ADVERTISEMENT

ಗರ್ಭಿಣಿಯರ ಬೆನ್ನುಮೂಳೆ ನೋವು ನಿವಾರಣೆಗೆ ಇಲ್ಲಿವೆ ಕೆಲವು ಟಿಪ್ಸ್!

ಡಾ.ಗಾಯತ್ರಿ ಡಿ ಕಾಮತ್
Published 25 ಆಗಸ್ಟ್ 2021, 6:09 IST
Last Updated 25 ಆಗಸ್ಟ್ 2021, 6:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನೀವು ತಾಯಿಯಾಗುತ್ತಿದ್ದೀರಾ? ಹಾಗಿದ್ದರೆ ನಿಮ್ಮ ದೇಹದ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ನಿಮ್ಮ ಮೊದಲ ಆದ್ಯತೆ ಆಗಿರಲಿ.

– ಡಾ. ಗಾಯತ್ರಿ ಡಿ ಕಾಮತ್

ಹೌದು, ಹೆರಿಗೆಯಾದ ಬಳಿಕ ಬಹುತೇಕ ಮಹಿಳೆಯರಲ್ಲಿ ಬೆನ್ನು ನೋವು ಸಾಮಾನ್ಯವಾಗಿ ಕೇಳಿಬರುತ್ತಿದೆ. ಇದಕ್ಕೆ ಕಾರಣ, ಮೂಳೆ ಆರೈಕೆ ಮಾಡುವಲ್ಲಿನ ನಿರ್ಲಕ್ಷ್ಯ. ಮಗು ಗರ್ಭದಲ್ಲಿ ಇರುವ ವೇಳೆ ಮಹಿಳೆಯು ಹೆಚ್ಚು ಕ್ಯಾಲ್ಸಿಯಂಯುಕ್ತ ಆಹಾರ ಸೇವನೆ ಹಾಗೂ ವಿಟಮಿನ್ ಡಿ ಸೇವನೆ ಮೂಳೆ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

ಮೂಳೆ ನೋವಿಗೆ ಕಾರಣವೇನು?:ಬದಲಾದ ಜೀವನ ಶೈಲಿಯಿಂದ ಆಹಾರ ಕ್ರಮ ಏರುಪೇರಾಗಿದೆ. ಗರ್ಭಾವಸ್ಥೆಯಲ್ಲಿ ಮಗುವಿನ ಅಸ್ಥಿಪಂಜರ ಅಭಿವೃದ್ಧಿಗಾಗಿ ಸಾಕಷ್ಟು ಕ್ಯಾಲ್ಸಿಯಂನ ಅಗತ್ಯವಿರುತ್ತದೆ, ಅದನ್ನು ಮಗು ತಾಯಿಯಿಂದಲೇ ಪಡೆಯಬೇಕು, ಗರ್ಭಿಣಿಯಾಗಿದ್ದಾಗ ಕ್ಯಾಲ್ಸಿಯಂಯುಕ್ತ ಆಹಾರ ಸೇವನೆ ಕಡಿಮೆಯಾದಲ್ಲಿ, ಮಗುವು ತಾಯಿಯ ಮೂಳೆಗಳಿಂದಲೇ ಕ್ಯಾಲ್ಸಿಯಂ ಪಡೆದುಕೊಳ್ಳುತ್ತದೆ. ಇದರಿಂದ ಹೆರಿಗೆಯಾದ ಬಳಿಕ ಮೂಳೆ ನೋವು ಕಾಣಿಸಿಕೊಳ್ಳಲಿದೆ.
ಕೆಲವು ಅಪರೂಪದ ಪ್ರಕರಣಗಳಲ್ಲಿ ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯಾದ ಒಂದೆರಡು ವಾರದಲ್ಲಿ ಸುಲಭವಾಗಿ ಮೂಳೆ ಮುರಿದು ಹೋಗುತ್ತವೆ. ಇದನ್ನು ಆಸ್ಟಿಯೊಪೊರೋಸಿಸ್ ಎಂದು ಕರೆಯಲಾಗುತ್ತದೆ. ಇಂಥ ಲಕ್ಷಣಗಳು ಕಂಡು ಬರುತ್ತಿದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

ADVERTISEMENT

ಮೂಳೆ ಆರೋಗ್ಯಕ್ಕೆ ಆದ್ಯತೆ ಕೊಡಿ: ಮೂಳೆ ಆರೋಗ್ಯ ಕಾಪಾಡಿಕೊಳ್ಳಲು ಒಂದಷ್ಟು ಆರೋಗ್ಯಕರ ಚಟುವಟಿಕೆ ಹಾಗೂ ಉತ್ತಮ ಆಹಾರ ಸೇವನೆ ಮಾಡುವುದು ಅಗತ್ಯ, ಕ್ಯಾಲ್ಸಿಯಂಯುಕ್ತ ಆಹಾರ ಸೇವನೆ ಹೆಚ್ಚಿರಲಿ, ನಿತ್ಯ ಕನಿಷ್ಠ 1000 ಮಿಲಿ ಗ್ರಾಂನಷ್ಟು ಕ್ಯಾಲ್ಸಿಯಂ ಸೇವನೆ ಅಗತ್ಯ ಎಂದು ಅಧ್ಯಯನ ಹೇಳುತ್ತದೆ. ಖನಿಜಯುಕ್ತ ಆಹಾರ, ವಿಟಮಿನ್ ಇರುವ ಆಹಾರ ಸೇವನೆ ಮಾಡಿ. ಮೂಳೆ ಬಲಿಷ್ಠವಾಗುವಂಥ ವ್ಯಾಯಾಮ ಅಥವಾ ಯೋಗ ಮಾಡುವುದು ಒಳ್ಳೆಯದು.

ಆಹಾರ ಕ್ರಮ ಹೀಗಿರಲಿ: ಹಾಲು, ಮೊಸರು, ಚೀಸ್, ಐಸ್‌ಕ್ರೀಂ ಹಾಗೂ ಕಡಿಮೆ ಕೊಬ್ಬಿನಾಂಶಯುಕ್ತ ಆಹಾರ ಸೇವನೆ ಮಿತಿಯಲ್ಲಿರಲಿ.. ಕಿತ್ತಳೆ ರಸ, ಸಿರಿಧಾನ್ಯ, ಕಡು ಹಸಿರು ಸೊಪ್ಪು, ತರಕಾರಿ, ಬ್ರೋಕ್ಲಿ, ಮೋರಿಂಗಾ ಎಲೆಗಳ ಸೇವನೆ ಹೆಚ್ಚು ಉಪಯುಕ್ತಕಾರಿ.
ಆರೋಗ್ಯಕರ ಜೀವನ ಶೈಲಿ ಇರಲಿ: ಬೆನ್ನು ನೋವಿನಿಂದ ತಪ್ಪಿಸಿಕೊಳ್ಳಲು ಆರೋಗ್ಯಕರ ಜೀವನ ಶೈಲಿ ಹೊಂದಿರುವುದು ಬಹಳ ಮುಖ್ಯ, ಮದ್ಯಪಾನ, ಧೂಮಪಾನ ತ್ಯಜಿಸುವುದು ಒಳ್ಳೆಯದು.

– ಡಾ. ಗಾಯತ್ರಿ ಡಿ ಕಾಮತ್, ಹಿರಿಯ ಸಲಹೆಗಾರ್ತಿ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಫೋರ್ಟಿಸ್ ಆಸ್ಪತ್ರೆ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.