ADVERTISEMENT

ರಾಯಚೂರು ಜಿಲ್ಲೆ ಚೀಕಲಪರ್ವಿಯಲ್ಲಿ ಕಾಮನ್‌ ಕ್ರೇನ್‌ ಹಕ್ಕಿಗಳ ಕಲರವ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 11:12 IST
Last Updated 24 ಜನವರಿ 2019, 11:12 IST
ಮಾನ್ವಿ ತಾಲ್ಲೂಕಿನ ಚೀಕಲಪರ್ವಿಯ ತುಂಗಭದ್ರಾ ನದಿ ದಂಡೆ ಪ್ರದೇಶದಲ್ಲಿ ಬುಧವಾರ ವನ್ಯಜೀವಿ ಛಾಯಾಗ್ರಾಹಕ ಝಮಾ ಮಿರ್ಜಾ ಮಾನ್ವಿ ಅವರ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಕಾಮನ್‌ ಕ್ರೇನ್‌ ಹಕ್ಕಿಗಳು
ಮಾನ್ವಿ ತಾಲ್ಲೂಕಿನ ಚೀಕಲಪರ್ವಿಯ ತುಂಗಭದ್ರಾ ನದಿ ದಂಡೆ ಪ್ರದೇಶದಲ್ಲಿ ಬುಧವಾರ ವನ್ಯಜೀವಿ ಛಾಯಾಗ್ರಾಹಕ ಝಮಾ ಮಿರ್ಜಾ ಮಾನ್ವಿ ಅವರ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಕಾಮನ್‌ ಕ್ರೇನ್‌ ಹಕ್ಕಿಗಳು   

ಮಾನ್ವಿ: ತಾಲ್ಲೂಕಿನ ಚೀಕಲಪರ್ವಿ ಗ್ರಾಮದ ತುಂಗಭದ್ರಾ ನದಿದಡದ ಪ್ರದೇಶದಲ್ಲಿ ಕಾಮನ್‌ ಕ್ರೇನ್ ಹಕ್ಕಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಮಾನ್ವಿಯ ವನ್ಯಜೀವಿ ಛಾಯಾಗ್ರಾಹಕ ಝಮಾ ಮಿರ್ಜಾ ಈ ಹಕ್ಕಿಗಳ ಕಲರವವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜತೆಗೆ ಮಾತನಾಡಿದ ಅವರು, ‘ಕಾಮನ್ ಕ್ರೇನ್ ಪಕ್ಷಿಗಳು ಮೂಲತಃ ಸೈಬೀರಿಯ ದೇಶದಲ್ಲಿ ಕಾಣಸಿಗುತ್ತವೆ. ಚಳಿಗಾಲದಲ್ಲಿ ರಾಜಸ್ಥಾನದ ಭರತ್‌ಪುರ ಪಕ್ಷಿಧಾಮಕ್ಕೆ ಬರುತ್ತವೆ. ಆದರೆ ಸುಮಾರು ಒಂದು ತಿಂಗಳ ಹಿಂದೆ ಜಿಲ್ಲೆಯ ಮಂಚಲಾಪುರದಲ್ಲಿ ಕೇವಲ ಒಂದು ಕಾಮನ್‌ ಕ್ರೇನ್‌ ಪಕ್ಷಿ ಕಂಡುಬಂದಿತ್ತು. ಬುಧವಾರ ಚೀಕಲಪರ್ವಿ ಗ್ರಾಮದ ತುಂಗಭದ್ರಾ ನದಿಯ ಸಮೀಪ 40ಕ್ಕೂ ಅಧಿಕ ಪಕ್ಷಿಗಳು ಕಂಡು ಬಂದಿರುವುದು ವಿಶೇಷವಾಗಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.