ADVERTISEMENT

ಒಳನೋಟ: ಮಾತೃವಂದನಾ ವಂಚಿತ ಬಾಲ ಅಮ್ಮಂದಿರು

ವೆಂಕಟೇಶ ಜಿ.ಎಚ್.
Published 5 ಮಾರ್ಚ್ 2022, 22:45 IST
Last Updated 5 ಮಾರ್ಚ್ 2022, 22:45 IST
   

ಸರ್ಕಾರದಿಂದ ‘ವಯೋಮಿತಿ’ ಬೇಲಿ; ಕೃಷ್ಣಾ ತೀರದ ಹಳ್ಳಿಗಳಲ್ಲಿ ಅಪೌಷ್ಟಿಕತೆ ಪಿಡುಗು ಅಬಾಧಿತ

ಇದೊಂದು ಸಮಾಜದ ನೈತಿಕತೆ ಪ್ರಶ್ನೆ...

‘ಬಾಲ ಅಮ್ಮಂದಿರ ಸಮಸ್ಯೆ ಸರ್ಕಾರದ ಗಮನಕ್ಕೂ ಇದೆ. ಆದರೆ ಇದೊಂದು ಸಮಾಜದ ನೈತಿಕತೆಯ ಪ್ರಶ್ನೆ. ಹೀಗಾಗಿ ಅವರ ನೆರವಿಗೆ ಧಾವಿಸಲು ಹಿಂದೇಟು ಹಾಕುತ್ತಿದ್ದೇವೆ‘ ಎಂದು ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆಯ ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ADVERTISEMENT

’ಬಾಲ್ಯ ವಿವಾಹ ಮಾಡಿಕೊಂಡರೆ ಇಂತಹದ್ದೊಂದು ನೆರವಿನ ಪ್ಯಾಕೇಜ್ ಸಿಗಲಿದೆಯೇ ಎಂದು ನಾಳೆ ನೀವೇ (ಮಾಧ್ಯಮದವರು) ಪ್ರಶ್ನೆ ಮಾಡುತ್ತೀರಿ. ಸರ್ಕಾರದವರು ನೆರವಿಗೆ ಬರುತ್ತಾರೆ ಎಂದರೆ ನಾವೇಕೆ ಬಾಲ್ಯ ವಿವಾಹ ಮಾಡಬಾರದು ಎಂದು ಜನರು ಕೇಳುತ್ತಾರೆ. ಪರೋಕ್ಷವಾಗಿ ನಾವೇ ಈ ಪಿಡುಗು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಸುಮ್ಮನಿದ್ದೇವೆ’ ಎನ್ನುತ್ತಾರೆ.

ಅಪೌಷ್ಟಿಕತೆ ನಿವಾರಣೆಗೆ ಯೋಜನೆ

ಮಾತೃವಂದನಾ, ಮಾತೃಪೂರ್ಣ ಅಡಿ ಸರ್ಕಾರ ಗರ್ಭಿಣಿಯರಿಗೆ ನಗದು ರೂಪದಲ್ಲಿ ನೆರವಿನ ಜೊತೆಗೆ ಪ್ರತಿ ತಿಂಗಳು ಬೆಲ್ಲ, ಬೇಳೆ ಕಾಳು, ಮೊಟ್ಟೆ, ಚಿಕ್ಕಿ, ಅಕ್ಕಿ ಕೊಡುತ್ತಿದೆ. ಅಪೌಷ್ಟಿಕತೆ ನೀಗಿ ಮಗು ಚೆನ್ನಾಗಿ ಬೆಳೆಯಲಿ, ತಾಯಿಯ ಹೊಟ್ಟೆ ಒಳಗಿಂದಲೇ ತಯಾರಿ ಆಗಲಿ ಎಂಬುದು ಯೋಜನೆಯ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.