ADVERTISEMENT

ಕೊಡವ ಆಹಾರ ಖಾದ್ಯ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಕೊಡವ ಆಹಾರ ಖಾದ್ಯ
ಕೊಡವ ಆಹಾರ ಖಾದ್ಯ   

ಚಳಿಗಾಲಕ್ಕೂ ಆಹಾರ ಮೇಳಕ್ಕೂ ಎಲ್ಲಿಲ್ಲದ ನಂಟು. ಮೈನಡುಗುವ ಚಳಿಯಲ್ಲಿ ರುಚಿರುಚಿಯಾದ ಖಾದ್ಯಗಳನ್ನು ಸವಿಯುವ ಮಜಾವೇ ಬೇರೆ. ಚಳಿಗಾಲಕ್ಕಾಗಿಯೇ ನಗರದ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ಈಚೆಗೆ ಕೊಡಗಿನ ಆಹಾರೋತ್ಸವ ನಡೆಯಿತು. ಈ ಉತ್ಸವದಲ್ಲಿ ಆಹಾರಪ್ರಿಯರ ನಾಲಿಗೆ ತಣಿಸಿದ ಬಗೆಬಗೆಯ ಮಾಂಸ ಖಾದ್ಯಗಳ ತಯಾರಿಕಾ ವಿಧಾನವನ್ನು ತಿಳಿಸಿದ್ದಾರೆ ಬಾಣಸಿಗ ಆಂಥೋನಿ ಹುವಾಂಗ್

ಹಂದಿ ಸುಕ್ಕಾ

ಬೇಕಾಗುವ ಸಾಮಾಗ್ರಿಗಳು: 500 ಗ್ರಾಂ ಹಂದಿ ಮಾಂಸ, ಬೆಳ್ಳುಳ್ಳಿ ಎಸಳು 100 ಗ್ರಾಂ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ 100 ಗ್ರಾಂ, ಅರಿಶಿಣ ಪುಡಿ10 ಗ್ರಾಂ, ಗರಂ ಮಸಾಲ 30 ಗ್ರಾಂ, ಮೆಣಸಿನಕಾಯಿ ಪುಡಿ 30 ಗ್ರಾಂ, ಹಸಿಮೆಣಸಿನಕಾಯಿ –2, ಕೂಡುಂಪುಳಿ 20 ಗ್ರಾಂ ಅಥವ ಹುಣಸೆಹಣ್ಣಿನ ರಸ 20 ಗ್ರಾಂ.

ADVERTISEMENT

ಮಾಡುವ ವಿಧಾನ: ಪಾತ್ರೆಯಲ್ಲಿ ಹಸಿಮೆಣಸಿನಕಾಯಿ ತುಂಡು, ಹಂದಿ ಮಾಂಸ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, ಅರಿಶಿಣ, ಗರಂ ಮಸಾಲ, ಮೆಣಸಿನಕಾಯಿ ಪುಡಿ, ಉಪ್ಪು ಸೇರಿಸಿ ಹುರಿಯಿರಿ. ನಂತರ ಒಂದು ಗಂಟೆ ಬೇಯಲು ಬಿಡಿ, ನಂತರ ಮತ್ತೊಂದು ಪಾತ್ರೆಯಲ್ಲಿ ಕಾಳುಮೆಣಸಿನ ಪುಡಿಯೊಂದಿಗೆ ಬೆಳ್ಳುಳ್ಳಿ ತುಂಡುಗಳನ್ನು ಹುರಿದುಕೊಳ್ಳಿ. ಈ ಮಿಶ್ರಣ ಕಂದು ಬಣ್ಣವಾದ ಮೇಲೆ ಹುರಿದು ಇಟ್ಟುಕೊಂಡ ಮಾಂಸದೊಂದಿಗೆ ಸೇರಿಸಿ. ಕೊನೆಯಲ್ಲಿ ಹುಳಿ ಹಾಕಿ ಕೈಯಾಡಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.