ರಂಗನಾಥ, ಶಿರಾ, ತುಮಕೂರು ಜಿಲ್ಲೆ
* ನನಗೆ ಕೆಲವು ದಿನಗಳಿಂದ ಹೊಟ್ಟೆಯ ಮೇಲ್ಭಾಗದಲ್ಲಿ ಆಗಾಗ್ಗೆ ಉರಿಯುತ್ತದೆ. ಬೆಳಗಿನ ಸಮಯ ಹೊಟ್ಟೆ ಹಸಿವಾದಂತೆ, ಹಾಗೆಯೇ ಹೊಟ್ಟೆ ಉರಿಯುವ ಅನುಭವ. ಬೆನ್ನಿನ ಕೆಳಭಾಗದಿಂದ ಮೇಲ್ಭಾಗಕ್ಕೆ ಆಗಾಗ್ಗೆ ಶಾಖ ಹರಿದಂಥ ಅನುಭವವಾಗುತ್ತದೆ. ಇದು ಹೊಟ್ಟೆಯಲ್ಲಿನ ಯಾವುದೇ ಅಂಗದ ವೈಫಲ್ಯವೇ?
ಪತ್ರ ನೋಡಿ ಉಪಶಮನ ಹೇಳುವುದು ಕಷ್ಟ. ಉತ್ತಮ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಒಳ್ಳೆಯದು. ಆದರೆ ಒಂದು ಸಣ್ಣ ಮನೆ ಮದ್ದು ಹೇಳುತ್ತೇನೆ. ಹಸಿ ಬಾಳೆಕಾಯಿ ತುಂಡು ಮಾಡಿ ಅರ್ಧ ಇಂಚು ದಪ್ಪದ 4 ತುಂಡುಗಳನ್ನು ದಿನಕ್ಕೆ 3 ಸಲ ತಿನ್ನಿರಿ. ಖಾರ, ಹುಳಿ ಸ್ವಲ್ಪ ಕಡಿಮೆ ಮಾಡಿ.
ಪುರುಷ, ಹೆಸರು, ಊರು ಬೇಡ
* ವಯಸ್ಸು 95. ಕರುಳಿನ ವಾಯು ಅಥವಾ ಗ್ಯಾಸ್ ಹೋದಲ್ಲಿ ಶರೀರಕ್ಕೆ, ವಯಸ್ಸಿಗೆ ತಕ್ಕದ್ದು ಎಂದು ಹಿಂದೆ ಹೇಳಿದ್ದಿರಿ. ಆದರೆ ಇದಕ್ಕೆ ಏನಾದರೂ ಮಿತಿ ಉಂಟೇ? ನನಗೆ ದಿನಕ್ಕೆ 12- 15 ಸಲ ವಾಯು ಹೊರ ಹೋಗುತ್ತದೆ. ಒಮ್ಮಮ್ಮೆ ತಾಸಿಗೆ ಮೂರು ಸಲ. ಹೀಗಾದರೆ ಹೇಗೆ ತಾಳಬೇಕು? ಜೀವನ ಬೇಸರವಾಗಿದೆ. ಪರಿಹಾರ ತಿಳಿಸಿ.
ಕರುಳಿನ ವಾಯು ಜೀವನದ ಒಂದು ಅಂಶ. ಇದು ಹೊರಗೆ ಹೋಗದಿದ್ದರೆ ನಿಮ್ಮ ಆರೋಗ್ಯ ಸಮತೋಲನದಲ್ಲಿರುವುದು ಕಷ್ಟ. ನಿಮ್ಮ ವಯಸ್ಸಿಗೆ ಇದುಸಹಜ ಕ್ರಿಯೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.