ADVERTISEMENT

ವಿಜ್ಞಾನ ವಿಶೇಷ: ಪ್ರಕೃತಿ ಮತ್ತು ಮಾನವ ನಿರ್ಮಿತಿಯ ವಿಸ್ಮಯಗಳು

ಎನ್.ವಾಸುದೇವ್
Published 25 ಆಗಸ್ಟ್ 2018, 19:30 IST
Last Updated 25 ಆಗಸ್ಟ್ 2018, 19:30 IST
   

1. ವರ್ಣಮಯ, ಸುಂದರ, ನಿಸರ್ಗ ನಿರ್ಮಿತ ಬುಟ್ಟಿಯೊಂದು ಚಿತ್ರ- 1ರಲ್ಲಿದೆ. ಈ ನಿರ್ಮಿತಿ ಏನೆಂದು ಗುರುತಿಸಬಲ್ಲಿರಾ?
ಅ. ಬಣ್ಣದ ಶಿಲೆ
ಬ. ಹವಳ
ಕ. ಬಳ್ಳಿ ಗಿಡ
ಡ. ಸಾಗರ ಸಸ್ಯ

2. ವೃಕ್ಷಗಳ ಮೇಲೆ ಕೊಂಬೆ-ರೆಂಬೆ ಹಿಡಿಯಲು ಬಾಲವನ್ನೂ ಕೈಯಂತೆ ಬಳಸಬಲ್ಲ ಸುಪ್ರಸಿದ್ಧ ಮಂಗ ಚಿತ್ರ-2ರಲ್ಲಿದೆ. ಈ ಮಂಗ ಯಾವುದು ಗೊತ್ತೇ?
ಅ. ಹನುಮಾನ್ ಲಂಗೂರ್
ಬ. ಮ್ಯಾಂಡ್ರಿಲ್
ಕ. ರೀಸಸ್ ಮೆಕಾಕ್
ಡ. ಜೇಡ ಮಂಗ

3. ಲೋಹಗಳ ಅದಿರುಗಳಲ್ಲೊಂದಾದ ಗೆಲೀನಾ ಚಿತ್ರ-3ರಲ್ಲಿದೆ. ಗೆಲೀನಾದಿಂದ ಪಡೆಯಬಹುದಾದ ಲೋಹಗಳು ಇವುಗಳಲ್ಲಿ ಯಾವುವು?
ಅ. ತಾಮ್ರ
ಬ. ಸತು
ಕ. ಸೀಸ
ಡ. ಅಲ್ಯೂಮಿನಿಯಂ
ಇ. ನಿಕ್ಕಲ್
ಈ. ಬೆಳ್ಳಿ
ಉ. ಮ್ಯಾಂಗನೀಸ್

ADVERTISEMENT

4. ಮೃದ್ವಂಗಿಗಳ ಒಂದು ಪ್ರಧಾನ ವರ್ಗಕ್ಕೆ ಸೇರಿದ ಚಿಪ್ಪುಗಳಾದ ಶಂಖಗಳು ಚಿತ್ರ-4ರಲ್ಲಿವೆ. ಇಂಥ ಚಿಪ್ಪುಗಳನ್ನು ನಿರ್ಮಿಸುವ ಮೃದ್ವಂಗಿಗಳು ಯಾವ ವರ್ಗಕ್ಕೆ ಸೇರಿವೆ?
ಅ. ಸೆಫಲೋಪೋಡಾ
ಬ. ಗ್ಯಾಸ್ಟ್ರೋಪೋಡಾ
ಕ. ಬೈವಾಲ್ವಿಯಾ
ಡ. ನಾಟಿಲಾಯ್ಡಿಯಾ

5. ಆಫ್ರಿಕ ಖಂಡದಲ್ಲಿರುವ, ವಿಶ್ವ ವಿಖ್ಯಾತ ಎರಡು ಕೊಂಬುಗಳ ಗೇಂಡಾಮೃಗಗಳ ಒಂದು ತಾಯಿ-ಮಗು ಜೋಡಿ ಚಿತ್ರ-5ರಲ್ಲಿದೆ. ಆಫ್ರಿಕಾ ಖಂಡದ ಕೆಲವು ರಾಷ್ಟ್ರಗಳ ಈ ಪಟ್ಟಿಯಲ್ಲಿರುವ ಯಾವ ರಾಷ್ಟ್ರಗಳಲ್ಲಿ ಗೇಂಡಾಮೃಗಗಳು ನೆಲೆ ಹೊಂದಿಲ್ಲ?
ಅ. ನಮೀಬಿಯಾ
ಬ. ನೈಜೀರಿಯಾ
ಕ. ಸೂಡಾನ್
ಡ. ದಕ್ಷಿಣ ಆಫ್ರಿಕಾ
ಇ. ಕೀನ್ಯಾ
ಈ. ಈಜಿಪ್ಟ್
ಉ. ಜಿಂಬಾಬ್ವೆ

