ADVERTISEMENT

ಅಪರೂಪದ ಸಿಂಗಪುರ ‘ಸೀ ಫುಡ್’

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 14:32 IST
Last Updated 16 ಜೂನ್ 2019, 14:32 IST
ಶೆಫ್‌ ದೇವೇಂದ್ರ ಸಿಂಗ್‌ ರಾವತ್‌
ಶೆಫ್‌ ದೇವೇಂದ್ರ ಸಿಂಗ್‌ ರಾವತ್‌   

ಜ ಪಾನ್‌, ಥಾಯ್ಲೆಂಡ್‌, ಇಂಡೊನೇಷ್ಯಾ, ಸಿಂಗಪುರ ಸೇರಿದಂತೆ ಪೆಸಿಫಿಕ್‌ ರಾಷ್ಟ್ರಗಳ ವಿಭಿನ್ನ ರುಚಿಯ30 ಬಗೆಯ ಸಮುದ್ರ ಆಹಾರ ಸವಿಯುವ ಅಪರೂಪದ ಅವಕಾಶವನ್ನು ಹಲಸೂರು ರಸ್ತೆಯ ಕಾನ್‌ರಾಡ್‌ ಹೋಟೆಲ್‌ನಲ್ಲಿರುವ ಮಿಕುಸು ರೆಸ್ಟೋರೆಂಟ್‌ ನಗರದ ಆಹಾರ ಪ್ರಿಯರಿಗೆ ಒದಗಿಸಿದೆ.

ಜೂನ್‌ 7ರಿಂದ ಆರಂಭವಾಗಿರುವ ‘ಸಿಂಗಪುರ ಆಹಾರ ಉತ್ಸವ’ದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಶೆಫ್‌ ಲಿವ್‌ ಸೂನ್‌ ಲಿವ್‌ ಮತ್ತು ದೇವೇಂದ್ರ ಸಿಂಗ್‌ ರಾವತ್‌ ಜೋಡಿ ಸಾಂಪ್ರದಾಯಿಕ ಸಿಂಗಪುರ ಖಾದ್ಯಗಳನ್ನು ಉಣ ಬಡಿಸುತ್ತಿದೆ. ಸಿಂಗಪುರದ ಸಾಂಪ್ರದಾಯಿಕ ರುಚಿಯನ್ನು ಹಾಗೆಯೇ ಉಳಿಸಿಕೊಂಡು ಖಾದ್ಯಗಳಿಗೆ ಜಾಗತಿಕ ಸ್ಪರ್ಶ ನೀಡುವಲ್ಲಿ ಲಿವ್‌ಎತ್ತಿದ ಕೈ. ಮೀನು, ಸಿಗಡಿ ಮೀನು, ಚಿಕನ್‌ ವಿಂಗ್ಸ್, ಚಿಕನ್‌ ರೈಸ್‌, ಏಡಿ, ಹುರಿದ ಬೇಬಿ ಅಕ್ಟೋಪಸ್‌, ಮಶ್ರೂಮ್‌, ಕಟ್ಟಿಗೆಯಲ್ಲಿ ಸುಟ್ಟ ಬ್ಲಾಕ್‌ ಪೆಪ್ಪರ್‌ ದನದ ಮಾಂಸ ನಾಲಿಗೆ ಚಪಲ ತಣಿಸುತ್ತವೆ.

ಚಿಲ್ಲಿ ಕ್ರ್ಯಾಬ್‌, ಕ್ರಿಸ್ಪಿ ಮಶ್ರೂಮ್‌, ಸೂಪ್‌ ಹಾಂಗೋಶಾವ್, ಪೀಯೋನಿ ಕ್ರ್ಯಾಬ್ ಫ್ರೀಟ್ಟೆರ್ಸ, ಮಾರಿನೆಟೆಡ್ ಬೇಬಿ ಅಕ್ಟೋಪಸ್, ಏಶಿಯನ್ ವೆಜಿಟೆಬಲ್ ರೈಸ್ ಪೆಪ್ಪರ್ ರೋಲ್, ಟ್ಯಾಮರಿಂಡ್‌ ಸಿಬಾಸ್, ಸ್ಟರ್‌ ಪ್ರೈಡ್ ಸ್ವೀಟ್‌ ಅಂಡ್ ಸೋರ್ ಚಿಕನ್, ಪ್ರೈಡ್ ಎಗ್ ಪ್ಲಾಂಟ್ ವಿಥ್ ಸ್ನೋವ್‌ ಅಂಡ್ ಆರೆಂಜ್ ಸಾಸ್, ಹೊಕ್ಕೇನ್‌ ಮೀ, ವೆಜಿಟೆಬಲ್ ಬ್ರೈಸಡ್ ನೂಡಲ್ ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತವೆ.ಜೂನ್ 20ರ ವರೆಗೆ ಉತ್ಸವ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.