ADVERTISEMENT

ರೆಸಿಪಿ: ಹೋಂ ಮೇಡ್‌ ಚಾಕೊಲೇಟ್‌

ವೇದಾವತಿ ಎಚ್.ಎಸ್.
Published 9 ಡಿಸೆಂಬರ್ 2022, 19:30 IST
Last Updated 9 ಡಿಸೆಂಬರ್ 2022, 19:30 IST
ಹೋಂ ಮೇಡ್‌ ಚಾಕೊಲೇಟ್ ಸಾಸ್ 
ಹೋಂ ಮೇಡ್‌ ಚಾಕೊಲೇಟ್ ಸಾಸ್    

ಚಾಕೊಲೇಟ್‌ ಸಾಸ್‌

ಬೇಕಾಗುವ ಸಾಮಗ್ರಿಗಳು:ಒಂದು ಕಪ್‌ ಕೊಕೊ ಪೌಡರ್‌, ಒಂದು ಚಮಚ ಮೈದಾಹಿಟ್ಟು, ಅರ್ಧಕಪ್‌ ಸಕ್ಕರೆ ಪುಡಿ, ಚಿಟಿಕೆ ಉಪ್ಪು, 2 ಕಪ್‌ ಹಾಲು, ಒಂದು ಚಮಚ ಬೆಣ್ಣೆ, ಅರ್ಧ ಚಮಚ ವೆನಿಲ್ಲಾ ಎಸೆನ್ಸ್‌.

ತಯಾರಿಸುವ ವಿಧಾನ: ಕೊಕೊ ಪೌಡರ್‌, ಮೈದಾಹಿಟ್ಟು, ಸಕ್ಕರೆಪುಡಿ ಇಷ್ಟನ್ನು ಜರಡಿಗೆ ಹಾಕಿ ಜರಡಿ ಹಿಡಿಯಿರಿ. ಬಳಿಕ ಹಾಲನ್ನು ಸೇರಿಸಿ ಗಂಟಾಗದ ರೀತಿಯಲ್ಲಿ ಮಿಶ್ರಣ ಮಾಡಿ, ಒಲೆಯ ಮೇಲಿಟ್ಟು, ಸಣ್ಣ ಉರಿಯಲ್ಲಿ ಗಟ್ಟಿಯಾಗುವವರೆಗೂ ಮಿಶ್ರಣ ಮಾಡಿ. ಬಳಿಕ ಬೆಣ್ಣೆ ಮತ್ತು ವೆನ್ನಿಲಾ ಎಸೆನ್ಸ್ ಬೆರೆಸಿ ಮಿಶ್ರಣವನ್ನು ಒಲೆಯಿಂದ ಇಳಿಸಿ.

ADVERTISEMENT

ಚಾಕೊಲೇಟ್

ಬೇಕಾಗುವ ಸಾಮಗ್ರಿಗಳು: ಒಂದು ಕಪ್‌ ಸಕ್ಕರೆಪುಡಿ, ಅರ್ಧ ಕಪ್‌ ಕೊಕೊ ಪೌಡರ್‌, ಅರ್ಧಕಪ್‌ ಹಾಲಿನ ಪುಡಿ, 1 ಕಪ್‌ ತೆಂಗಿನ ಎಣ್ಣೆ.

ತಯಾರಿಸುವ ವಿಧಾನ: ಸಕ್ಕರೆಪುಡಿ, ಕೊಕೊ ಪೌಡರ್‌, ಹಾಲಿನಪುಡಿ ಇವುಗಳನ್ನು ಒಟ್ಟಿಗೆ ಹಾಕಿ ಜರಡಿ ಹಿಡಿಯಿರಿ. ಬಳಿಕ ಒಂದು ಪಾತ್ರೆಗೆ ಅರ್ಧದಷ್ಟು ನೀರು ಹಾಕಿಕುದಿಸಿ. ಕುದಿಯುತ್ತಿರುವ ನೀರಿನ ಮೇಲೆ ಅದಕ್ಕೆ ಹೊಂದುವಂತೆ ಬೌಲನ್ನು ಪಾತ್ರೆಯ ಮೇಲಿಟ್ಟು ನೀರು ತಾಕದಂತೆ ಇಡಿ. ತೆಂಗಿನ ಎಣ್ಣೆಯನ್ನು ಹಾಕಿ, ಬಳಿಕ ಜರಡಿ ಹಿಡಿದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವು ಹೊಳಪು ಬರುವವರೆಗೂ ಮಿಶ್ರಣ ಮಾಡಿ. ನಂತರ ಒಲೆ ಆರಿಸಿ. ಮಿಶ್ರಣವನ್ನು ಚಾಕೊಲೇಟ್‌ ಅಚ್ಚಿಗೆ ಹಾಕಿ, ಬೇಕಿದ್ದರೆ ಗೋಡಂಬಿ, ಬಾದಾಮಿ ಹಾಕಬಹುದು. ಇದನ್ನು 2 ಗಂಟೆ ಫ್ರಿಜ್‌ನಲ್ಲಿ ಇಡಿ. ಸಿಹಿಯಾದ ಚಾಕೊಲೇಟ್ ಸವಿಯಲು ಸಿದ್ಧ.

ಐಸ್‌ಕ್ರೀಂ

ಬೇಕಾಗುವ ಸಾಮಗ್ರಿಗಳು:

ಅರ್ಧ ಲೀಟರ್‌ ತಾಜಾ ಕ್ರೀಂ, 400 ಗ್ರಾಂ ಕಂಡೆನ್ಸ್ಡ್‌ ಹಾಲು, ಸಿಹಿ ಇಲ್ಲದ ಕೊಕೊ ಪೌಡರ್‌ ನಾಲ್ಕು ಚಮಚ.

ತಯಾರಿಸುವ ವಿಧಾನ: ತಾಜಾ ಕ್ರೀಂ ಅನ್ನು ಒಂದು ಗಂಟೆ ಫ್ರಿಜ್‌ನಲ್ಲಿಡಿ. ಬಳಿಕ ಬೌಲಿಗೆ ಹಾಕಿ 10 ರಿಂದ 15 ನಿಮಿಷ ಚೆನ್ನಾಗಿ ಬೀಟ್‌ ಮಾಡಿ. ಈಗ ಕಂಡೆನ್ಸ್ಡ್‌ ಹಾಲು ಹಾಗೂ ಕೊಕೊ ಪೌಡರ್‌ ಸೇರಿಸಿ. 8 ರಿಂದ 10 ನಿಮಿಷ ಕಡಿಮೆ ಸ್ಪೀಡ್‌ನಲ್ಲಿ ಬೀಟ್ ಮಾಡಿ. ಈ ಮಿಶ್ರಣವನ್ನು ಒಂದು ಬಾಕ್ಸಿಗೆ ಹಾಕಿ ಗಟ್ಟಿಯಾಗಿ ಮುಚ್ಚಳದಿಂದ ಮುಚ್ಚಿ. 6 ರಿಂದ ಎಂಟು ಗಂಟೆಗಳ ಕಾಲ ಫ್ರೀಜರ್‌ನಲ್ಲಿಡಿ. ಸ್ಕೂಪ್‌ನಲ್ಲಿ ತೆಗೆದು ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.