್ಪ್
5. ಡ. ಪಾಚಿ (ಇದು ಶಿಲೀಂಧ್ರ ಅಲ್ಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.