ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದ ಹತ್ತಿರ ಬೀಮಾನದಿ ಮತ್ತು ಅಮರ್ಜಾ ನದಿ ಸೇರಿಕೊಂಡಿರುವ ಸಂಗಮ ಪುಣ್ಯ ಸ್ಥಳದಲ್ಲಿ ನದಿ ನೀರಿಲ್ಲದೆ ಬತ್ತಿ ಹೋಗಿದ್ದರಿಂದ ನೆಲ ಬಿರುಕು ಬಿಟ್ಟಿರುವುದು
–ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್
ಮುಂಗಾರು ಮಾರುತವು ರಾಜ್ಯವನ್ನು ಪ್ರವೇಶಿಸಿ ಎರಡು ತಿಂಗಳಾದರೂ ವಾಡಿಕೆಯಷ್ಟು ಮಳೆ ಎಲ್ಲಿಯೂ ಆಗಿಲ್ಲ. ಆಗಸ್ಟ್ ತಿಂಗಳಲ್ಲಿ ಸ್ವಲ್ಪ ಮಳೆಯಾದ ಕಾರಣ ಬಿತ್ತನೆ ನಡೆದಿದೆ. ಆದರೆ, ಬಳಿಕ ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಒಣಗಿವೆ. ಕೆರೆ, ನದಿ, ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಳವಳಕಾರಿ ಎಂಬಷ್ಟು ಕಡಿಮೆ ಇದೆ. ಕುಡಿಯುವ ನೀರಿಗೂ ತತ್ವಾರ ಆಗಬಹುದು ಎಂಬ ಆತಂಕ ಮನೆ ಮಾಡಿದೆ. ಮಳೆ ಕೊರತೆಯು ರಾಜ್ಯದಾದ್ಯಂತ ಬರದ ಛಾಯೆಗೆ ಕಾರಣವಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.