ADVERTISEMENT

ರೆಸಿಪಿ: ಮಟನ್‌ ಪೆಪ್ಪರ್‌ ಫ್ರೈ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 15:24 IST
Last Updated 19 ನವೆಂಬರ್ 2020, 15:24 IST
ಮಟನ್‌ ಪೆಪ್ಪರ್‌ ಫ್ರೈ
ಮಟನ್‌ ಪೆಪ್ಪರ್‌ ಫ್ರೈ   

ಮಟನ್ ಪೆಪ್ಪರ್‌ ಫ್ರೈ

ಬೇಕಾಗುವ ಸಾಮಗ್ರಿಗಳು: ಮಟನ್ – 1 ಕೆ.ಜಿ., ಚಕ್ಕೆ– 3 ಚೂರು, ಲವಂಗ – 3, ಕೊತ್ತಂಬರಿ – 2 ಚಮಚ, ಕಾಳುಮೆಣಸು – 4 ಚಮಚ, ಗೋಡಂಬಿ – 1ಚಮಚ, ಸೋಂಪು – 1 ಚಮಚ, ತುಪ್ಪ – 1 ಚಮಚ, ಈರುಳ್ಳಿ – 4 ಮಧ್ಯಮ ಗಾತ್ರದ್ದು, ಕರಿಬೇವು – 6 ಎಸಳು, ಹಸಿಮೆಣಸು – 8, ಟೊಮೆಟೊ – 2, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಖಾರದಪುಡಿ – 2ಚಮಚ, ಕಾಳುಮೆಣಸಿನ ಪುಡಿ – 1 ಚಮಚ, ಉಪ್ಪು – ರುಚಿಗೆ, ಸೋಯಾ ಸಾಸ್ – 2 ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ

ತಯಾರಿಸುವ ವಿಧಾನ: ಮಟನ್ ಅನ್ನು ಅರಿಸಿನ ಹಾಕಿ ಚೆನ್ನಾಗಿ ತೊಳೆದು ಕುಕ್ಕರ್‌ಗೆ ಹಾಕಿ. ಉಪ್ಪು ಸೇರಿಸಿ ಕೈಯಾಡಿಸಿ. ಮಟನ್ ಮುಳುಗುವಷ್ಟು ನೀರು ಸೇರಿಸಿ ಕಲಕಿ ಕುಕ್ಕರ್ ಮುಚ್ಚಿ 4 ವಿಷಲ್ ಕೂಗಿಸಿ. ಪ್ಯಾನ್‌ವೊಂದರಲ್ಲಿ 2 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಅದಕ್ಕೆ ಚಕ್ಕೆ, ಲವಂಗ, ಕೊತ್ತಂಬರಿ 3 ಚಮಚ, ಕಾಳುಮೆಣಸು 4 ಚಮಚ, 1 ಚಮಚ ಜೀರಿಗೆ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ಅದಕ್ಕೆ 10 ಗೋಡಂಬಿ ಸೇರಿಸಿ ಹುರಿದುಕೊಳ್ಳಿ. ಅವುಗಳನ್ನು ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಇನ್ನೊಂದು ದಪ್ಪ ತಳದ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ 2 ಚಮಚ ತುಪ್ಪ ಹಾಕಿ ಈರುಳ್ಳಿ ಹಾಕಿ ಹುರಿದುಕೊಂಡು ಕರಿಬೇವು, ಉದ್ದಕ್ಕೆ ಕತ್ತರಿಸಿದ ಹಸಿಮೆಣಸು ಸೇರಿಸಿ ಹುರಿದುಕೊಳ್ಳಿ. ಅದಕ್ಕೆ ಟೊಮೆಟೊ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿವಾಸನೆ ಹೋಗುವವರೆಗೂ ಹುರಿದುಕೊಳ್ಳಿ, ಅದಕ್ಕೆ ಸ್ವಲ್ಪ ಉಪ್ಪು ಹಾಗೂ ಖಾರದಪುಡಿ ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ಮಿಕ್ಸಿಯಲ್ಲಿ ರುಬ್ಬಿಕೊಂಡ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅದಕ್ಕೆ ಬೇಯಿಸಿಕೊಂಡ ಮಟನ್ ತುಂಡುಗಳನ್ನು ಸೇರಿಸಿ. ಮಟನ್ ತುಂಡಿನಲ್ಲಿ ನೀರು ಬಿಡುವವರೆಗೂ ಮಿಶ್ರಣ ಮಾಡಿ, ನಂತರ ಪಾತ್ರೆಯನ್ನು ಮುಚ್ಚಿ ಅದಕ್ಕೆ ಸೋಯಾ ಸಾಸ್ ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ 2 ಚಮಚ ತುಪ್ಪ ಹಾಗೂ ಕರಿಬೇವು ಸೇರಿಸಿ ಮಿಶ್ರಣ ಮಾಡಿದರೆ ಮಟನ್ ಪೆಪ್ಪರ್ ಫ್ರೈ ರೆಡಿ ಆಗಿರುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.