ADVERTISEMENT

ಬಾಯಿ ಸಿಹಿ ಮಾಡುವ ಹಾಲು ಬಾಯಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 17:03 IST
Last Updated 11 ಏಪ್ರಿಲ್ 2017, 17:03 IST
ಬಾಯಿ ಸಿಹಿ ಮಾಡುವ ಹಾಲು ಬಾಯಿ
ಬಾಯಿ ಸಿಹಿ ಮಾಡುವ ಹಾಲು ಬಾಯಿ   

ಬಾಯಲ್ಲಿ ಕರಗುವಂತಹ ಸಿಹಿಯಾದ ಹಾಲು ಬಾಯಿ ಮಾಡುವುದು ಬಹಳ ಸುಲಭ! ಅತಿ ಹೆಚ್ಚು ಪೋಷಕಾಂಶಗಳಿರುವ ಈ ಸಿಹಿ ಖಾದ್ಯ ಮಾಡುವ ವಿಧಾನವನ್ನು ಈ ಬಾರಿಯ ಪ್ರಜಾವಾಣಿ ರೆಸಿಪಿಯಲ್ಲಿ ನೀಡಲಾಗಿದೆ.

ಸಾಮಗ್ರಿಗಳು
1. ನೆನೆಸಿದ ಅಕ್ಕಿ -          1/2 ಕಪ್
2. ಬೆಲ್ಲ -                      01 ಕಪ್
3. ತೆಂಗಿನ ತುರಿ -           1/4 ಕಪ್
4. ಏಲಕ್ಕಿ ಪುಡಿ -             ಸ್ವಲ್ಪ
5. ಉಪ್ಪು -                    ಚಿಟಿಕೆ
6. ತುಪ್ಪ -                     02 ಸ್ಪೂನ್
ಮಾಡುವ ವಿಧಾನ: ಬೆಲ್ಲಕ್ಕೆ 1/2 ಕಪ್ ನೀರು ಸೇರಿಸಿ ಒಂಡು ಬಾಣಲೆಯಲ್ಲಿ ಕುದಿಸಿ. ನೆನೆಸಿದ ಅಕ್ಕಿ, ತೆಂಗಿನ ತುರಿ, ಚಿಟಿಕೆ ಉಪ್ಪು, 1/2 ಕಪ್ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. 

ರುಬ್ಬಿದ ಮಿಶ್ರಣವನ್ನು ಕುದಿಯುತ್ತಿರುವ ಬೆಲ್ಲಕ್ಕೆ ಹಾಕಿ ತಳ ಬಿಡುವವರೆಗೆ ಕುದಿಸಿ ಒಂದು ಸ್ಪೂನ್ ತುಪ್ಪ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ, ತುಪ್ಪ ಸವರಿದ ತಟ್ಟೆಗೆ ಹಾಕಿ ಒಂದು ಗಂಟೆಯ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿದರೆ  ಹಾಲು ಬಾಯಿ ಸವಿಯಲು ಸಿದ್ಧ..

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.