ADVERTISEMENT

2500 ಸಸಿಗಳ ನೆಟ್ಟ ರೋಟರಿ ಕ್ಲಬ್‌

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 19:45 IST
Last Updated 1 ಸೆಪ್ಟೆಂಬರ್ 2019, 19:45 IST
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗ್ರಾಮದಲ್ಲಿ ನಂದಿ ಕೆರೆ ಸಮೀಪ ಸಸಿ ನೆಡುತ್ತಿರುವ ಬೆಂಗಳೂರು ಮಿಡ್‌ಟೌನ್‌ ರೋಟರಿ ಕ್ಲಬ್‌ ಸದಸ್ಯರು
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗ್ರಾಮದಲ್ಲಿ ನಂದಿ ಕೆರೆ ಸಮೀಪ ಸಸಿ ನೆಡುತ್ತಿರುವ ಬೆಂಗಳೂರು ಮಿಡ್‌ಟೌನ್‌ ರೋಟರಿ ಕ್ಲಬ್‌ ಸದಸ್ಯರು   

ಬೆಂಗಳೂರು ಮಿಡ್‌ಟೌನ್‌ ರೋಟರಿ ಕ್ಲಬ್‌ ಸದಸ್ಯರು, ಶನಿವಾರ ಚಿಕ್ಕಬಳ್ಳಾಪುರದ ನಂದಿಗ್ರಾಮದ ನಂದಿ ಕೆರೆಯ ಸುತ್ತ 2,500 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲ್ಲೂಕಿನ ಸುಲ್ತಾನ್‌ಪೇಟ್‌ ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ಕೂಲ್‌ ಬ್ಯಾಗ್‌ಗಳನ್ನು ಕೂಡ ವಿತರಿಸಿದರು.

ಪರಿಸರ ವಿಜ್ಞಾನ, ಜೀವವೈವಿಧ್ಯ ರಕ್ಷಣೆಗೆ ಸಂಬಂಧಿಸಿದಂತೆ ಯುನೈಟೆಡ್‌ ಬ್ರೆವರೀಸ್‌ ಲಿಮಿಟೆಡ್‌, ವೆಲ್ಸ್‌ ಫಾರ್ಗೊ ಮತ್ತಿತರ ಹಲವು ಕಾರ್ಪೊರೇಟ್‌ ಸಂಸ್ಥೆಗಳು ರೂಪಿಸಿರುವ ಯೋಜನೆಗಳಿಗೆ ಬೆಂಗಳೂರು ಮಿಡ್‌ಟೌನ್‌ ರೋಟರಿ ಕ್ಲಬ್‌ ಕೈಜೋಡಿಸಿದೆ.

ಕೆರೆಗಳ ಪುನರುಜ್ಜೀವನ, ಕಲ್ಯಾಣಿಗಳ ಜೀರ್ಣೋದ್ಧಾರ, ಸರ್ಕಾರಿ ಶಾಲೆಗಳ ನವೀಕರಣ, ಗುಂಡುತೋಪು, ಮಳೆ ನೀರು ಸಂಗ್ರಹ ಮತ್ತಿತರ ಸುಧಾರಣಾ ಕಾರ್ಯಗಳಿಗೆ ಸಂಬಂಧಿಸಿದ ಒಟ್ಟಾರೆ ಯೋಜನೆಯ ನಾಯಕತ್ವವನ್ನು ‘ಯುನೈಟೆಡ್‌ ವೇ’ ವಹಿಸಿಕೊಂಡಿದೆ. ಇದು ಜಾಗತಿಕ ಮಟ್ಟದ ಸಂಸ್ಥೆ ‘ಯುನೈಟೆಡ್‌ ವೇ ವರ್ಲ್ಡ್‌ವೈಡ್‌’ನಬೆಂಗಳೂರು ಘಟಕ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.