ADVERTISEMENT

ಏನಿದು ಕೋವಿಡ್ ನಾಲಿಗೆ?

ಡಾ.ಸ್ಮಿತಾ ಜೆ ಡಿ
Published 24 ಮಾರ್ಚ್ 2021, 9:47 IST
Last Updated 24 ಮಾರ್ಚ್ 2021, 9:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋವಿಡ್-19 ಮಹಾಮಾರಿ, ಪ್ರಪಂಚಕ್ಕೆಲಗ್ಗೆ ಇಟ್ಟು ಒಂದು ವರ್ಷ ಕಳೆದರೂ ಈ ವೈರಾಣುವಿನ ಬಗ್ಗೆ ಅದರ ಗುಣಲಕ್ಷಣಗಳ ಬಗ್ಗೆ ಅನೇಕ ಅಧ್ಯಯನಗಳು ನಡೆಯುತ್ತಿದ್ದರೂ ಸಂಪೂರ್ಣ ಮಾಹಿತಿ ಲಭ್ಯವಿಲ್ಲ.

ದಿನದಿಂದ ದಿನಕ್ಕೆ ಹೊಸ ತಿರುವುಗಳೊಂದಿಗೆ ಮಾರ್ಪಾಡುಗಳೊಂದಿಗೆ ಹೊರಹೊಮ್ಮುತ್ತಿದೆ. ಕಿಂಗ್ಸ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ ಕೋವಿಡ್-19ರ ಮುನ್ಸೂಚನೆಯ ಚಿಹ್ನೆಗಳಲ್ಲಿ ಒಂದು ಕೋವಿಡ್- ನಾಲಿಗೆ (COVID TONGUE) ಐದು ಜನ ಕೋವಿಡ್ ಸೋಂಕಿತ ವ್ಯಕ್ತಿಗಳಲ್ಲಿ ಒಬ್ಬರಿಗೆ ಈ ಚಿಹ್ನೆಯನ್ನು ಅಂದರೆ ಕೋವಿಡ್ ನಾಲಿಗೆಯನ್ನು ನೋಡಬಹುದಾಗಿದೆ.

ಏನಿದು ಕೋವಿಡ್ ನಾಲಿಗೆ?:

ADVERTISEMENT

ನಾಲಿಗೆ ಮೇಲೆಲ್ಲ ಲೇಪನ ಅಥವಾ ಪ್ಯಾಚ್‌ಗಳು ಕಾಣಿಸಿಕೊಳ್ಳುವುದು.

ಬೇರೆ ಗುಣಲಕ್ಷಣಗಳಾದ ಶೀತ, ಕೆಮ್ಮು, ಜ್ವರ ಅಥವಾ ಫ್ಲೂನಂತಹ ಲಕ್ಷಣಗಳೊಟ್ಟಿಗೆ ನಾಲಿಗೆಯ ಮೇಲೆ ಪ್ಯಾಚ್ ಕಂಡುಬಂದಲ್ಲಿ ಕೋವಿಡ್-19 ಪರೀಕ್ಷೆಗೆ ಒಳಪಡುವುದು ಅವಶ್ಯಕ.

ಕೆಲವರಲ್ಲಿ ಕೆಲವು ದಿನಗಳಲ್ಲಿ ಈ ಪ್ಯಾಚ್ ತನ್ನಿಂದ ತಾನೇ ಮಾಯವಾಗಬಹುದಾಗಿದ್ದು ಇನ್ನು ಕೆಲವರಲ್ಲಿ ತೀವ್ರತೆಗೆ ಹೋಗಬಹುದಾಗಿದೆ.

ಇದಲ್ಲದೆ ಕೆಲವರಲ್ಲಿ ಬಾಯಿಯ ಹುಣ್ಣುಗಳೂ ಸಹ ಕಾಣಿಸಿಕೊಳ್ಳಬಹುದಾಗಿದೆ.

ಈ ಸಮಯದಲ್ಲಿ ವ್ಯಕ್ತಿಗೆ ಆಹಾರದ ಪರಿಮಳ ಹಾಗೂ ರುಚಿಯನ್ನು ಸವಿಯಲು ಸಾಧ್ಯವಾಗುವುದಿಲ್ಲ.

ಕೋವಿಡ್ –19 ಗುಣಲಕ್ಷಣಗಳಾದ ಶೀತ, ಕೆಮ್ಮು, ಜ್ವರ, ಚರ್ಮದ ತುರಿಕೆ ಮುಂತಾದ ಗುಣಲಕ್ಷಣಗಳೊಂದಿಗೆ ನಾಲಿಗೆಯ ಮೇಲೆ ಲೇಪನ, ಹುಣ್ಣು, ಪ್ಯಾಚ್ ಕಂಡುಬಂದಲ್ಲಿ ಪರೀಕ್ಷೆಗೆ ಒಳಪಡುವುದು ಅವಶ್ಯಕ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮುಖಗವಸು ಧರಿಸುವುದು, ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತ್ಯವಶ್ಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.