ADVERTISEMENT

ಆಹಾರ: ಆಹಾ ಮಾವಿನ ಹೂವಿನ ತಂಬುಳಿ.. ಬಸಳೆ ಸೊಪ್ಪಿನ ತಂಬುಳಿ

ಬೇಸಿಗೆಯಲ್ಲಿ ತಂಬುಳಿ ಇಲ್ಲದೆ ಊಟ ಪೂರ್ಣವಲ್ಲ.

ಪವಿತ್ರಾ ಭಟ್
Published 1 ಮಾರ್ಚ್ 2024, 21:41 IST
Last Updated 1 ಮಾರ್ಚ್ 2024, 21:41 IST
<div class="paragraphs"><p>ಮಾವಿನ ಹೂವಿನ ತಂಬುಳಿ</p></div>

ಮಾವಿನ ಹೂವಿನ ತಂಬುಳಿ

   

ಬೇಸಿಗೆಯಲ್ಲಿ ತಂಬುಳಿ ಇಲ್ಲದೆ ಊಟ ಪೂರ್ಣವಲ್ಲ. ಅದಕ್ಕೆ, ‘ಭೋಜನೆ ತಂಬುಳೀಂ ಚೈವ, ಶಯನೆ ಕಂಬಳಿ ಪ್ರಿಯಂ’ ಎಂಬ ಮಾತಿದೆ. ಊಟಕ್ಕೆ ತಂಬುಳಿ, ನಿದ್ದೆಗೆ ಕಂಬಳಿ ಎರಡೂ ಇರಲೇಬೇಕು ಎನ್ನುವುದು ಇದರರ್ಥ. ಬಿರು ಬೇಸಿಗೆಯಲ್ಲಿ ತಂಪಾಗಿರಲು ಯಾವೆಲ್ಲಾ ತಂಬುಳಿಗಳನ್ನು ಮಾಡಬಹುದು ಎನ್ನುವ ಮಾಹಿತಿ ನೀಡಿದ್ದಾರೆ ಪವಿತ್ರಾ ಭಟ್

–––

ADVERTISEMENT

ಬೇಸಿಗೆಯಲ್ಲಿ ತಂಬುಳಿ ಇಲ್ಲದೆ ಊಟ ಪೂರ್ಣವಲ್ಲ. ಅದಕ್ಕೆ, ‘ಭೋಜನೆ ತಂಬುಳೀಂ ಚೈವ, ಶಯನೆ ಕಂಬಳಿ ಪ್ರಿಯಂ’ ಎಂದು ಸುಭಾಷಿತ ಹೇಳುತ್ತದೆ. ಊಟಕ್ಕೆ ತಂಬುಳಿ, ನಿದ್ದೆಗೆ ಕಂಬಳಿ ಎರಡೂ ಇರಲೇಬೇಕು ಎನ್ನುವುದು ಇದರರ್ಥ. ಬಿರು ಬೇಸಿಗೆಯಲ್ಲಿ ತಂಪಾಗಿರಲು ಯಾವೆಲ್ಲಾ ತಂಬುಳಿಗಳನ್ನು ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಬಸಳೆ ಸೊಪ್ಪಿನ ತಂಬುಳಿ


ಬೇಕಾಗುವ ಸಾಮಗ್ರಿ-
ಬಸಳೆ ಸೊಪ್ಪು- 7,8 ಎಲೆಗಳು
ಜೀರಿಗೆ–1‌‌/2 ಚಮಚ
ಶುಂಠಿ- ಸಣ್ಣ ಚೂರು
ಮೊಸರು ಅಥವಾ ಮಜ್ಜಿಗೆ- 1\2 ಕಪ್
ತೆಂಗಿನ ತುರಿ- 1\2 ಕಪ್
ಹಸಿ ಮೆಣಸಿನಕಾಯಿ- 1–2
ಉಪ್ಪು- ರುಚಿಗೆ ತಕ್ಕಷ್ಟು
ಒಗ್ಗರಣೆಗೆ- ಎಣ್ಣೆ, ಸಾಸಿವೆ, ಕರಿಬೇವು

