ADVERTISEMENT

ಬೇಸಿಗೆಗೆ ಮನೆಯಲ್ಲಿ ಮಾಡಿ ಕೂಲ್‌ ಡ್ರಿಂಕ್ಸ್‌!

ವೇದಾವತಿ ಎಚ್.ಎಸ್.
Published 5 ಏಪ್ರಿಲ್ 2025, 1:17 IST
Last Updated 5 ಏಪ್ರಿಲ್ 2025, 1:17 IST
<div class="paragraphs"><p>ಬೇಸಿಗೆಗೆ ಮನೆಯಲ್ಲಿ ಮಾಡಿ ಕೂಲ್‌ ಡ್ರಿಂಕ್ಸ್‌!</p></div>

ಬೇಸಿಗೆಗೆ ಮನೆಯಲ್ಲಿ ಮಾಡಿ ಕೂಲ್‌ ಡ್ರಿಂಕ್ಸ್‌!

   

ಸಾಬುದಾನ ಕಸ್ಟರ್ಡ್ ಫ್ರೂಟ್ಸ್ ಕೂಲ್ ಡ್ರಿಂಕ್

ಬೇಕಾಗುವ ಸಾಮಗ್ರಿಗಳು: ಹಾಲು 1/2 ಲೀಟರ್‌, ಕಾಮಕಸ್ತೂರಿ ಬೀಜ (ಬೇಸಿಲ್ ಸೀಡ್ಸ್) 1 ಟೇಬಲ್ ಚಮಚ, ಸಕ್ಕರೆ 1/2 ಕಪ್, ಹಾಲಿನ ಪುಡಿ 2 ಟೇಬಲ್ ಚಮಚ, ಕಸ್ಟರ್ಡ್ ಪೌಡರ‍್ 1 ಟೇಬಲ್ ಚಮಚ, ಸಾಬುದಾನ ಚಿಕ್ಕ ಗಾತ್ರದ್ದು 1/2 ಕಪ್, ನಿಮಗಿಷ್ಟವಾದ ಹಣ್ಣುಗಳು ದ್ರಾಕ್ಷಿ, ಸೇಬು, ಬಾಳೆಹಣ್ಣು, ಸೀಬೆ ಎಲ್ಲವೂ 1/4 ಕಪ್‌ನಂತೆ ಚಿಕ್ಕದಾಗಿ ಹೆಚ್ಚಿಕೊಳ್ಳಿ. ಒಣದ್ರಾಕ್ಷಿ, ಬಾದಾಮಿ, ಗೋಡಂಬಿ, ಪಿಸ್ತಾ ಎಲ್ಲವನ್ನೂ ಹತ್ತರಂತೆ ತೆಗೆದುಕೊಂಡು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
ತಯಾರಿಸುವ ವಿಧಾನ: ಕಾಮಕಸ್ತೂರಿ ಬೀಜವನ್ನು ಅರ್ಧ ಕಪ್ ನೀರಿನಲ್ಲಿ 5 ರಿಂದ 10 ನಿಮಿಷ ನೆನೆಸಿಟ್ಟುಕೊಳ್ಳಿ. ಬಾಣಲೆಗೆ ಹಾಲು, ಸಕ್ಕರೆ, ಹಾಲಿನ ಪುಡಿ, ಕಸ್ಟರ್ಡ್ ಪೌಡರ‍್ ಹಾಕಿ ಗಂಟಾಗದAತೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಒಲೆಯ ಮೇಲಿಟ್ಟು ಮಧ್ಯಮ ಉರಿಯಲ್ಲಿ 5 ರಿಂದ 6 ನಿಮಿಷ ಕುದಿಸಿ. ಬಳಿಕ ಬಟ್ಟಲಿಗೆ ಹಾಕಿ ಒಂದು ಗಂಟೆ ರೆಫ್ರಿಜರೇಟರ್‌ನಲ್ಲಿ ಇಡಿ. ಬಾಣಲೆಯಲ್ಲಿ ಒಂದು ಲೀಟರ‍್ ನೀರನ್ನು ಬಿಸಿ ಮಾಡಿಕೊಳ್ಳಿ. ಸಾಬುದಾನವನ್ನು ತೊಳೆದು ಕುದಿಯುತ್ತಿರುವ ನೀರಿಗೆ ಹಾಕಿ. ಬಳಿಕ 8 ರಿಂದ 10 ನಿಮಿಷ ಮೆತ್ತಗೆ ಬೇಯಿಸಿ. ನಂತರ ಸೋಸಿಕೊಳ್ಳಿ. ಹೆಚ್ಚಿನ ಸ್ಟಾರ್ಚ್ ತೆಗೆಯಲು ನೀರನ್ನು ಹಾಕಿ ಸೋಸಿಕೊಳ್ಳಿ. ಹಾಲಿನ ಮಿಶ್ರಣವನ್ನು ರೆಫ್ರಿಜರೇಟರ್‌ನಿಂದ ತೆಗೆದು ಬೇಯಿಸಿಕೊಂಡ ಸಾಬುದಾನ, ನೆನೆಸಿಟ್ಟ ಕಾಮಕಸ್ತೂರಿ ಬೀಜ, ನಿಮಗಿಷ್ಟವಾದ ಹಣ್ಣುಗಳು ಮತ್ತು ತಿಳಿಸಿರುವ ಡ್ರೈ ಫ್ರೂಟ್ಸ್ ಸೇರಿಸಿ ಮಿಶ್ರಣ ಮಾಡಿ. ನಂತರ ಸರ್ವಿಂಗ್ ಗ್ಲಾಸಿಗೆ ಹಾಕಿಕೊಂಡು ಸವಿಯಿರಿ.

