ADVERTISEMENT

ಪಾಯಸ ಆಯಿತು ಹಾಲುಬಾಯಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 10:59 IST
Last Updated 16 ಜೂನ್ 2018, 10:59 IST
ಪಾಯಸ ಆಯಿತು ಹಾಲುಬಾಯಿ
ಪಾಯಸ ಆಯಿತು ಹಾಲುಬಾಯಿ   

ನನ್ನ ಅಮ್ಮ ಹಾಲುಬಾಯಿ ಮಾಡೋದ್ರಲ್ಲಿ ಎಕ್ಸ್‌ಪರ್ಟ್‌. ಮನೆಗೆ ಯಾರಾದರೂ ನೆಂಟರು ಬಂದರೆ ದಿಢೀರ್ ಹಾಲುಬಾಯಿ ಮಾಡುತ್ತಿದ್ದಳು. ಅಮ್ಮ ಮಾಡೋದನ್ನು ನಾನು ನೋಡಿದ್ದೆ.

ಮನೆಯವರೆಲ್ಲ ಮದುವೆಗೆ ಹೋಗಿದ್ದರು. ನಾನು ಮನೆಯಲ್ಲೇ ಇದ್ದೆ. ಅಪರೂಪಕ್ಕೆ ನನ್ನ ಗೆಳತಿ ಶೀಲಾ ಮನೆಗೆ ಬಂದಳು. ಅವಳಿಗೆ ಸಿಹಿ ಅಂದ್ರೆ ಇಷ್ಟ. ಯಾವಾಗಲೂ ಅಮ್ಮ ಮಾಡಿದ ಹಾಲುಬಾಯಿಯಲ್ಲಿ ಅವಳಿಗೂ ಒಂದು ಪಾಲು ಸಿಗುತಿತ್ತು. ಹಾಗಾಗಿ ನಾನು ಅವಳಿಗೆ ತಿನ್ನಲು ಹಾಲುಬಾಯಿ ಮಾಡಿ ಕೊಡೋಣ ಅಂತ ಗೋಧಿ ಹಿಟ್ಟು, ಬೆಲ್ಲ, ತೆಂಗಿನ ಕಾಯಿ ಕಾಯಿ ಎಲ್ಲ ರೆಡಿ ಮಾಡಿಕೊಂಡೆ. ಮೊದಲು ಗೋಧಿ ಹಿಟ್ಟನ್ನು ನೀರಿನಲ್ಲಿ ನೆನೆಸಿಟ್ಟೆ. ಆದರೆ ಎಷ್ಟು ನಿರು ಹಾಕಬೇಕು ಎಂದು ಗೊತ್ತಾಗಲಿಲ್ಲ. ಅಂದಾಜಿನ ಮೇಲೆ ನೀರು ಹಾಕಿ ನೆನೆಸಿ ಬೆಲ್ಲದ ಪುಡಿ, ಕಾಯಿ ತುರಿ ಎಲ್ಲ ಹಾಕಿ ಮಿಕ್ಸಿ ಮಾಡಿ ಬಾಣಲೆಗೆ ಸುರಿದು ಹಾಕಿ ಕೈ ಆಡಿಸಲು ಶುರು ಮಾಡಿದೆ.

ಆದ್ರೆ ಕೈ ಆಡಿಸುತ್ತಾ ಕೈ ಆಡಿಸುತ್ತಾ ಕೈ ಸೋತು ಹೋಯಿತೇ ವಿನಃ, ಹಾಲುಬಾಯಿ ಗಟ್ಟಿ ಆಗಲಿಲ್ಲ. ನನಗೆ ಏನು ಮಾಡಲು ತೋಚಲಿಲ್ಲ. ಸ್ವವ್ ಆರಿಸಿ ಬಾಣಲೆ ಕೆಳಗಿಟ್ಟೆ. ಈಗ ಶೀಲಾಳಿಗೆ ಏನು ಕೊಡಲಿ ಎಂದು ಯೋಚಿಸುವಾಗ ಇದಕ್ಕೆ ಹಾಲು ಹಾಕಿ ಕುದಿಸಿದರೆ ಹೇಗೆ ಎಂದು ತಲೆ ಓಡಿತು. ಹಾಲು ಸೇರಿಸಿ ಕುದಿಸಿ, ಶೀಲಾಳಿಗೆ ಬಿಸಿ ಬಿಸಿ ಪಾಯಸ ರೆಡಿ ಎಂದು ಲೋಟದ ತುಂಬ ಕೊಟ್ಟೆ. ಅವಳು ಹಾಲುಬಾಯಿಗಿಂತಾ ಪಾಯಸವೇ ರುಚಿಯಾಗಿದೆ ಎಂದು ಮೊದಲ ಅಡುಗೆಗೆ ಶಹಬ್ಬಾಸ್‌ಗಿರಿ ಕೊಟ್ಟಳು.

ADVERTISEMENT

ಉಮ ಸರ್ವೇಶ್, ಯಲಹಂಕ ಉಪನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.