ADVERTISEMENT

ಬೇಳೆಯಿಲ್ಲದ ಸಾಂಬಾರು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 19:40 IST
Last Updated 14 ಮಾರ್ಚ್ 2018, 19:40 IST
ಬೇಳೆಯಿಲ್ಲದ ಸಾಂಬಾರು
ಬೇಳೆಯಿಲ್ಲದ ಸಾಂಬಾರು   

ನನ್ನೂರು ಮಂಗಳೂರು. ಪದವಿ ಶಿಕ್ಷಣ ಮುಗಿದ ಬಳಿಕ ನನ್ನಮ್ಮ ಅಡುಗೆ ಕಲಿಯಲು ದಿನಾ ಹೇಳುತ್ತಿದ್ದರು. ‘ಮದುವೆಯ ನಂತರ ಅತ್ತೆಯ ಮನೆಯಲ್ಲಿ ಅಡುಗೆ ಯಾರು ಮಾಡಿಕೊಡುತ್ತಾರೆ? ಬೈಸಿಕೊಳ್ಳುತ್ತಿ’ ಎನ್ನುತ್ತಿದ್ದರು. ನಾನು ಅವರ ಮಾತಿಗೆ ಸೊಪ್ಪು ಹಾಕುತ್ತಿರಲಿಲ್ಲ. ಮನೆಯಲ್ಲಿ ನಾನು ಸಣ್ಣವಳಾಗಿದ್ದರಿಂದ ಮುದ್ದು ಜಾಸ್ತಿಯಾಗಿತ್ತು. ಬೇರೆ ಯಾರೂ ನನ್ನನ್ನು ಒತ್ತಾಯ ಮಾಡುತ್ತಿರಲಿಲ್ಲ.

ಒಂದು ವರ್ಷದ ನಂತರ ನನ್ನ ಮದುವೆಯಾಯಿತು. ಮದುವೆಯ ನಂತರ ಬೆಂಗಳೂರಿನಲ್ಲಿ ನನ್ನ ವಾಸ. ಅಡುಗೆಮನೆಯಲ್ಲಿ ಅತ್ತೆ ನಿರ್ದೇಶಕಿಯಾದರೆ, ಸೊಸೆ ಕಲಾವಿದೆ. ಒಂದು ದಿನ ಅನಿವಾರ್ಯ ಕಾರಣದಿಂದ ನನಗೆ ಸಾಂಬಾರು ಮಾಡುವ ಕೆಲಸ ಕೊಟ್ಟು ಅತ್ತೆಯವರು ಹೊರಗೆ ಹೊರಟರು. ಕೆಲಸ ತಿಳಿಯದೇ ನಾನು ನನ್ನ ಅಮ್ಮನಿಗೆ ದೂರವಾಣಿ ಕರೆ ಮಾಡಿ ಸಾಂಬಾರು ಮಾಡುವ ವಿಧಾನ ತಿಳಿದುಕೊಂಡೆ. ಆದರೆ ಆತುರದಲ್ಲಿ ಕುಕ್ಕರ್‌ಗೆ ಬೇಳೆ ಹಾಕುವುದನ್ನೇ ಮರೆತಿದ್ದೆ. ಬರೀ ತರಕಾರಿ, ಖಾರದ ಪುಡಿ, ಉಪ್ಪು ಹಾಕಿ ಬೇಯಿಸಿದ್ದೆ.

ಯಜಮಾನರಿಗೆ ನಡೆದ ವಿಷಯವನ್ನು ತಿಳಿಸಿದೆ. ಅತ್ತೆ ಬರುವುದರೊಳಗೆ ಹತ್ತಿರದ ದರ್ಶಿನಿಯಿಂದ ಸಾಂಬಾರು ತಂದು ಕೊಟ್ಟರು. ಅತ್ತೆಗೆ ಅದನ್ನೇ ಬಡಿಸಿದೆ. ರುಚಿಯಿಂದ ಅತ್ತೆಗೆ ಅದು ಹೋಟೆಲ್‌ ಸಾಂಬಾರು ಎಂದು ಗೊತ್ತಾಯಿತು. ಆದರೆ ಸೊಸೆಯ ಕಷ್ಟವನ್ನು ಅರಿತ ಅತ್ತೆ ಮೆಚ್ಚುಗೆಯ ಮಾತಿನಿಂದ ನನ್ನ ಭಯವನ್ನು ದೂರ ಮಾಡಿದರು. ಮುಂದೆ ಅವರಿಂದಲೇ ಅಡುಗೆ ಕೆಲಸವನ್ನು ಕಲಿತುಕೊಂಡೆ.

ADVERTISEMENT

– ಫಬಿನ ಮೊಹಮ್ಮದ್, ಮುತ್ಯಾಲನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.