6. ಮಾನವ ಶರೀರದ ರಕ್ತದಲ್ಲಿನ ವಿದ್ಯಮಾನವೊಂದರ ದೃಶ್ಯ ಚಿತ್ರ-6ರಲ್ಲಿದೆ. ಈ ದೃಶ್ಯ ಏನೆಂದು ಗುರುತಿಸುವುದು ನಿಮಗೆ ಸಾಧ್ಯವೇ?
ಅ. ರಕ್ತ ಕಣಗಳ ತೇಲಾಟ
ಬ. ರಕ್ತಕ್ಕೆ ಸೇರಿರುವ ಪರಾವಲಂಬಿ ಜೀವಿಗಳು
ಕ. ಬ್ಯಾಕ್ಟೀರಿಯಾಗಳ ಮೇಲೆ ದಾಳಿ ಮಾಡುತ್ತಿರುವ ‘ಬಿಳಿ ರಕ್ತ ಕಣ’
ಡ. ಕೆಂಪು ರಕ್ತ ಕಣಗಳನ್ನು ಧ್ವಂಸ ಮಾಡುತ್ತಿರುವ ಬ್ಯಾಕ್ಟೀರಿಯಾ

7. ಸುಪ್ರಸಿದ್ಧ ಹವಾ ವಿದ್ಯಮಾನ ಮಳೆಬಿಲ್ಲು ಚಿತ್ರ-7ರಲ್ಲಿದೆ. ಮಳೆಬಿಲ್ಲನ್ನು ಕುರಿತ ಈ ಹೇಳಿಕೆಗಳಲ್ಲಿ ಯಾವುದು ಸರಿಯಲ್ಲ?
ಅ. ಮಳೆ ಮತ್ತು ಬಿಸಿಲು ಒಟ್ಟಾಗಿದ್ದಾಗಲೆಲ್ಲ ಮಳೆ ಬಿಲ್ಲು ಮೂಡುತ್ತದೆ.
ಬ. ನಡುಹಗಲಿನ ವೇಳೆಗಳಲ್ಲಿ ಮಳೆ ಬಿಲ್ಲು ಮೂಡುವುದಿಲ್ಲ.
ಕ. ಮಳೆಬಿಲ್ಲು ಯಾವಾಗಲೂ ಸೂರ್ಯನಿಗೆ ಎದುರಾಗಿಯೇ ಮೂಡುತ್ತದೆ.
ಡ. ಪೂರ್ಣ ವೃತ್ತಾಕಾರದ ಮಳೆ ಬಿಲ್ಲುಗಳೂ ಮೂಡುತ್ತವೆ.
ಇ. ಮಳೆ ಬಿಲ್ಲು ಮೂಡಲು ಪ್ರಧಾನ ಕಾರಣ ಬೆಳಕಿನ ವಕ್ರೀಭವನ

8. ಧ್ರುವ ಪ್ರಭೆಯ ಒಂದು ಸುಂದರ ಚಿತ್ರ ಇಲ್ಲಿದೆ (ಚಿತ್ರ-8). ಧ್ರುವ ಪ್ರಭೆಗಳಲ್ಲಿ ಹಲವಾರು ವರ್ಣಗಳು ಗೋಚರಿಸುತ್ತವಾದರೂ ಹಸಿರು ಮತ್ತು ಹಳದಿ ವರ್ಣಗಳು ತುಂಬ ಸಾಮಾನ್ಯ. ಧ್ರುವ ಪ್ರಭೆಗಳಲ್ಲಿನ ಹಸಿರು ಮತ್ತು ಹಳದಿ ವರ್ಣಗಳಿಗೆ ವಾಯು ಮಂಡಲದ ಯಾವ ಮೂಲ ವಸ್ತುವಿನ ಪರಮಾಣುಗಳು ಕಾರಣ?
ಅ. ಸಾರಜನಕ
ಬ. ಆಮ್ಲಜನಕ
ಕ. ಜಲಜನಕ
ಡ. ಇಂಗಾಲ
ಇ. ಕ್ಸೀನಾನ್

9. ಪುರಾತನ ಕಾಲದ ಪ್ರಸಿದ್ಧ ನಾಗರಿಕತೆಯೊಂದಕ್ಕೆ ಸೇರಿದ ಪ್ರಾಚೀನ ಮನುಷ್ಯರು ನಿರ್ಮಿಸಿದ ವಿಶಿಷ್ಟ ವಿಧದ ವಿಶ್ವ ಖ್ಯಾತ ಗೋಪುರ ಶಿಲ್ಪ (ಪಿರಮಿಡ್)ವೊಂದು ಚಿತ್ರ-9ರಲ್ಲಿದೆ:
ಅ. ಈ ಶಿಲ್ಪ ಪ್ರಸ್ತುತ ಯಾವ ದೇಶದಲ್ಲಿದೆ?
ಬ. ಈ ನಿರ್ಮಿತಿ ಯಾವ ನಾಗರಿಕತೆಗೆ ಸಂಬಂಧಿಸಿದೆ?

