ADVERTISEMENT

ಪ್ರಯಾಣದಲ್ಲಿ ಬಾದಾಮಿ ತಿನ್ನಿ...

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 19:30 IST
Last Updated 3 ಜೂನ್ 2011, 19:30 IST

ದೂರ ಪ್ರಯಾಣದಲ್ಲಿ ಹಸಿವಾದಾಗ ಸೇವಿಸಲೆಂದೋ...ಟೈಮ್ ಪಾಸ್‌ಗೆಂದೋ... ಸಾಮಾನ್ಯವಾಗಿ ಬಿಸ್ಕೆಟ್, ಹಣ್ಣುಗಳನ್ನು ತೆಗೆದುಕೊಂಡು ಹೋಗುವುದು ರೂಢಿ. ಅದರಲ್ಲೂ ಪುಟ್ಟ ಮಕ್ಕಳಂತೂ ಕುರುಕಲು ತಿಂಡಿಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಬಿಸ್ಕೆಟ್ ಹಾಗೂ ಹಣ್ಣುಗಳನ್ನು ತಿನ್ನುವುದೇನೋ ಸರಿ, ಆದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವ ಕುರುಕಲು ತಿಂಡಿಗಳನ್ನು ಯಾಕೆ ತಿನ್ನಬೇಕು?

ಬಾದಾಮಿ ಮಹತ್ವ...
ದೂರ ಪ್ರಯಾಣದಲ್ಲಿ ನಿಮ್ಮಂದಿಗೆ ಒಂದಿಷ್ಟು ಬಾದಾಮಿ ತೆಗೆದುಕೊಂಡು ಹೋದರೆ ಒಳ್ಳೆಯದು. ಇದನ್ನು ಸುಲಭವಾಗಿ ತೆಗೆದುಕೊಂಡುಹೋಗಬಹುದು. ಇದು ದಣಿದ ದೇಹಕ್ಕೆ ಚೈತನ್ಯ ನೀಡಬಲ್ಲುದು. ಬಾದಾಮಿಯಲ್ಲಿ  ಆ್ಯಂಟಿಆಕ್ಸಿಡಂಟ್, ಮ್ಯಾಂಗನೀಸ್ ರಿಬೊಫ್ಲೆವಿನ್ (ವಿಟಮಿನ್ ಬಿ2), ತಾಮ್ರ  ಇತ್ಯಾದಿ ಅಂಶಗಳು ಹೇರಳವಾಗಿದ್ದು, ಶಕ್ತಿಯ ಉತ್ಪಾದನೆಗೆ ನೆರವಾಗುತ್ತವೆ.

ನಿಮ್ಮ ಆಹಾರದಲ್ಲಿ ಸಿಗದ ಕೆಲವೊಂದು ಪೌಷ್ಟಿಕಾಂಶಗಳು ಬಾದಾಮಿ ತಿನ್ನುವುದರಿಂದ ಸಿಗುತ್ತವೆ. ಖನಿಜ, ನಾರಿನಂಶ, ವಿಟಮಿನ್ ಇ ಹಾಗೂ ಆರೋಗ್ಯಯುತ ಕೊಬ್ಬಿನ ಅಂಶಗಳನ್ನು ಹೊಂದಿರುವ ಬಾದಾಮಿ ಚರ್ಮದ ರಕ್ಷಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT