ADVERTISEMENT

ಸ್ವಾಸ್ಥ್ಯ ಸೌಖ್ಯ

ಪ್ರೊ.ಬಿ.ಎಂ.ಹೆಗ್ಡೆ
Published 25 ಮೇ 2012, 19:30 IST
Last Updated 25 ಮೇ 2012, 19:30 IST

ಕಾವ್ಯ, 17 ವರ್ಷ, ಶಿವಮೊಗ್ಗ
*ನನಗೆ ಕಳೆದ 7 ತಿಂಗಳಿನಿಂದ ತಲೆಯಲ್ಲಿ ತುಂಬಾ ಹೊಟ್ಟಾಗಿ ಕೂದಲು ಉದುರುತ್ತಿದೆ ಮತ್ತು ನನ್ನ ತಲೆಯ ನೆತ್ತಿಯ ಭಾಗದಿಂದ ಹಣೆಯ ಭಾಗದವರೆಗೂ ತುಂಬಾ ಬೋಳಾಗುತ್ತಿದೆ. ನನ್ನದು ಎಣ್ಣೆಯ ಚರ್ಮ. ಹಾಗಾಗಿ ತಲೆಯ ಮುಂಭಾಗ ಚಿಕ್ಕ ಗುಳ್ಳೆಗಳಾಗುತ್ತಿವೆ.  ನಾನು ಚರ್ಮರೋಗ ತಜ್ಞರ ಬಳಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಆದರೆ ಏನೂ ಪರಿಣಾಮವಾಗಿಲ್ಲ. ಆದ್ದರಿಂದ ಹೋಮಿಯೋಪತಿ ಡಾಕ್ಟರ್‌ನ್ನು ಕಂಡರೆ ಹೊಸ ಕೂದಲು ಬರುತ್ತದೆಯೇ? ಪರಿಹಾರ ತಿಳಿಸಿ.

ತಲೆ ಬಿಸಿ ಮಾಡಿಕೊಳ್ಳಬೇಡಿ. ತಲೆ ಬಿಸಿ ಕೂದಲು ಉದುರುವಿಕೆಗೆ ಕಾರಣ.

ಇಂದುಮತಿ, 63 ವರ್ಷ
ನನ್ನ ಸಮಸ್ಯೆ ಮಲ, ಮೂತ್ರ ವಿಸರ್ಜನೆ 6 ತಿಂಗಳಿಂದಲೂ ಸರಿಯಾಗಿ ಆಗುತ್ತಿಲ್ಲ. ಕ್ಷಣಕ್ಷಣಕ್ಕೂ ಮೂತ್ರ ವಿಸರ್ಜನೆ ಹೋದಾಗ ಬಹಳ ಹೊತ್ತಿನವರೆಗೆ ಮೂತ್ರ ಹನಿ ಹನಿಯಾಗಿ ಬರುತ್ತದೆ. ಇದರಿಂದ ಸ್ವಸ್ಥ ಮನಸ್ಸಿಲ್ಲದೆ ಅಂಜಿಕೆಯಿಂದ ಮಡಿವಂತಿಕೆ ಕೆಲಸ ಮಾಡಲು ಆಗುತ್ತಿಲ್ಲ. ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲ. ಆಗಾಗ ತೇಗು ಬರುತ್ತದೆ. ನನಗೆ ಬಿ.ಪಿ., ಸಕ್ಕರೆ ಕಾಯಿಲೆ, ಮೂಲವ್ಯಾಧಿ ಇಲ್ಲ. ಡಾಕ್ಟರ್ ಸಲಹೆಯಂತೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಆದರೆ ಪ್ರಯೋಜನವಾಗಿಲ್ಲ.

ನೀವು ಒಂದೊಂದು ಸಮಸ್ಯೆಗೆ ಒಂದೊಂದು ಔಷಧಿ ತೆಗೆದು ಕೊಳ್ಳುವುದರಿಂದ ಏನೂ ಲಾಭವಿಲ್ಲ. ನಿಮ್ಮ ಕಾಯಿಲೆಗೆ ಮುಖ್ಯವಾಗಿ ನಿಮ್ಮ ಮನಸ್ಸಿನ ತುಮುಲವೇ ಕಾರಣ. ಇದಕ್ಕೆ ಮಾತ್ರೆ ತಿಂದು ಉಪಯೋಗವಿಲ್ಲ. ತಾವು ಒಬ್ಬ ಉತ್ತಮ ಮನೋವಿಜ್ಞಾನಿಯನ್ನು ಸಂಪರ್ಕಿಸಿ ಸಲಹೆ ಪಡೆದು ನೆಮ್ಮದಿಯ ಜೀವನ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.