ADVERTISEMENT

ಕೋವಿಡ್‌ ಪತ್ತೆ ಮಾಡುವ ಶ್ವಾನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 19:30 IST
Last Updated 9 ಅಕ್ಟೋಬರ್ 2021, 19:30 IST
ಕೋವಿಡ್‌ ಪೀಡಿತರ ವೈರಾಣು ಮಾದರಿಯನ್ನು ಪರಿಶೀಲಿಸುತ್ತಿರುವ ಶ್ವಾನ
ಕೋವಿಡ್‌ ಪೀಡಿತರ ವೈರಾಣು ಮಾದರಿಯನ್ನು ಪರಿಶೀಲಿಸುತ್ತಿರುವ ಶ್ವಾನ   

ವಾಸನೆ ಗ್ರಹಿಸುವುದರಲ್ಲಿ ಶ್ವಾನಗಳಿಗಿಂತ ಮಿಗಿಲಿಲ್ಲ ಎನ್ನುವ ಮಾತಿದೆ. ಆದ್ದರಿಂದಲೇ ಪೊಲೀಸ್‌ ಪಡೆಗಳ ಅವಿಭಾಜ್ಯ ಅಂಗವಾಗಿವೆ ಶ್ವಾನದಳಗಳು. ಶ್ವಾನದಳವಿಲ್ಲದೆ ಬಾಂಬ್‌ ಪತ್ತೆ ಮಾಡುವುದು ಕಷ್ಟ ಎನ್ನುವಷ್ಟು ಅವುಗಳ ನಾಸಿಕ ಚುರುಕಾಗಿದೆ. ಅಂತಹ ಚುರುಕು ನಾಸಿಕದ ಶ್ವಾನಗಳು ಈಗ ಕೋವಿಡ್‌ ಪೀಡಿತರನ್ನು ಪತ್ತೆ ಮಾಡಲು ಬಳಕೆ ಆಗುತ್ತಿವೆ ಎಂದರೆ ನಂಬುತ್ತೀರಾ? ನಂಬಲೇಬೇಕು.

ಕಾಂಬೋಡಿಯಾದಲ್ಲಿ ಅಂತಹ ಪ್ರಯತ್ನ ನಡೆದಿದೆ. ಕೊರೊನಾ ವೈರಸ್‌ ನಿರೋಧಕ ಲಸಿಕೆ ಹಾಕುವುದರಲ್ಲೂ ದೊಡ್ಡ ಯಶಸ್ಸು ಗಳಿಸಿರುವ ಈ ದೇಶದಲ್ಲಿ ಇನ್ನುಮುಂದೆ ಶ್ವಾನದಳದಿಂದ ಕೋವಿಡ್‌ ಪೀಡಿತರನ್ನು ಸುಲಭವಾಗಿ ಪತ್ತೆ ಮಾಡಲಾಗುವುದಂತೆ! ಅಂದರೆ ರೋಗಲಕ್ಷಣ ಇದ್ದವರು ಲ್ಯಾಬ್‌ ಹೋಗದೆ ಇನ್ನುಮುಂದೆ ಶ್ವಾನದ ಮುಂದೆ ಹೋಗಿ ನಿಲ್ಲಬೇಕು. ವೈರಾಣು ಪತ್ತೆಯಲ್ಲಿ ಇತರ ಸಾಧನಗಳಿಗಿಂತ ಶ್ವಾನಗಳೇ ವಾಸಿ ಎಂದು ಅವುಗಳಿಗೆ ತರಬೇತಿ ನೀಡುತ್ತಿರುವ ಅಧಿಕಾರಿಗಳು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಜನ ಸೇರುವ ದೊಡ್ಡ ಕಾರ್ಯಕ್ರಮಗಳು, ಸ್ಟೇಡಿಯಂಗಳಲ್ಲಿ ಶ್ವಾನದಳವನ್ನು ಕೋವಿಡ್‌ ಪತ್ತೆ ಪರೀಕ್ಷೆಗೆ ಬಳಸುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT