ADVERTISEMENT

ಮನೆಯಲ್ಲೇ ಮಾಡಿ ವೀಳ್ಯದೆಲೆ ಲಡ್ಡು

ಪ್ರಜಾವಾಣಿ ವಿಶೇಷ
Published 2 ಆಗಸ್ಟ್ 2020, 15:00 IST
Last Updated 2 ಆಗಸ್ಟ್ 2020, 15:00 IST
ವೀಳ್ಯದೆಲೆ ಲಡ್ಡು
ವೀಳ್ಯದೆಲೆ ಲಡ್ಡು   
""

ವೀಳ್ಯದೆಲೆ ಲಡ್ಡು

ಬೇಕಾಗುವ ಸಾಮಗ್ರಿ: ವೀಳ್ಯದೆಲೆ– 8–10, ಮಿಠಾಯಿ ಮೇಟ್‌– 1 ಡಬ್ಬಿ (ಅಂಗಡಿಯಲ್ಲಿ ಲಭ್ಯ), ಕೊಬ್ಬರಿ ಪುಡಿ– 1 ಕಪ್‌, ಗೋಡಂಬಿ, ಬಾದಾಮಿ– ತಲಾ 50 ಗ್ರಾಂ, ಗುಲ್ಕಂದ– 5 ಚಮಚ, ತುಪ್ಪ– 1 ಚಮಚ.

ಮಾಡುವ ವಿಧಾನ: ಗೋಡಂಬಿ ಮತ್ತು ಬಾದಾಮಿಯನ್ನು ಸ್ವಲ್ಪ ಹುರಿದು ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಇದಕ್ಕೆ ಗುಲ್ಕಂದ ಸೇರಿಸಿ. ನಂತರ ಚೆನ್ನಾಗಿ ತೊಳೆದುಕೊಂಡ ವೀಳ್ಯದೆಲೆ ಮತ್ತು ಮಿಠಾಯಿ ಮೇಟ್ ಅನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಒಂದು ದಪ್ಪ ತಳದ ಪಾತ್ರೆಗೆ ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ಕೊಬ್ಬರಿ ಪುಡಿ ಹಾಕಿ ಹುರಿಯಿರಿ. ಆಮೇಲೆ ರುಬ್ಬಿಕೊಂಡ ಮಿಶ್ರಣ ಹಾಕಿ ಹುರಿಯಿರಿ. ಇದು ಎಲ್ಲವೂ ಮಿಶ್ರವಾಗಿ ದಪ್ಪಗಾಗುವವರೆಗೂ ಕೈಯಾಡಿಸುತ್ತಿರಿ. ತಣ್ಣಗಾದ ಮೇಲೆ ಕೈಗೆ ತುಪ್ಪ ಸವರಿಕೊಂಡು ಮಿಶ್ರಣವನ್ನು ಬಟ್ಟಲಿನ ಆಕಾರ ಮಾಡಿ. ಇದರೊಳಗೆ ಮೊದಲೇ ಮಾಡಿಟ್ಟುಕೊಂಡ ಗುಲ್ಕಂದ ಮಿಶ್ರಣ ಸೇರಿಸಿ ಉಂಡೆ ಕಟ್ಟಿ. ಕೊಬ್ಬರಿ ಪುಡಿಯಲ್ಲಿ ಉರುಳಾಡಿಸಿ ಅಲಂಕರಿಸಿ.

ADVERTISEMENT

ಕೋವಾ ಜಾಮೂನ್‌

ಬೇಕಾಗುವ ಸಾಮಗ್ರಿ: ಹಾಲಿನ ಕೋವಾ 500 ಗ್ರಾಮ್‌, ಮೈದಾ ಹಿಟ್ಟು 4 ಟೀ ಚಮಚ, ಕರಿಯಲು ಎಣ್ಣೆ.

ಸಕ್ಕರೆ ಪಾಕಕ್ಕೆ: ಸಕ್ಕರೆ– 3 ಕಪ್‌, ನೀರು– 5 ಕಪ್‌, ಏಲಕ್ಕಿ ಪುಡಿ– ಚಿಟಿಕೆ, ಕೇಸರಿ– ಸ್ವಲ್ಪ, ಲಿಂಬೆ ರಸ– ಅರ್ಧ ಟೀ ಚಮಚ.

ಮಾಡುವ ವಿಧಾನ: ಕೋವಾವನ್ನು ಚೆನ್ನಾಗಿ ನಾದಿ. ನಂತರ ಮೈದಾ ಹಿಟ್ಟು ಸೇರಿಸಿ ಮೆದುವಾದ ಹಿಟ್ಟು ಮಾಡಿ. ಸ್ವಲ್ಪ ಹಿಟ್ಟನ್ನು ಉಂಡೆ ಅಥವಾ ಸಿಲೆಂಡರ್‌ ಆಕಾರದಲ್ಲಿ ಮಾಡಿಕೊಂಡು ಎಣ್ಣೆಯಲ್ಲಿ ಕರಿಯಿರಿ.

ಸಕ್ಕರೆ ಪಾಕ: ನೀರಲ್ಲಿ ಸಕ್ಕರೆ ಕರಗಿಸಿ ಕುದಿಯಲು ಇಡಿ. ಅದು ನೊರೆ ನೊರೆಯಾಗಿ ಕುದ್ದ ನಂತರ ಏಲಕ್ಕಿ ಪುಡಿ, ಕೇಸರಿ ದಳ, ಲಿಂಬೆ ರಸ ಸೇರಿಸಿ. ಕರಿದ ಜಾಮೂನನ್ನು ಬಿಸಿಯಾದ ಸಕ್ಕರ ಪಾಕದಲ್ಲಿ ಮುಳುಗಿಸಿ. ರುಚಿಕರವಾದ ಜಾಮೂನ್‌ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.