ADVERTISEMENT

ಅವಲಕ್ಕಿ ದೋಸೆ ಮಾಡುವುದು ನಿಮಗೆ ಗೊತ್ತೆ!

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 14:31 IST
Last Updated 21 ಫೆಬ್ರುವರಿ 2017, 14:31 IST
ಅವಲಕ್ಕಿ ದೋಸೆ ಮಾಡುವುದು ನಿಮಗೆ ಗೊತ್ತೆ!
ಅವಲಕ್ಕಿ ದೋಸೆ ಮಾಡುವುದು ನಿಮಗೆ ಗೊತ್ತೆ!   

ಬೆಳಗಿನ ಉಪಹಾರಕ್ಕೆ ಅವಲಕ್ಕಿ ಉಪ್ಪಿಟ್ಟು ಮಾಡುವುದು ಸಾಮಾನ್ಯ. ಇದೇ ಅವಲಕ್ಕಿಯಲ್ಲಿ ದೋಸೆಯನ್ನು ಮಾಡಬಹುದು. ಪ್ರಜಾವಾಣಿ ರೆಸಿಪಿ ವಿಡಿಯೊ ನೋಡಿ ಅವಲಕ್ಕಿ ದೋಸೆ ಮಾಡುವುದು ಹೇಗೆ ಎಂಬುದನ್ನು ಕಲಿಯಿರಿ!

ಬೇಕಾಗುವ ಸಾಮಗ್ರಿಗಳು:

1. ದೋಸೆ ಅಕ್ಕಿ         1ಕಪ್
2. ಅವಲಕ್ಕಿ              1/4ಕಪ್
3. ಉದ್ದಿನಬೇಳೆ         2 ಚಮಚ
4. ಮೊಸರು              1/2ಕಪ್
5. ಎಣ್ಣೆ                     ಸ್ವಲ್ಪ
6. ಉಪ್ಪು                  ಸ್ವಲ್ಪ
7. ಸೋಡ                 ಚಿಟಿಕೆ
 

ADVERTISEMENT

ಮಾಡುವ ವಿಧಾನ: 3 ಗಂಟೆ ನೆನೆಸಿದ ಒಂದು ಬೌಲ್‍ಗೆ ದೋಸೆ ಅಕ್ಕಿ, ಅವಲಕ್ಕಿ, ಉದ್ದಿನ ಬೇಳೆ, ಮೊಸರು ಹಾಗೂ 1/2 ಕಪ್ ನೀರಿನೊಂದಿಗೆ 3 ಗಂಟೆ ನೆನೆಸುವುದು. ನಂತರ ಚೆನ್ನಾಗಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬುವುದು. ಈಗ ಸೋಡ ಹಾಗೂ ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ, ದೋಸೆ ಹಂಚು ಬಿಸಿ ಮಾಡಿ ಎಣ್ಣೆ ಹಾಕಿ ದಪ್ಪಕ್ಕೆ ಬೇಯಿಸುತ್ತಾ ಎಣ್ಣೆಯನ್ನು ಸುತ್ತಲೂ ಹಾಕುವುದು. ತಟ್ಟೆ ಮುಚ್ಚಿ ಒಂದೇ ಕಡೆ ಬೇಯಿಸಿದರೆ ಅವಲಕ್ಕಿ ಮೊಸರಿನ ದೋಸೆ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.