ADVERTISEMENT

ಕಸ್ಟರ್ಡ್ ಕೂಲ್ ಶರಬತ್ತು

ಬೇಕಾಗುವ ಸಾಮಗ್ರಿಗಳು: ಎಳನೀರು ಜೆಲ್ಲಿ: 2 ಕಪ್ ಎಳನೀರು, 2 ಟೇಬಲ್ ಚಮಚ ಸಕ್ಕರೆ, 1 ಟೀ ಚಮಚ ಅಗರ‍್ ಅಗರ‍್ ಪೌಡರ‍್. ಇವುಗಳನ್ನು ಬಾಣಲೆಗೆ ಹಾಕಿ ಮಿಶ್ರಣ ಮಾಡಿ ಕುದಿಸಿ. ಕುದಿ ಬಂದರೆ ಸಾಕು. ಆರಿದ ಬಳಿಕ ಒಂದು ಬಟ್ಟಲಿಗೆ ಹಾಕಿ ರೆಫ್ರಿಜರೇಟರ್‌ನಲ್ಲಿ 1/2 ಗಂಟೆ ಇಟ್ಟು ಗಟ್ಟಿಯಾದ ಬಳಿಕ ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬೇಸಿಲ್ ಸೀಡ್ಸ್ 1 ಟೇಬಲ್ ಚಮಚ ಬಟ್ಟಲಿಗೆ ಹಾಕಿ, 1/2 ಕಪ್ ನೀರು ಸೇರಿಸಿ ಐದು ನಿಮಿಷ ಬಿಡಿ. ಗೋಡಂಬಿ, ಪಿಸ್ತಾ, ಬಾದಾಮಿ ಎಲ್ಲವನ್ನೂ 10ರಂತೆ ತೆಗದುಕೊಂಡು 2 ಏಲಕ್ಕಿ ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಹಾಲು 1/2 ಲೀಟರ‍್, ಸಕ್ಕರೆ 1/4 ಕಪ್, ವೆನಿಲ್ಲಾ ಕಸ್ಟರ್ಡ್ ಪೌಡರ‍್ 1 ಟೇಬಲ್ ಚಮಚ. ತಯಾರಿಸುವ ವಿಧಾನ: ವೆನಿಲ್ಲಾ ಕಸ್ಟರ್ಡ್ ಪೌಡರ್‌ಗೆ ಅರ್ಧ ಕಪ್ ಹಾಲನ್ನು ಹಾಕಿ ಕರಗಿಸಿಕೊಳ್ಳಿ. ಬಾಣಲೆಗೆ ಹಾಲು, ಸಕ್ಕರೆ ಮತ್ತು ಪುಡಿ ಮಾಡಿದ ಡ್ರೈ ಫ್ರೂಟ್ಸ್ ಮಿಶ್ರಣವನ್ನು ಹಾಕಿ ಕುದಿಸಿ. ಕುದಿ ಬಂದ ಬಳಿಕ ಕಸ್ಟರ್ಡ್ ಪೇಸ್ಟ್ ಹಾಕಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ ಗಂಟಾಗದ ರೀತಿ ಮಿಶ್ರಣ ಮಾಡುತ್ತಿರಿ. ಮಿಶ್ರಣ ದಪ್ಪವಾಗುತ್ತಾ ಬಂದಾಗ ಒಲೆಯನ್ನು ಆರಿಸಿ ಆರಲು ಬಿಡಿ. ಪೂರ್ತಿ ಆರಿದ ಬಳಿಕ ಎಳನೀರು ಜೆಲ್ಲಿ, ಬೇಸಿಲ್ ಸೀಡ್ಸ್ ಸೇರಿಸಿ ಮಿಶ್ರಣ ಮಾಡಿ. ಬಳಿಕ ರೆಫ್ರಿಜರೇಟರ್‌ನಲ್ಲಿಟ್ಟು ತಣ್ಣಗೆ ಮಾಡಿಕೊಂಡು ಸವಿಯಿರಿ.

ಸಾಬುದಾನ ರಿಫ್ರೆಶಿಂಗ್ ಡ್ರಿಂಕ್

ಬೇಕಾಗುವ ಸಾಮಗ್ರಿಗಳು: ಸಾಬುದಾನ 1/2 ಕಪ್, ತಣ್ಣಗಿನ ಹಾಲು 1 ಲೀಟರ‍್, ಸಕ್ಕರೆ 1/2 ಕಪ್, ರೋಸ್ ಸಿರಾಪ್ 4 ಟೇಬಲ್ ಚಮಚ, ಪಿಸ್ತಾ, ಬಾದಾಮಿ ಚೂರುಗಳು ಎರಡೇರಡು ಟೇಬಲ್ ಚಮಚ, ಸ್ಟ್ರಾಬೆರಿ ಜೆಲ್ಲಿ ಕ್ರಿಸ್ಟಲ್ಸ್ 90ಗ್ರಾಂ, ಬೇಸಿಲ್ ಸೀಡ್ಸ್ 1 ಟೇಬಲ್ ಚಮಚ.
ತಯಾರಿಸುವ ವಿಧಾನ: ಅರ್ಧ ಲೀಟರ‍್ ಕುದಿಯುತ್ತಿರುವ ನೀರಿಗೆ ಸ್ಟ್ರಾಬರಿ ಜೆಲ್ಲಿ ಕ್ರಿಸ್ಟಲ್ ಹಾಕಿ ಮಿಶ್ರಣ ಮಾಡಿ ಅರ್ಧ ಗಂಟೆ ರಿಫ್ರಿಜರೇಟರ್‌ನಲ್ಲಿಡಿ. ಬಳಿಕ ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬೇಸಿಲ್ ಸೀಡ್ಸ್ಗೆ ಅರ್ಧ ಕಪ್ ನೀರು ಹಾಕಿ ಐದು ನಿಮಿಷ ನೆನೆಯಲು ಬಿಡಿ. ನಾಲ್ಕು ಕಪ್ ಕುದಿಯುತ್ತಿರುವ ಬಿಸಿ ನೀರಿಗೆ ಸಾಬುದಾನವನ್ನು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. ಬಳಿಕ ಸೋಸಿಕೊಳ್ಳಿ. ಪುನಃ ತಣ್ಣಿರನ್ನು ಹಾಕಿ ಸಾಬುದಾನದಲ್ಲಿರುವ ಸ್ಟಾರ್ಚ್ ತೆಗೆಯಿರಿ. ಈಗ ಹಾಲಿಗೆ ಸಕ್ಕರೆ ಮತ್ತು ರೋಸ್ ಸಿರಾಪ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಸಾಬುದಾನ, ಬೇಸಿಲ್ ಸೀಡ್ಸ್, ಸ್ಟ್ರಾಬೆರಿ ಜೆಲ್ಲಿ, ಪಿಸ್ತಾ, ಬಾದಾಮಿ ಚೂರುಗಳನ್ನು ಸೇರಿಸಿ ಮಿಶ್ರಣ ಮಾಡಿ. ಇದನ್ನು ಒಂದು ಗಂಟೆ ರಿಫ್ರಿಜರೇಟರ್‌ನಲ್ಲಿಟ್ಟು ಬಳಿಕ ಸವಿಯಿರಿ.

ಕರಬೂಜ ಹಣ್ಣಿನ ಶರಬತ್ತು.