ಮಾಡುವ ವಿಧಾನ
ಮೊದಲಿಗೆ ಬಸಳೆ ಸೊಪ್ಪನ್ನು ತೊಳೆದು ಕತ್ತರಿಸಿಕೊಳ್ಳಿ. ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಬಸಳೆ ಸೊಪ್ಪನ್ನು ಬಾಡಿಸಿಕೊಳ್ಳಿ.
ನಂತರ ಬಸಳೆ ಸೊಪ್ಪು, ಜೀರಿಗೆ, ಶುಂಠಿ, ತೆಂಗಿನ ತುರಿ, ಹಸಿ ಮೆಣಸಿನ ಕಾಯಿ ಸೇರಿಸಿ ರುಬ್ಬಿಕೊಳ್ಳಿ. ಬಾಣಲೆಗೆ 2 ಚಮಚ ಎಣ್ಣೆ ಹಾಕಿ. ಸಾಸಿವೆ ಕರಿಬೇವು ಹಾಗೂ ರುಬ್ಬಿದ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ. ಕೊನೆಯಲ್ಲಿ ಇದಕ್ಕೆ ಅರ್ಧ ಕಪ್ ಮಜ್ಜಿಗೆ ಅಥವಾ ಮೊಸರು ಸೇರಿಸಿದರೆ ಬಸಳೆ ಸೊಪ್ಪಿನ ತಂಬುಳಿ ಸವಿಯಲು ಸಿದ್ಧ

–––––––––––––––

ಮಾವಿನ ಹೂವಿನ ತಂಬುಳಿ

ಬೇಕಾಗುವ ಸಾಮಗ್ರಿ-
ಮಾವಿನ ಹೂವು -5\6
ಜೀರಿಗೆ- 1 ಚಮಚ
ಎಳ್ಳು-1 ಚಮಚ
ಮೊಸರು\ ಮಜ್ಜಿಗೆ- 1/2 ಕಪ್‌
ತೆಂಗಿನ ತುರಿ – 1/2 ಕಪ್‌
ಹಸಿ ಮೆಣಸಿನಕಾಯಿ-1
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ– ಎಣ್ಣೆ, ಸಾಸಿವೆ, ಇಂಗು, ಎಳ್ಳು

ಮಾಡುವ ವಿಧಾನ
ಮಾವಿನ ಹೂವನ್ನು ಚೆನ್ನಾಗಿ ತೊಳೆದು ಬೇರ್ಪಡಿಸಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಮಾವಿನ ಹೂವು, ಅರ್ಧ ಚಮಚ ಎಳ್ಳು, ಜೀರಿಗೆ ಹಾಕಿ 1 ನಿಮಿಷ ಹುರಿದುಕೊಳ್ಳಿ. ಬಳಿಕ ಹುರಿದಿಟ್ಟ ಮಾವಿನ ಹೂವಿನ ಮಿಶ್ರಣ, ತೆಂಗಿನ ತುರಿ, ಹಸಿಮೆಣಸು, ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣಕ್ಕೆ ಮೊಸರು ಸೇರಿಸಿ. ಒಗ್ಗರಣೆಗೆ ಎಣ್ಣೆ, ಸಾಸಿವೆ, ಚಿಟಿಕೆ ಇಂಗು, ಎಳ್ಳು ಸೇರಿಸಿ ಮಿಶ್ರಣಕ್ಕೆ ಹಾಕಿದರೆ ರುಚಿಯಾದ ಮಾವಿನ ಹೂವಿನ ತಂಬುಳಿ ಸಿದ್ಧ

–––––––––––––––

ತೊಂಡೆಕಾಯಿ ತಂಬುಳಿ
ಬೇಕಾಗುವ ಸಾಮಗ್ರಿ-
ಎಳೆಯ ತೊಂಡೆಕಾಯಿ- 4 ರಿಂದ 5
ಎಳ್ಳು – 1 ಚಮಚ
ತೆಂಗಿನ ತುರಿ- 1\2 ಕಪ್‌
ಮೊಸರು- 1\2 ಕಪ್‌
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ – ಎಣ್ಣೆ , ಸಾಸಿವೆ, ಕರಿಬೇವು, ಒಣಮೆಣಸಿನಕಾಯಿ (1)

ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಾಕಿ, ತೊಂಡೆಕಾಯಿಯನ್ನು ಸಣ್ಣಗೆ ಕತ್ತರಿಸಿಕೊಂಡು ಹಾಕಿ, ಅದಕ್ಕೆ ಎಳ್ಳು ಹಾಕಿ ಹುರಿದುಕೊಳ್ಳಿ. ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಮಿಕ್ಸಿ ಜಾರ್‌ಗೆ ತೆಂಗಿನ ತುರಿ, ಬೇಯಿಸಿದ ತೊಂಡೆಕಾಯಿ, ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಅದನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ಮೊಸರು ಸೇರಿಸಿಕೊಳ್ಳಿ. ಒಗ್ಗರಣೆಗೆ ಸಾಸಿವೆ, ಕರಿಬೇವು, ಒಣಮೆಣಸಿನಕಾಯಿ ಹಾಕಿ ಮಿಶ್ರಣಕ್ಕೆ ಸೇರಿಸಿದರೆ ತೊಂಡೆಕಾಯಿ ತಂಬುಳಿ ರೆಡಿ.