10. ಒಂದು ದಶಲಕ್ಷ ವರ್ಷಗಳಿಗೆ ಒಂದು ಸೆಕಂಡ್‌ನಷ್ಟೇ ವ್ಯತ್ಯಾಸ ತೋರಿಸುವ ಅತ್ಯಂತ ನಿಖರ ಗಡಿಯಾರ ಚಿತ್ರ-10ರಲ್ಲಿದೆ. ಈ ಕಾಲಯಂತ್ರ ಯಾವುದು?
ಅ. ಬೈಜಿಕ ಗಡಿಯಾರ
ಬ. ಜೈವಿಕ ಗಡಿಯಾರ
ಕ. ಕ್ವಾರ್ಟ್ಜ್ ಗಡಿಯಾರ
ಡ. ಪರಮಾಣು ಗಡಿಯಾರ

11. ವಿಚಿತ್ರ ರೂಪದ, ಆದರೂ ಬಹು ಪರಿಚಿತವಾದ ಮತ್ಸ್ಯವೊಂದು ಚಿತ್ರ-11ರಲ್ಲಿದೆ. ಈ ಮೀನನ್ನು ಗುರುತಿಸಬಲ್ಲಿರಾ?
ಅ. ಶಾರ್ಕ್
ಬ. ರೇ
ಕ. ಬೆಕ್ಕು ಮೀನು
ಡ. ಹಾವು ಮೀನು

12. ವಿಷಮಯ ಜೀವಿಗಳಲ್ಲೊಂದಾದ ಪ್ರಾಣಿ ಚೇಳು ಚಿತ್ರ -12ರಲ್ಲಿದೆ. ಚೇಳುಗಳ ಜೀವಿ ವರ್ಗಕ್ಕೇ ಸೇರಿದ, ಹಾಗಾಗಿ ಚೇಳುಗಳ ಅತ್ಯಂತ ಹತ್ತಿರದ ಸಂಬಂಧಿಯಾಗಿರುವ ಜೀವಿ ಈ ಪಟ್ಟಿಯಲ್ಲಿ ಯಾವುದು?
ಅ. ಸಹಸ್ರಪದಿ
ಬ. ಕದಿರಿಬ್ಬೆ
ಕ. ಜೇನ್ನೊಣ
ಡ. ನಾಗರ ಹಾವು
ಇ. ಜೇಡ

13. ಉನ್ನತ ಪರ್ವತ ಪ್ರದೇಶದ ಹಿಮ ನದಿಯೊಂದರ ದೃಶ್ಯ-13ರಲ್ಲಿದೆ. ಹಿಮನದಿಗಳೇ ಹೇರಳ ನದಿಗಳ ಜನನ ಮೂಲಗಳೂ ಆಗಿವೆ - ಹೌದಲ್ಲ? ನಮ್ಮ ದೇಶದ ಈ ಕೆಲ ಪ್ರಸಿದ್ಧ ನದಿಗಳ ಪೈಕಿ ಯಾವುವು ಹಿಮನದಿಗಳಲ್ಲಿ ಜನ್ಮ ತಳೆದಿವೆ?
ಅ. ಗಂಗಾ
ಬ. ಕಾವೇರಿ
ಕ. ಯಮುನಾ
ಡ. ಗೋದಾವರಿ
ಇ. ನರ್ಮದಾ
ಈ. ಬ್ರಹ್ಮಪುತ್ರ
ಉ. ಸಿಂಧೂ

ಉತ್ತರಗಳು:
1. ಬ. ಹವಳ
2. ಡ. ಜೇಡ ಮಂಗ
3. ಸೀಸ ಮತ್ತು ಬೆಳ್ಳಿ
4. ಬ. ಗ್ಯಾಸ್ಟ್ರೋಪೋಡಾ
5. ಬ, ಕ ಮತ್ತು ಈ
6. ಕ. ಬ್ಯಾಕ್ಟೀರಿಯಾಗಳ ಮೇಲೆ ದಾಳಿಮಾಡುತ್ತಿರುವ ಬಿಳಿ ರಕ್ತ ಕಣ
7. ಅ - ಈ ಹೇಳಿಕೆ ತಪ್ಪು
8. ಬ.ಆಮ್ಲಜನಕ
9. ಅ. ಮೆಕ್ಸಿಕೋ; ಬ. ಮಾಯನ್ ನಾಗರಿಕತೆ
10. ಡ. ಪರಮಾಣು ಗಡಿಯಾರ
11. ಬ. ರೇ
12. ಇ. ಜೇಡ
13. ಅ, ಕ, ಈ ಮತ್ತು ಉ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.