ADVERTISEMENT

ಒಳನೋಟ: ಗಾಂಜಾ ಸುಳಿಯಲ್ಲಿ ರಾಜ್ಯ– ಗಾಂಜಾದಿಂದ ನರಗಳಿಗೆ ಭಾರೀ ಹಾನಿ; ಡಾ. ವಿಶಾಲ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 20:45 IST
Last Updated 12 ಫೆಬ್ರುವರಿ 2022, 20:45 IST
ಡಾ. ವಿಶಾಲ್‌ ರಾವ್‌        
ಡಾ. ವಿಶಾಲ್‌ ರಾವ್‌           

ಗಾಂಜಾ ಸೇವನೆ ವ್ಯಸನಕ್ಕೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಒಳಪಡುತ್ತಿದ್ದಾರೆ. ಖುಷಿ, ಮನರಂಜನೆಗಾಗಿ ಹೆಚ್ಚಿನವರು ಇದನ್ನು ತೆಗೆದುಕೊಳ್ಳುತ್ತಾರೆ. ಇದು ದೇಹ ಹಾಗೂ ಮಿದುಳಿನ ಮೇಲೆ ಬಲವಾದ ಪರಿಣಾಮ ಬೀರುತ್ತದೆ.ಗಾಂಜಾ ಸೇದಿದಾಗ ಅದರಲ್ಲಿರುವ ಟಿ.ಎಚ್.ಸಿ. ರಾಸಾಯನಿಕ, ಶ್ವಾಸಕೋಶಗಳಿಂದ ರಕ್ತ ಸೇರುತ್ತದೆ. ರಕ್ತ ಮಿದುಳಿಗೆ ಹಾಗೂ ದೇಹದ ಇತರ ಭಾಗಗಳಿಗೆ ರಾಸಾಯನಿಕವನ್ನು ಒಯ್ಯುತ್ತದೆ. ಇದರಿಂದ ಮಿದುಳು ದುರ್ಬಲವಾಗುತ್ತದೆ. ಹೆಚ್ಚಿನವರಿಗೆ ಇದರ ಸೇವನೆಯಿಂದ ನರ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.‌ ವ್ಯಕ್ತಿ ಮಾನಸಿಕವಾಗಿಯೂ ಕುಗ್ಗುತ್ತಾ ಹೋಗುತ್ತಾನೆ.

ತಂಬಾಕು ಉತ್ಪನ್ನಗಳ ಸೇವೆಯನ್ನು ದೇಶದಲ್ಲಿ ಕಾನೂನುಬದ್ಧಗೊಳಿಸಲಾಗಿದೆ. ಇದರ ಪರಿಣಾಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 30 ರಷ್ಟು ಜನರು ವ್ಯಸನಗಳಿಗೆ ಒಳಗಾಗಿದ್ದಾರೆ.ಮಾದಕ ವ್ಯಸನಕ್ಕೆ ಗಾಂಜಾ ಪ್ರವೇಶ ಕಲ್ಪಿಸುತ್ತದೆ. ಇದನ್ನು ಒಮ್ಮೆ ಪಡೆದರೆ ಮತ್ತೆ ಮತ್ತೆ ಪಡೆಯಬೇಕೆಂದು ಅನಿಸುತ್ತದೆ.ಯೌವ್ವನದಲ್ಲಿ ಆರಂಭವಾಗುವ ಈ ವ್ಯಸನಗಳು, ಜೀವನದ ಉದ್ದಕ್ಕೂ ಮುಂದುವರಿಯುತ್ತದೆ.

ಉಸಿರಾಟದ ತೊಂದರೆ, ಧೂಮಪಾನದಿಂದ ಉಂಟಾಗುವ ಎಲ್ಲ ರೀತಿಯ ಶ್ವಾಸಕೋಶದ ತೊಂದರೆಗಳು ಗಾಂಜಾ ಸೇದುವುದರಿಂದಲೂ ಉಂಟಾಗಬಹುದು. ಕೆಮ್ಮು, ಶ್ವಾಸಕೋಶದ ಸೋಂಕು ರೋಗಗಳು ಕಾಣಿಸಿಕೊಳ್ಳಬಹುದು.ಯುವಜನರಿಗೆ ಗಾಂಜಾದಿಂದ ಉಂಟಾಗುವ ಅಪಾಯಗಳ ಬಗ್ಗೆ ಅರಿವು ನೀಡಬೇಕು.ತಂಬಾಕು ಉತ್ಪನ್ನಗಳ ಸೇವನೆಗೆ ಕಡಿವಾಣ ಹಾಕಿದರೆ, ಗಾಂಜಾ ಸೇವನೆಗೂ ತಡೆ ಒಡ್ಡಲು ಸಾಧ್ಯ.

ADVERTISEMENT

–ಡಾ. ವಿಶಾಲ್ ರಾವ್, ಎಚ್‌.ಸಿ.ಜಿ ಆಸ್ಪತ್ರೆ ಕ್ಯಾನ್ಸರ್ ತಜ್ಞ, ತಂಬಾಕು ನಿಯಂತ್ರಣ ಸಂಬಂಧಿತ ಉನ್ನತ ಮಟ್ಟದ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.