–––––––––––––––––

ಲೆಮನ್‌ ಗ್ರಾಸ್‌ \ ಮಜ್ಜಿಗೆ ಹುಲ್ಲಿನ ತಂಬುಳಿ

ಬೇಕಾಗುವ ಸಾಮಗ್ರಿ-
ತೆಂಗಿನ ತುರಿ- 1\2 ಕಪ್
ಮಜ್ಜಿಗೆ ಹುಲ್ಲು- 7\8
ಶುಂಠಿ- ಸಣ್ಣ ಚೂರು
ಮಜ್ಜಿಗೆ- 1 ಕಪ್‌
ಉಪ್ಪು– ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಮೊದಲು ಶುಂಠಿ ಹಾಗೂ ಮಜ್ಜಿಗೆ ಹುಲ್ಲನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಳ್ಳಿ. ನಂತರ ಅದಕ್ಕೆ ತೆಂಗಿನ ತುರಿಯನ್ನು ಹಾಕಿ ರುಬ್ಬಿಕೊಂಡು, ಸೋಸಿಕೊಳ್ಳಿ.

ಸೋಸಿ ರಸಹಿಂಡಿ ತೆಗೆದ ಮಿಶ್ರಣಕ್ಕೆ ಮಜ್ಜಿಗೆ ಹಾಗೂ ಉಪ್ಪನ್ನು ಹಾಕಿ ಬೇಕಷ್ಟು ಪ್ರಮಾಣದಲ್ಲಿ ನೀರನ್ನು ಬೆರೆಸಿಕೊಂಡರೆ, ಸ್ವಾದಭರಿತ ಹಾಗೂ ಆರೋಗ್ಯಕರ ತಂಬುಳಿ ಸೇವಿಸಲು ತಯಾರು.

ಬಸಳೆ ಸೊಪ್ಪಿನ ತಂಬುಳಿ

ಬೇಕಾಗುವ ಸಾಮಗ್ರಿ: ಬಸಳೆ ಸೊಪ್ಪು- 7,8 ಎಲೆಗಳು, ಜೀರಿಗೆ–1‌‌/2 ಚಮಚ, ಶುಂಠಿ- ಸಣ್ಣ ಚೂರು, ಮೊಸರು ಅಥವಾ ಮಜ್ಜಿಗೆ- 1\2 ಕಪ್,ತೆಂಗಿನ ತುರಿ- 1\2 ಕಪ್, ಹಸಿ ಮೆಣಸಿನಕಾಯಿ- 1–2, ಉಪ್ಪು- ರುಚಿಗೆ ತಕ್ಕಷ್ಟು
ಒಗ್ಗರಣೆಗೆ- ಎಣ್ಣೆ, ಸಾಸಿವೆ, ಕರಿಬೇವು

ಮಾಡುವ ವಿಧಾನ:
ಮೊದಲಿಗೆ ಬಸಳೆ ಸೊಪ್ಪನ್ನು ತೊಳೆದು ಕತ್ತರಿಸಿಕೊಳ್ಳಿ. ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಬಸಳೆ ಸೊಪ್ಪನ್ನು ಬಾಡಿಸಿಕೊಳ್ಳಿ. ನಂತರ ಬಸಳೆ ಸೊಪ್ಪು, ಜೀರಿಗೆ, ಶುಂಠಿ, ತೆಂಗಿನ ತುರಿ, ಹಸಿ ಮೆಣಸಿನ ಕಾಯಿ ಸೇರಿಸಿ ರುಬ್ಬಿಕೊಳ್ಳಿ. ಬಾಣಲೆಗೆ 2 ಚಮಚ ಎಣ್ಣೆ ಹಾಕಿ. ಸಾಸಿವೆ ಕರಿಬೇವು ಹಾಗೂ ರುಬ್ಬಿದ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ. ಕೊನೆಯಲ್ಲಿ ಇದಕ್ಕೆ ಅರ್ಧ ಕಪ್ ಮಜ್ಜಿಗೆ ಅಥವಾ ಮೊಸರು ಸೇರಿಸಿದರೆ ಬಸಳೆ ಸೊಪ್ಪಿನ ತಂಬುಳಿ ಸವಿಯಲು ಸಿದ್ಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.