ಬೇಕಾಗುವ ಸಾಮಗ್ರಿಗಳು: ಕರಬೂಜ ಹಣ್ಣು ಮಧ್ಯಮ ಗಾತ್ರದ್ದು 1, ಏಲಕ್ಕಿ ಬೀಜ 2, ಬೇಸಿಲ್ ಸೀಡ್ಸ್ 1 ಟೇಬಲ್ ಚಮಚ, ಹಾಲು 1/2 ಲೀಟರ‍್, ಮಿಲ್ಕ್ ಪೌಡರ‍್ 2 ಟೇಬಲ್ ಚಮಚ, ಕಸ್ಟರ್ಡ್ ಪೌಡರ‍್ 1 ಟೇಬಲ್ ಚಮಚ, 1/2 ಕಪ್ ಸಕ್ಕರೆ, ಸಾಬುದಾನ 1/2 ಕಪ್, ಪಿಸ್ತಾ, ಬಾದಾಮಿ ಚಿಕ್ಕದಾಗಿ ಕತ್ತರಿಸಿದ್ದು ಎರಡೇರಡು ಟೇಬಲ್ ಚಮಚ, ಅಲಂಕರಿಸಲು ಪಿಸ್ತಾದ ಚೂರುಗಳು ಸ್ವಲ್ಪ.
ತಯಾರಿಸುವ ವಿಧಾನ: ಕರಬೂಜ ಹಣ್ಣಿನ ಸಿಪ್ಪೆ ಮತ್ತು ಬೀಜವನ್ನು ತೆಗೆದು ಹೆಚ್ಚಿಟ್ಟುಕೊಳ್ಳಿ. ಚಿಕ್ಕದಾಗಿ ಹೆಚ್ಚಿದ ಕರಬೂಜ ಹಣ್ಣು 2 ರಿಂದ 3 ಟೇಬಲ್ ಚಮಚ ಎತ್ತಿಟ್ಟುಕೊಳ್ಳಿ. ಉಳಿದ ಕರಬೂಜ ಹಣ್ಣು ಮತ್ತು ಸಿಪ್ಪೆ ತೆಗೆದ ಏಲಕ್ಕಿ ಬೀಜವನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಬೇಸಿಲ್ ಸೀಡ್ಸ್ಅನ್ನು ಬಟ್ಟಲಿಗೆ ಹಾಕಿ ಅರ್ಧ ಕಪ್ ನೀರನ್ನು ಸೇರಿಸಿ 5 ರಿಂದ ಹತ್ತು ನಿಮಿಷ ನೆನೆಸಿಟ್ಟುಕೊಳ್ಳಿ. ಬಾಣಲೆಗೆ ಹಾಲು, ಹಾಲಿನ ಪುಡಿ, ಕಸ್ಟರ್ಡ್ಪೌಡರ‍್ ಮತ್ತು ಸಕ್ಕರೆಯನ್ನು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಒಲೆಯ ಮೇಲಿಟ್ಟು 5 ರಿಂದ 6 ನಿಮಿಷ ಕುದಿಸಿ ಆರಲು ಬಿಡಿ. ಸಾಬುದಾನವನ್ನು ತೊಳೆದು ಬಾಣಲೆಗೆ ಹಾಕಿ. ನಾಲ್ಕು ಕಪ್ ನೀರು ಸೇರಿಸಿ 8 ರಿಂದ 10 ನಿಮಿಷ ಮತ್ತಗೆ ಬೇಯಿಸಿ. ಬಳಿಕ ಸೋಸಿಕೊಳ್ಳಿ. ಸ್ವಲ್ಪ ನೀರನ್ನು ಹಾಕಿ ಪುನಃ ಸೋಸಿಕೊಳ್ಳಿ. ಈಗ ಹಾಲಿನ ಮಿಶ್ರಣಕ್ಕೆ ಸಾಬುದಾನ, ಹಣ್ಣಿನ ಪೇಸ್ಟ್, ಬೇಸಿಲ್ ಸೀಡ್ಸ್, ಚಿಕ್ಕದಾಗಿ ಕತ್ತರಿಸಿಕೊಂಡ ಕರಬೂಜ ಹಣ್ಣು, ಪಿಸ್ತಾ, ಬಾದಾಮಿಯನ್ನು ಸೇರಿಸಿ ಮಿಶ್ರಣ ಮಾಡಿ. ಬಳಿಕ ಒಂದು ಗಂಟೆ ರೆಫ್ರಿಜರೇಟರ್‌ನಲ್ಲಿ ಇಡಿ. ನಂತರ ಸರ್ವಿಂಗ್ ಗ್ಲಾಸಿಗೆ ಹಾಕಿ ಪಿಸ್ತಾದ ಚೂರುಗಳಿಂದ ಅಲಂಕರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.