ADVERTISEMENT

ಚಾಕೊಲೇಟ್‌ ಪುಡ್ಡಿಂಗ್‌

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 19:30 IST
Last Updated 29 ಡಿಸೆಂಬರ್ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು – 3 ಕಪ್‌, ಹರಳು ಸಕ್ಕರೆ – ಒಂದೂವರೆ ಕಪ್‌, ಕೊಕೊವಾ ಪುಡಿ – 1/2 ಕಪ್‌, ಬೇಕಿಂಗ್‌ ಪುಡಿ – 4 ಟೀ ಚಮಚ, ಉಪ್ಪು – 1/2 ಟೀ ಚಮಚ, ಹಾಲು – 1 ಕಪ್‌, ಕರಗಿಸಿದ ಬೆಣ್ಣೆ – 3/4 ಕಪ್‌, ಚಾಕೊಲೇಟ್ ಎಸೆನ್ಸ್ – 3 ಟೀ ಚಮಚ

ಟಾಪಿಂಗ್‌ಗೆ: ಹರಳು ಸಕ್ಕರೆ – 1 ಕಪ್‌, ಬ್ರೌನ್‌ ಶುಗರ್ – 1 ಕಪ್‌, ಕೊಕೊವಾ ಪುಡಿ – 1/2 ಕಪ್‌, ಬಿಸಿನೀರು – ಎರಡೂವರೆ ಕಪ್‌

ತಯಾರಿಸುವ ವಿಧಾನ: ಓವೆನ್‌ ಅನ್ನು 350 ಡಿಗ್ರಿ ಸೆಲ್ಸಿಯಸ್‌ನಲ್ಲಿ ಮೊದಲೇ ಬಿಸಿ ಮಾಡಿಟ್ಟುಕೊಳ್ಳಿ. ಹಿಟ್ಟು, ಕೊಕೊವಾ ಪುಡಿ ಹಾಗೂ ಬೇಕಿಂಗ್‌ ಪುಡಿಯನ್ನು ಜರಡಿ ಹಿಡಿದು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ. ಅದಕ್ಕೆ ಸಕ್ಕರೆ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಹಾಲು, ಬೆಣ್ಣೆ ಹಾಗೂ ಚಾಕೊಲೇಟ್‌ ಎಸೆನ್ಸ್‌ ಸೇರಿಸಿ ಎಲ್ಲವೂ ಚೆನ್ನಾಗಿ ಮಿಶ್ರಣವಾಗುವವರೆಗೂ ಕಲೆಸಿ. ಕೇಕ್‌ ಹಿಟ್ಟಿಗಿಂತ ಈ ಮಿಶ್ರಣ ಸ್ವಲ್ಪ ದಪ್ಪ ಇರಲಿ. ಮಿಶ್ರಣವನ್ನು ತುಪ್ಪ ಸವರಿದ ಪ್ಯಾನ್‌ ಆಕಾರದ ಪಾತ್ರೆಗೆ ಸುರಿಯಿರಿ.

ADVERTISEMENT

ಟಾಪಿಂಗ್ ಮಾಡುವುದು: ಇನ್ನೊಂದು ಪಾತ್ರೆಗೆ ಬ್ರೌನ್‌ ಶುಗರ್‌, ಹರಳು ಸಕ್ಕರೆಹಾಗೂ ಕೊಕೊವಾ ಪುಡಿ ಹಾಕಿ. ಅದಕ್ಕೆ ಬಿಸಿನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಪ್ಯಾನ್‌ ಮೇಲೆ ಸುರಿಯಿರಿ. ಆದರೆ ಹಿಂದಿನ ಮಿಶ್ರಣದೊಂದಿಗೆ ಇದನ್ನು ಕಲೆಸಬೇಡಿ. ಓವೆನ್‌ನಲ್ಲಿ ಇಟ್ಟು ಅದನ್ನು 45 ನಿಮಿಷಗಳ ಕಾಲ ಬೇಯಿಸಿ. ಈಗ ಎಲ್ಲವೂ ಒಂದು ಹಂತಕ್ಕೆ ಸೆಟ್‌ ಆಗಿರುತ್ತದೆ. ನಂತರ ಅದನ್ನು ತಣ್ಣಗಾಗಲು ಬಿಟ್ಟು ಐಸ್‌ಕ್ರೀಮ್ ಹಾಕಿ ತಿನ್ನಲು ಕೊಡಿ. ಇದನ್ನು ಬಿಸಿಯಿದ್ದಾಗಲೂ ಸೇವಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.