ADVERTISEMENT

ಪೌಷ್ಟಿಕತೆಗಾಗಿ ಗೋದಿ ಹೂರಣ

​ಪ್ರಜಾವಾಣಿ ವಾರ್ತೆ
Published 18 ಮೇ 2012, 19:30 IST
Last Updated 18 ಮೇ 2012, 19:30 IST

ಗೋದಿ ಉಂಡೆ
ಸಾಮಗ್ರಿ:
ಗೋದಿ 1ಕಪ್, ಸಕ್ಕರೆ, ತುಪ್ಪ ಮುಕ್ಕಾಲು ಕಪ್, ಗೋಡಂಬಿ, ಒಣ ದ್ರಾಕ್ಷಿ ಸ್ವಲ್ಪ, ಕಡಲೆ ಬೇಳೆ ಕಾಲು ಕಪ್.

ವಿಧಾನ:
ಗೋದಿ, ಕಡಲೆ ಬೇಳೆ ಹುರಿದು ನುಣ್ಣಗೆ ಪೌಡರ್ ಮಾಡಿಕೊಳ್ಳಿ. ಆರಿದ ನಂತರ ತುಪ್ಪ ಕರಗಿಸಿ ಕಲಸಿ. ಸಕ್ಕರೆ ಪುಡಿ, ಒಣದ್ರಾಕ್ಷಿ, ಗೋಡಂಬಿ ಹಾಕಿ ಚೆನ್ನಾಗಿ ಕಲಿಸಿ ಉಂಡೆ ಕಟ್ಟಿ.

ಗಾರಿಗೆ
ಸಾಮಗ್ರಿ:
ಗೋದಿ ಹಿಟ್ಟು 1 ಕಪ್, ಬೆಲ್ಲ ಮುಕ್ಕಾಲು ಕಪ್, ನೀರು ಕಾಲು ಕಪ್, ಎಣ್ಣೆ ಕರಿಯಲು, ಹುರಿಕಡಲೆ, ಸೋಂಪು ಸ್ವಲ್ಪ.

ವಿಧಾನ: ಒಂದು ಪಾತ್ರೆಯಲ್ಲಿ ಬೆಲ್ಲ ನೀರು ಹಾಕಿ ಒಲೆ ಮೇಲಿಟ್ಟು ಬೆಲ್ಲ ಕರಗಿದ ನಂತರ ಗೋದಿಹಿಟ್ಟು ಹಾಕಿ ಕಲಸಿ ಕೆಳಗಿಳಿಸಿ. ಈಗ ಹುರಿಕಡಲೆ ಸ್ವಲ್ಪ ಸೋಂಪು ಹಾಕಿ ನಾದಿ. ಚಪಾತಿಯಂತೆ ಲಟ್ಟಿಸಿ ಬೇಕಾದ ಆಕಾರಕ್ಕೆ ಕತ್ತರಿಸಿ ಎಣ್ಣೆಯಲ್ಲಿ ಕರಿಯಿರಿ.

ಮಾದ್ಲಿ
ಸಾಮಗ್ರಿ:
ಗೋದಿ ರವೆ 1 ಕಪ್, ಸಕ್ಕರೆ, ಹುರಿಕಡಲೆ, ಸೋಂಪು-ಸ್ವಲ್ಪ, ಒಣ ಕೊಬ್ಬರಿ ತುರಿ ಕಾಲುಕಪ್

ವಿಧಾನ: ಗೋದಿ ರವೆಯನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿ 15 ನಿಮಿಷ ನೆನೆಯಲು ಬಿಡಿ. ಚಪಾತಿಯಂತೆ ಲಟ್ಟಿಸಿ ಎಣ್ಣೆ ಹಾಕದೆ ಬೇಯಿಸಿ. ಚಪಾತಿಯನ್ನು ತುಣುಕು ಮಾಡಿ ಮಿಕ್ಸಿಗೆ ಹಾಕಿ ರವೆಯಂತೆ ಪುಡಿ ಮಾಡಿಕೊಳ್ಳಿ.

ಒಂದು ಪಾತ್ರೆಗೆ ಹಾಕಿ ಇದಕ್ಕೆ ರುಚಿಗೆ ಬೀಕಾದಷ್ಟು ಸಕ್ಕರೆ, ಸೋಂಪು, ಹುರಿಕಡಲೆ, ಒಣಕೊಬ್ಬರಿ ತುರಿ ಹಾಕಿ ಚೆನ್ನಾಗಿ ಕಲಸಿ. ತಿನ್ನುವಾಗ ತುಪ್ಪ ಬೆರೆಸಿ ಸವಿಯಬಹುದು. ಇಷ್ಟವಿದ್ದವರೂ ಹಾಲು-ತುಪ್ಪ ಬೆರೆಸಿ ಸವಿಯುತ್ತಾರೆ. 
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.